ಮುಂದಿನ ವಾರ ಬರಲಿದೆ ಸೂಜಿ-ಮುಕ್ತ ಲಸಿಕೆ ZyCoV-D
ದೇಶದ ಮೊದಲ ಸೂಜಿ ಮುಕ್ತ ಲಸಿಕೆ ಮಾರುಕಟ್ಟೆಗೆ ಬರಲು ಸಿದ್ದವಾಗಿದೆ. ದೇಶದ ಮೊದಲ ಸೂಜಿ-ಮುಕ್ತ ZyCoV-D ಲಸಿಕೆಯನ್ನು ಮುಂದಿನ ವಾರ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಪರಿಚಯಿಸಬಹುದು ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
“ZyCoV-D ಸೂಜಿ-ಮುಕ್ತ ಲಸಿಕೆ ನೀಡುವ ಬಗ್ಗೆ ಲಸಿಕೆದಾರರ ತರಬೇತಿಯು ಬಹುತೇಕ ಪೂರ್ಣಗೊಂಡಿದೆ ಮತ್ತು ಮುಂದಿನ ವಾರದ ವೇಳೆಗೆ ಲಸಿಕೆಯನ್ನು ಪರಿಚಯಿಸಬಹುದು” ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಹಿಂದುಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.
ZyCoV-D ವಿಶ್ವದ ಮೊದಲ DNA ಆಧಾರಿತ ಸೂಜಿ-ಮುಕ್ತ ಕೋವಿಡ್-19 ಲಸಿಕೆಯಾಗಿದ್ದು, 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ. ಆದಾಗ್ಯೂ, ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಯಾವುದೇ ನಿರ್ಧಾರಗಳಿಲ್ಲದ ಕಾರಣ, ಕೇಂದ್ರ ಸರ್ಕಾರವು ಮೊದಲು ವಯಸ್ಕರಿಗೆ ಲಸಿಕೆಯನ್ನು ಬಳಸಲು ನಿರ್ಧರಿಸಿದೆ
ಝೈಡಸ್ ಕ್ಯಾಡಿಲಾ ಕಂಪನಿಯ ಈ ಲಸಿಕೆ ಇನ್ನೂ, ರಾಷ್ಟ್ರೀಯ ವ್ಯಾಕ್ಸಿನೇಷನ್ ಡ್ರೈವ್‌ನ ಭಾಗವಾಗಿರುವುದಿಲ್ಲ ಎನ್ನಲಾಗಿದೆ. ZyCoV-D ಸೂಜಿ- ರಹಿತ ಲಸಿಕೆ ಆಗಿದ್ದು, ಇದನ್ನು ಸಾಂಪ್ರದಾಯಿಕ ಸಿರಿಂಜ್‌ಗಳ ಬದಲಿಗೆ ಸೂಜಿ-ಮುಕ್ತ ಲೇಪಕವನ್ನು ಬಳಸಿ ನಿರ್ವಹಿಸಲಾಗುತ್ತದೆ. ಇದು 3-ಡೋಸ್ ಲಸಿಕೆಯಾಗಿದೆ, ಇದರ ಎರಡನೇ ಮತ್ತು ಮೂರನೇ ಡೋಸ್‌ಗಳನ್ನು ಮೊದಲನೆ ಲಸಿಕೆ ಪಡೆದುಕೊಂಡ 28 ಮತ್ತು 56 ದಿನಗಳ ನಂತರ ತೆಗೆದುಕೊಳ್ಳಬೇಕು. ವರದಿಗಳ ಪ್ರಕಾರ, ಲಸಿಕೆಯ ಸಿಂಗಲ್ ಡೋಸ್ ಅನ್ನು ಜೆಟ್ ಅಪ್ಲಿಕೇಟರ್ ಮತ್ತು ಜಿಎಸ್‌ಟಿ ವೆಚ್ಚ ಒಳಗೊಂಡಂತೆ 376 ರೂ. ಆಗಿದೆ. 3-ಡೋಸ್ ಲಸಿಕೆಯ ಬೆಲೆ 1,128 ರೂ.ವರೆಗೆ ತೆಗೆದುಕೊಂಡು ಹೋಗುತ್ತದೆ.
ಇದು ಹದಿಹರೆಯದ ಜನಸಂಖ್ಯೆಯಲ್ಲಿ (12-18 ವರ್ಷಗಳು) ಪರೀಕ್ಷಿಸಲ್ಪಟ್ಟ ದೇಶದ ಮೊದಲ ಲಸಿಕೆಯಾಗಿದೆ. ZyCoV-D ಲಸಿಕೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಹಂತ 3 ಕ್ಲಿನಿಕಲ್ ಪ್ರಯೋಗಗಳಲ್ಲಿ 66.66% ಪ್ರಾಥಮಿಕ ಪರಿಣಾಮಕಾರಿತ್ವವನ್ನು ತೋರಿಸುತ್ತದೆ. ಈ ಲಸಿಕೆ 3 ತಿಂಗಳ ಕಾಲ ಕೋಣೆಯ ಉಷ್ಣಾಂಶದಲ್ಲಿ ಸ್ಥಿರವಾಗಿರುತ್ತದೆ. ಇದು ಅಲ್ಟ್ರಾ-ಕೋಲ್ಡ್ ಸ್ಟೋರೇಜ್ ಸಿಸ್ಟಮ್‌ಗಳ ಅಗತ್ಯವಿರುವ mRNA ಲಸಿಕೆಗಳಿಗಿಂತ ಭಿನ್ನವಾಗಿರುತ್ತದೆ.
ಕಂಪನಿಯ ಪ್ರಕಾರ ಕೇಂದ್ರವು 10 ಮಿಲಿಯನ್ ಲಸಿಕೆ ಡೋಸ್‌ಗಳನ್ನು ಪ್ರತಿ ಡೋಸ್‌ಗೆ 265 ರಂತೆ ಆರ್ಡರ್ ಮಾಡಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ಸೂಜಿ-ಮುಕ್ತ ಲಸಿಕೆ ಅಪ್ಲಿಕೇಶನ್‌ನ ವೆಚ್ಚಕ್ಕೆ 93 ರೂಪಾಯಿಯಂತೆ ವಿಧಿಸಲಾಗುತ್ತದೆ. ಸರಬರಾಜುಗಳನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಕೋವಾಕ್ಸಿನ್ ಹೊರತುಪಡಿಸಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯಾದ ZyCoV-D ಅನ್ನು ಆರಂಭದಲ್ಲಿ ದೇಶದಾದ್ಯಂತ ಕಡಿಮೆ ಡೋಸ್ ವ್ಯಾಪ್ತಿಯನ್ನು ಹೊಂದಿರುವ ಏಳು ರಾಜ್ಯಗಳ ಜಿಲ್ಲೆಗಳಲ್ಲಿ ಬಳಸಲಾಗುವುದು ಎಂದು ಹೇಳಲಾಗುತ್ತಿದೆ. ಏಳು ರಾಜ್ಯಗಳೆಂದರೆ ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳವಿದೆ.
ಆಗಸ್ಟ್ 20 ರಂದು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ZyCoV-D ಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿತು. ಆದರೆ ಅದನ್ನು ಇನ್ನೂ ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ಸೇರಿಸಲಾಗಿಲ್ಲ. ಒಮ್ಮೆ ಹೊರಬಂದ ನಂತರ, ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಜೊತೆಗೆ ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಬಳಸಲಾಗುವ ಮೂರನೇ ಲಸಿಕೆ ZyCoV-D ಆಗಲಿದೆ. ಡಿಸೆಂಬರ್ 16 ರವರೆಗೆ ಅರ್ಹ ಜನಸಂಖ್ಯೆಯ 87.5% ರಷ್ಟು ಜನರು Covid-19 ಲಸಿಕೆಯ ಕನಿಷ್ಠ ಒಂದು ಡೋಸ್ ಅನ್ನು ಪಡೆದಿದ್ದಾರೆ ಮತ್ತು 57.1% ರಷ್ಟು ಜನ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ.