ಸಿನಿಮಾ

ಸಿನಿಮಾರಂಗಕ್ಕೆ ಬಂದ ಡಾಲಿ ಧನಂಜಯ್​ ಸಾಗಿ ಬಂದ ಹಾದಿ ಸುಲಭದಲ್ಲ!

ಅರಸೀಕೆರೆ ತಾಲ್ಲೂಕಿನ ಪುಟ್ಟ ಗ್ರಾಮದ ಯುವಕ ಚಿಕ್ಕಂದಿನಿಂದಲೇ ಸಿನಿಮಾ ಕನಸು ಕಂಡ.. ಇಂಜಿನಿಯರಿಂಗ್​ ಮುಗಿಸಿ ಕೈ ತುಂಬ ಸಂಬಳದ ಕೆಲಸವನ್ನ ಬಿಟ್ಟು, ಸಿನಿಮಾರಂಗದಲ್ಲಿ ಏನಾದ್ರು ಸಾಧಿಸ್ತಿನಿ ಅನ್ನೋ ನಂಬಿಕೆಯಿಂದ ಚಿತ್ರರಂಗಕ್ಕೆ ಕಾಲಿಟ್ಟ.. ಆದ್ರೆ ಅವರ ಪ್ರತಿ ಹೆಜ್ಜೆಯಲ್ಲೂ ನಂಬಿಕೆ ಸುಳ್ಳಾಗ್ತಾ ಹೋಗುತ್ತೆ.. ಸಾಲು ಸಾಲು ಸೋಲುಗಳು ಎದುರಾಗುತ್ತವೆ.. ಚಿತ್ರರಂಗದ ಕೆಲವರು ಹೀಯಾಳಿಸ್ತಾರೆ, ಅಪಮಾನಿಸ್ತಾರೆ.. ಅವಮಾನಿಸ್ತಾರೆ.. ಆದ್ರೆ ಗೆಲ್ಲಬೇಕು ಎನ್ನುವ ಹಠ, ಪ್ರಯತ್ನ ನಿಲ್ಲೋದಿಲ್ಲ.. ಆ ಸಮಯದಲ್ಲಿ ಇವರ ಗೆಲುವಿಗೆ ಸಾಕ್ಷಿಯಾಗಿದ್ದೇ ಡಾಲಿ.. ಆ ಒಂದು ಗೆಲುವು ಇವರ ಬದುಕನ್ನೇ ಬದಲಿಸುತ್ತೆ.. ಅಲ್ಲಿಂದ ಎಲ್ಲವೂ ಬದಲಾಗುತ್ತೆ.. ಧನಂಜಯ್ ಎನ್ನುವ ವ್ಯಕ್ತಿತ್ವ ಮಾತ್ರ ಹಾಗೆಯೇ ಉಳಿದಿದೆ.. ಇಂದು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗವೇ ಡಾಲಿ ಧನಂಜಯ್​ ಬಗ್ಗೆ ಮಾತನಾಡ್ತಾ ಇದೆ.. ಯಾಕಂದ್ರೆ, ಧನಂಜಯ್​ ಕೇವಲ ನಟರಷ್ಟೇ ಅಲ್ಲ.. ಸಾಮಾಜಿಕ ಜವಾಬ್ದಾರಿಯುಳ್ಳ ವ್ಯಕ್ತಿತ್ವ ಅವರದ್ದು.

Related Articles

Leave a Reply

Your email address will not be published. Required fields are marked *

Back to top button