ಇತ್ತೀಚಿನ ಸುದ್ದಿ
ಲಸಿಕೆ ಪಡೆಯಲು ಹಿಂಜರಿಕೆಬೇಡ : ಸಾಲುಮರದ ತಿಮ್ಮಕ್ಕ..
ಬೇಲೂರು, ಡಿ.10- ಪದ್ಮಶ್ರೀ ಪ್ರಶಸ್ತಿ ಪುರಸ್ಕøತೆ ಸಾಲು ಮರದ ಡಾ.ತಿಮ್ಮಕ್ಕ ತಾಲೂಕಿನ ತಮ್ಮ ದತ್ತು ಪುತ್ರ ಬಳ್ಳೂರು ಗ್ರಾಮದ ಉಮೇಶ್ ನಿವಾಸದಲ್ಲಿ ಕೋವಿಶೀಲ್ಡ್ ಎರಡನೆ ಲಸಿಕೆ ಪಡೆದರು. ಸಾಲು ಮರದ ಡಾ.ತಿಮ್ಮಕ್ಕ ಮಾತನಾಡಿ, ಪ್ರಕೃತಿ ಮುನಿದ ಕಾರಣದಿಂದ ವಿವಿಧ ರೋಗಗಳು ಹುಟ್ಟಿಕೊಂಡು ಮನುಷ್ಯನ ಬದುಕನ್ನೇ ನಾಶ ಪಡಿಸುತ್ತಿವೆ.
ಆದ್ದರಿಂದ ನಾವುಗಳು ಪರಿಸರ ಮತ್ತು ನಮ್ಮ ಸುತ್ತಮುತ್ತಲಿನ ಪಕೃತಿಯನ್ನುಕಾಪಾಡಿಕೊಂಡು ಮುನ್ನಡೆಯಬೇಕಿದೆ. ಅಲ್ಲದೆ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತಿದ್ದಾರೆ. ಆದರೆ ಕೋವಿಡ್ ಲಸಿಕೆ ಪಡೆಯಲು ಯಾವುದೇ ಹಿಂಜರಿಕೆ ಬೇಡ. ಎಲ್ಲರೂ ಲಸಿಕೆ ಹಾಕಿಸಿಕೊಂಡು ತಮ್ಮಆರೋಗ್ಯಕಾಪಾಡಿ ಕೊಳ್ಳಲು ಮುಂದಾಗಬೇಕು ಎಂದರು.
ಸಾಲು ಮರದ ತಿಮ್ಮಕ್ಕರ ದತ್ತುಪುತ್ರ ಬಳ್ಳೂರು ಉಮೇಶ್ ಮಾತನಾಡಿ, ಈಗಾಗಲೆ ಓಮಿಕ್ರಾನ್ ಎಂಬ ಮಹಾಮಾರಿ ಮೂರನೇ ಅಲೇ ರೂಪದಲ್ಲಿ ಜಗತ್ತನ್ನು ತಲ್ಲಣ ಗೊಳಿಸುತ್ತಿದೆ. ಮುಂಜಾಗೃತೆಯಿಂzಕೋವಿಡ್ ಲಸಿಕೆ ಪಡೆಯುವುದು ಉತ್ತಮ ಎಂದರು.