ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತೆ ಅಪ್ಪು ಡ್ರೀಮ್..!
ನಟ ಪುನೀತ್ ರಾಜ್ಕುಮಾರ್(Puneeth Rajkumar) ನಮ್ಮ ಜೊತೆ ಇಲ್ಲ ಎಂಬ ನೋವನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರ ಬಿಟ್ಟು ಹೋದಾಗಿನಿಂದಲೂ ಇಡೀ ಕರುನಾಡು ಮರುಕಪಡುತ್ತಿದೆ. ಇಂದಿಗೂ ಆ ಶಾಕ್(Shock)ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕೆಲ ದಿನಗಳ ಹಿಂದೆ ಅಪ್ಪು ಅವರ ಕನಸನ್ನು ನನಸು ಮಾಡುವುದಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಹೇಳಿದ್ದರು. ನನಸಾಗುವ ಸಮಯ ಬಂದಿದೆ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್(Dream Project) ಟೈಟಲ್(Title) ಹಾಗೂ ಟೀಸರ್(Teaser) ಬಿಡುಗಡೆಯಾಗಿದೆ. ಅಪ್ಪು ಪ್ರೀತಿಯಿಂದ ಮಾಡಿದ್ದ ಈ ಡಾಕ್ಯುಮೆಂಟ್ಗೆ ಗಂಧದಗುಡಿ(Gandhada Gudi) ಎಂದು ಹೆಸರಡಿಲಾಗಿದೆ. ಕರ್ನಾಟಕದ ಕಾಡು, ಮೇಡು ಅಲೆದು ಅಪ್ಪು ಈ ಡಾಕ್ಯುಮೆಂಟ್ ಮಾಡಿದ್ದಾರೆ. ಬಹುದೊಡ್ಡ ಕನಸಿನೊಂದಿಗೆ ಅಪ್ಪು ರೂಪಿಸಿರೋ ವೈಲ್ಡ್ ಲೈಫ್ ಜಗತ್ತಿನ ಕಥೆಯ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಫಿಆರ್ಕೆ ಯೂಟ್ಯೂಬ್ ಚಾನೆಲ್ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಈ ಟೀಸರ್ ನೋಡಿದ ಫ್ಯಾನ್ಸ್ ಅಪ್ಪು ನಮ್ಮ ಜೊತೆಯೆ ಇದ್ದಾರೆ ಎಂದು ಕಣ್ಣೀರಿಡುತ್ತಿದ್ದಾರೆ. ಇನ್ನೂ ಈ ಡಾಕ್ಯುಮೆಂಟ್ ಚಿತ್ರವನ್ನು ಖ್ಯಾತ ವೈಲ್ಡ್ ಲೈಫ್ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶನ ಮಾಡಿದ್ದಾರೆ. ಈ ಡಾಕ್ಯುಮೆಂಟ್ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಮೊದಲ ಬಾರಿಗೆ ಈ ರೀತಿಯ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಬಹಳ ವಿಶೇಷ..
ಈ ಗಂಧದ ಗುಡಿ ಟೀಸರ್ ನೋಡಿ ಅಪ್ಪು ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅದ್ಭುತ ಚಿತ್ರವನ್ನು ನಮಗೆ ನೀಡಿ, ನೀವೇ ದೂರವಾಗಿದ್ದೀರ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಟೀಸರ್ನಲ್ಲಿ ಹಿಂದೆಂದೂ ಕಾಣಿಸಿದ ರೀತಿಯಲ್ಲಿ ಅಪ್ಪು ಕಾಣಿಸಿಕೊಂಡಿದ್ದಾರೆ. ಡಾಕ್ಯುಮೆಂಟ್ ಆಗಿದ್ದರೂ, ಕಮರ್ಷಿಯಲ್ ಸಿನಿಮಾ ರೀತಿ ಶೂಟಿಂಗ್ ಮಾಡಲಾಗಿದೆ. ಟೀಸರ್ ಕಡೆಯಲ್ಲಿ ಅಣ್ಣಾವ್ರ ಕಾಡು ಉಳಿಸಿ, ಪ್ರಾಣಿ ಸಂರಕ್ಷಿಸಿ ಅನ್ನುವ ಗಂಧದ ಗುಡಿ ಡೈಲಾಗ್ ಕೇಳಿಸುತ್ತೆ.
ಕರ್ನಾಟಕದ ಅರಣ್ಯಗಳನ್ನೆಲ್ಲಾ ಸುತ್ತಿದ್ದ ಅಪ್ಪು
ವೈಲ್ಡ್ ಲೈಫ್ ಡಾಕ್ಯುಮೆಂಟ್ ಶೂಟಿಂಗ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕಾಡು, ಮೇಡು ಅಲೆದು ಅನ್ನ, ನೀರು ಸರಿಯಾಗಿ ಸಿಗದೆ ಶ್ರಮ ಹಾಕಬೇಕು. ಇಂತಹ ಸಾಹಸಕ್ಕೆ ಪವರ್ ಸ್ಟಾರ್ ಅಪ್ಪು ಲಾಕ್ಡೌನ್ ಸಮಯದಲ್ಲಿ ಕೈ ಹಾಕಿದ್ದರು. ಕರ್ನಾಟಕದ ಪ್ರಸಿದ್ಧ ಅರಣ್ಯಗಳನ್ನೆಲ್ಲಾ ಅಪ್ಪು ಸುತ್ತಿದ್ರು. ಕರ್ನಾಟಕದ ಸೌಂದರ್ಯವನ್ನು ಈ ಡಾಕ್ಯುಮೆಂಟ್ನಲ್ಲಿ ತೋರಿಸಲಾಗಿದೆ. ಹೀಗಾಗಿ ಇದಕ್ಕೆ ಗಂಧದ ಗುಡಿ ಎಂದು ಹೆಸರಿಡಲಾಗಿದೆ.
ಡಾ.ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಅವರು ಕೂಡ ಗಂಧದಗುಡಿ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಅಣ್ಣಾವ್ರ ಗಂಧದಗುಡಿ ಸಿನಿಮಾ ದಾಖಲೆ ಸೃಷ್ಟಿಸಿತ್ತು. ಶಿವಣ್ಣ ಅವರ ಗಂಧದ ಗುಡಿ ಸಾಕಷ್ಟು ಹೆಸರು ಮಾಡಿತ್ತು. ಇದೀಗ ಅದೇ ಹೆಸರಿನಲ್ಲಿ ಅಪ್ಪು ಅವರ ಡಾಕ್ಯುಮೆಂಟರಿ ಚಿತ್ರ ಸಿದ್ಧವಾಗಿದೆ.‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಅಂತ ಪುನೀತ್ ಟ್ವೀಟ್ ಮಾಡಿದ್ದರು. ಈ ಡಾಕ್ಯುಮೆಂಟರಿ ಟೀಸರ್ ನವೆಂಬರ್ 1ರಂದು ರಿಲೀಸ್ ಆಗಬೇಕಿತ್ತು. ಆದ್ರೆ, ಅದಕ್ಕೂ 3 ದಿನ ಮುನ್ನ ಅಪ್ಪು ಬಾರದ ಲೋಕಕ್ಕೆ ಹೊರಟುಬಿಟ್ಟರು.
ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತೆ `ಗಂಧದ ಗುಡಿ’
ಸಾಮನ್ಯವಾಗಿ ಡಾಕ್ಯುಮೆಂಟ್ ಸಿನಿಮಾಗಳನ್ನು ಥಿಯೇಟರ್ನಲ್ಲಿ ರಿಲೀಸ್ ಮಾಡುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್ ಆಗಲಿದೆ. 2020ಕ್ಕೆ ಈ ಸಿನಿಮಾ ತೆರೆಕಾಣಲಿದೆ. ಅಪ್ಪು ಅವರನ್ನು ಮತ್ತೆ ತೆರೆ ಮೇಲೆ ನೋಡುವ ಭಾಗ್ಯ ಸಿಕ್ಕಿದೆ.