BBMP ಕಸದ ವಿರುದ್ಧ ಹೋರಾಟಕ್ಕಿಳಿದ್ದಿದ್ದ ಮುಖಂಡರ ಬಂಧನ..
ದೊಡ್ಡಬಳ್ಳಾಪುರ: ಬಿಬಿಎಂಪಿ ಕಸದ ವಿರುದ್ಧ ಕಳೆದ 12 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಹೋರಾಟವನ್ನ ಹಂತ ಹಂತವಾಗಿ ಹತ್ತಿಕ್ಕುವ ಪ್ರಯತ್ನದಲ್ಲಿರುವ ಪೊಲೀಸರು ಹೋರಾಟದ ನೇತೃತ್ವ ವಹಿಸಿದ್ದ ಸಾರಥಿ ಸತ್ಯಪ್ರಕಾಶ್, ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದಲಿಂಗಯ್ಯರವರನ್ನ ವಶಕ್ಕೆ ಪಡೆದಿದ್ದಾರೆ. 50ಕ್ಕೂ ಹೆಚ್ಚು ಹೋರಾಟಗಾರರನ್ನು ಬೆಳಗ್ಗೆ ಬಂಧಿಸಿ ಸಂಜೆ ಶಾಂತಿಯುತ ಹೋರಾಟಕ್ಕೆ ಅನುಮತಿ ನೀಡಿ ಕಳುಹಿಸಿದ್ದರು. ಅಂತೆಯೇ ಇಂದು ಬೆಳಗ್ಗೆ ಪ್ರತಿಭಟನಾ ಸ್ಥಳಕ್ಕೆ ಪ್ರತಿಭಟನಾಕಾರರು ಬರುತ್ತಿದ್ದಂತೆಯೇ ಬಂಧಿಸಿದ್ದಾರೆ. ತಾಲೂಕಿನ ಚಿಗರೇನಹಳ್ಳಿಯಲ್ಲಿ ಎಂಎಸ್ ಜೆಪಿ ಘಟಕದಲ್ಲಿ ಬಿಬಿಎಂಪಿ ಕಸವನ್ನ ಸುರಿಯಲಾಗುತ್ತಿದ್ದು, ಕಸದಿಂದ ರೋಸಿ ಹೋಗಿರುವ 4 ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಧರಣಿ ನಡೆಸುತ್ತಿದ್ದಾರೆ, ಹೋರಾಟ 12 ದಿನಕ್ಕೆ ಇಳಿದಿದ್ದು, ನಿನ್ನೆ ಪ್ರತಿಭಟನಾ ಸ್ಥಳಕ್ಕೆ ಬಂದ 300 ಪೊಲೀಸರು 50 ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ರಾಜಾನುಕುಂಟೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಇಟ್ಟು, ಒಮಿಕ್ರಾನ್ ವೈರಸ್ ನೆಪ ಹೇಳಿ ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಿ ಹೋರಾಟಗಾರರನ್ನು ಕಳುಹಿಸಿದರು. ಎಂಎಸ್‌ಜೆಪಿ ಘಟಕವನ್ನು ಮುಚ್ಚುವವರೆಗೂ ಹೋರಾಟದಿಂದ ಹಿಂದೆ ಸರಿಯುತ್ತಿಲ್ಲವೆಂದು ಇಂದು ಬೆಳಗ್ಗೆ ತಣ್ಣೀರಹಳ್ಳಿಯಲ್ಲಿ ಧರಣಿ ಮುಂದುವರೆಸಲಾಗಿತು, ಧರಣಿ ಸ್ಥಳಕ್ಕೆ ಬಂದ ಭಕ್ತರಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿದ್ದಲಿಂಗಯ್ಯನವರನ್ನ ಬಂಧಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾರೆ, ಪೊಲೀಸ್ ಅಧಿಕಾರಿಗಳನ್ನ ವಿಚಾರಿಸಿದರೆ ಸಿದ್ದಲಿಂಗಯ್ಯ ಎಲ್ಲಿದ್ದಾರೆಂಬ ಮಾಹಿತಿ ನೀಡುತ್ತಿಲ್ಲ, ಪೊಲೀಸ್ ಅಧಿಕಾರಿಗಳನ್ನ ಭೇಟಿ ಮಾಡಿ ಸಿದ್ದಲಿಂಗಯ್ಯವರ ಬಗ್ಗೆ ಮಾಹಿತಿ ಕೇಳಲು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಸಾರಥಿ ಸತ್ಯ ಪ್ರಕಾಶ್ ಬಂದಿದ್ದಾರೆ, ಬಲವಂತದಿಂದ ಸಾರಥಿ ಸತ್ಯ ಪ್ರಕಾಶ್ ಮತ್ತು ಜಿ.ಎನ್ .ಪ್ರದೀಪ್ ಅವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.