ಗಡ್ಡದಾರಿಗಳಿಗೆ ಯಶ್ ಅವರೇ ಬಾಸ್: ನ್ಯೂ ಗೆಟಪ್
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಈಗ ಸ್ಟೈಲ್ ಐಕಾನ್. ಕೆಜಿಎಫ್ ಚಿತ್ರದ ಮೂಲಕ ಶುರುವಾಗಿ ಯಶ್ ಹೊಸ ಗಡ್ಡದ ಲುಕ್ ಈಗ ಗಡ್ಡದಾರಿಗಳಿಗೆ ರೋಲ್ ಮಾಡೆಲ್. ಯಶ್ ಗಡ್ಡ ನೋಡಿಯೇ ಬಹುತೇಕ ಬ್ರ್ಯಾಂಡ್‌ಗಳು ಮಾಡಲ್ ಆಗುವಂತೆ ಸಂಪರ್ಕಿಸುತ್ತಿವೆ. ಕೆಲವು ದಿನಗಳ ಹಿಂದೆ ಯಶ್ ಇನ್‌ಸ್ಟಾಗ್ರಾಂನಲ್ಲಿ ಗಡ್ಡ ಮತ್ತು ಕೂದಲ ಆರೈಕೆ ಮಾಡುವ ಬ್ರ್ಯಾಂಡ್ ಜಾಹೀರಾತು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯಶ್ ತುಂಬಾನೇ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹೀರಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸ್ವತಃ ರಾಕಿ ಭಾಯ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಜಾಹೀರಾತಿನ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಕೆಜಿಎಫ್-2 ರಿಲೀಸ್ ಆಗೋವರೆಗೂ ಗಡ್ಡ ತೆಗೆಯಲ್ಲ ಅಂತಿದ್ದಾರೆ ಫ್ಯಾನ್ಸ್
ಇನ್ನೂ ಈ ವಿಡಿಯೋ ನೋಡಿ ಎಲ್ಲರೂ ಥ್ರಿಲ್ ಆಗಿದ್ದಾರೆ. ಏನ್ ಖದರ್ ಲುಕ್ ಗುರೂ ನಾವು ಹೀಗೆ ಗಡ್ಡ ಬಿಡಬೇಕು ಅಂತ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ವಿಡಿಯೋ ಶೇರ್ ಮಾಡುತ್ತಿದ್ದಾರೆ. ಇನ್ನೂ ಮತ್ತೊಬ್ಬ ಅಭಿಮಾನಿ ಕೆಜಿಎಫ್-1 ರಿಲೀಸ್ ಆದಾಗ ಗಡ್ಡ ಬಿಡಲು ಶುರುಮಾಡಿದೆ. ಕೆಜಿಎಫ್ 2 ರಿಲೀಸ್ ಆಗುವವರೆಗೂ ಗಡ್ಡ ತೆಗೆಯಲ್ಲ ಅಂತ ಕಮೆಂಟ್ ಮಾಡಿದ್ದಾನೆ. ಯಶ್ ಅವರ ಹೊಸ ಜಾಹೀರಾತು ಕಂಡು ಫ್ಯಾನ್ಸ್ ಸಖತ್ಖುಷ್ ಆಗಿದ್ದಾರೆ. ಇನ್ನೂ ಹುಡುಗಿಯರಂತೂ ಸಿಕ್ಕರೆ ಇಂಥ ಲುಕ್ ಇರುವ ಗಂಡನೇ ಸಿಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಏಪ್ರಿಲ್ 14ಕ್ಕೆ ತೆರೆ ಮೇಲೆ ಕೆಜಿಎಫ್-2
ಕೆಜಿಎಫ್ ಸಿನಿಮಾ ಸೃಷ್ಟಿಸಿದ ಹವಾ ಎಲ್ಲರಿಗೂ ಗೊತ್ತೇ ಇದೆ. ಬೇರೆ ದೇಶಗಳು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಸಿನಿಮಾ ಮಾಡಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಇದೀಗ ಕೆಜಿಎಫ್ 2 ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಜನ ಕಾದು ಕೂತಿದ್ದಾರೆ. ಈಗಾಗಲೇ ಕೆಜಿಎಫ್ 2 ಸಿನಿಮಾ ಟ್ರೈಲರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಏಪ್ರಿಲ್ 14 ಯಾವಾಗ ಆಗುತ್ತೆ ಅಂತ ಉಗುರು ಕಚ್ಚಿಕೊಂಡು ಕಾಯುತ್ತಿದ್ದಾರೆ.