ಮೋದಿ-ದೇವೇಗೌಡರ ಭೇಟಿ ರಾಷ್ಟ್ರದ ರಾಜಕಾರಣಿಗಳಿಗೆ ಮಾದರಿ..
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಹೆಚ್.ಡಿ.ದೇವೇಗೌಡರ ಭೇಟಿ ರಾಷ್ಟ್ರದ ರಾಜಕಾರಣಿಗಳಿಗೆ ಮಾದರಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರು, ಹಿಂದುಳಿದವರು ಕಾಂಗ್ರೆಸ್ ಅನ್ನು ದೂರ ಮಾಡಿದ್ದಾರೆ. ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಎನ್ನುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಹಿಂದುಳಿದವರು, ದಲಿತರು ನಮ್ಮ ಜೊತೆ ಬರುತ್ತಿದ್ದಾರೆ. ಪ್ರಧಾನಿಗಳು ದೇವೇಗೌಡರಿಗೆ ನೀಡಿದ ಗೌರವವನ್ನು ಸಿದ್ದರಾಮಯ್ಯ ನೋಡಿರಬೇಕು.
ಸಿದ್ದರಾಮಯ್ಯ ಅವರು ಇದನ್ನು ನೋಡಿ ಕಲಿಯಬೇಕಿದೆ. ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲಿ ಕರೆಯುತ್ತಾರೆ.ಹೀಗಾಗಿ, ಅವರಿಗೆ ಅದೇ ರೀತಿಯಲ್ಲಿ ನಾವು ಉತ್ತರ ಕೊಡುತ್ತಿದ್ದೇವೆ.
ಜಾತಿ ಜನಗಣತಿಗೆ ಕಾರ್ಯದರ್ಶಿಯೇ ಸಹಿ ಮಾಡಿಲ್ಲ. ಸಹಿ ಮಾಡಿಲ್ಲ ಅಂದರೆ ಅದು ರದ್ದಿ ಕಾಗದ. ಯಾವತ್ತೂ ಹಿಂದುಳಿದ ವರ್ಗಗಳ ಆಯೋಗ ಸರಿಯಾದ ರೀತಿಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸುತ್ತೋ, ಅವತ್ತೆ ವರದಿ ಮೇಲೆ ಸರಕಾರ ಕ್ರಮ ಕೈಗೊಳ್ಳುತ್ತೆ. ಜಾತಿ ಗಣತಿ ವಿಚಾರದಲ್ಲಿ ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತಾರೆ.
ಸಿದ್ದರಾಮಯ್ಯ ಬರೀ ದಾರಿ ತಪ್ಪಿಸೋ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು