ರಾಜ್ಯ
ದೇವೇಗೌಡರ ಆಡಳಿತದ ಸಾಧನೆಗಳನ್ನು ಒಳಗೊಂಡ ಕೃತಿ ಲೋಕಾರ್ಪಣೆ..
ಬೆಂಗಳೂರು, ಡಿ.1-ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಆಡಳಿತದ ಸಾಧನೆಗಳನ್ನು ಒಳಗೊಂಡ ಕೃತಿ ಡಿ.13ರಂದು ನವದೆಹಲಿಯಲ್ಲಿ ಲೋಕಾರ್ಪಣೆಯಾಗಲಿದೆ. ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ಫುರೋಸ್ ಇನ್ ಎ ಫೀಲ್ಡ್ ದ ಅನ್‍ಎಕ್ಸ್‍ಫ್ಲೋರ್ಡ್ ಲೈಫ್ ಆಫ್ ಎಚ್.ಡಿ.ದೇವೇಗೌಡ(Furrows in a Field: The Unexplored Life of H.D. Deve Gowda) ಎಂಬ ಪುಸ್ತಕವು ಲೋಕಾರ್ಪಣೆಗೆ ಸಿದ್ಧವಾಗಿದೆ.
ಅಂದು ಪ್ರಖ್ಯಾತ ವಕೀಲ ಪಾಲಿ ಎಸ್.ನಾರಿಮನ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಗೌಡರು ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ರಾಜ್ಯ ಮತ್ತು ದೇಶಕ್ಕೆ ನೀಡಿರುವ ಸಾಧನೆಗಳನ್ನು ಪುಸ್ತಕ ಒಳಗೊಂಡಿರುತ್ತದೆ. ಈಗಾಗಲೇ ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ಆರು ಸಾವಿರ ಕೃತಿಗಳನ್ನು ಖರೀದಿಸಿದೆ ಎಂದು ಮೂಲಗಳು ಹೇಳಿವೆ.