SSLC ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್..!
ಬೆಂಗಳೂರು,ನ.26-ಈ ಭಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್ ಇಲ್ಲಿದೆ. ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದನ್ನು ಮನಗಂಡು ಶಿಕ್ಷಣ ಇಲಾಖೆ ಈ ಬಾರಿ ಶೇ.20ರಷ್ಟು ಪಠ್ಯ ಕಡಿತ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.80 ರಷ್ಟು ಪಠ್ಯಕ್ಕೆ ಸಂಬಂಸಿದ ಪ್ರಶ್ನೆಗಳು ಮಾತ್ರ ಇರಲಿವೆ. ಪ್ರತಿವರ್ಷ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 240ಕ್ಕೂ ಹೆಚ್ಚು ಬೋಧನಾ ದಿನಗಳು ಲಭಿಸುತ್ತಿದ್ದವು. ಆದರೆ, ಈ ಬಾರಿ ವಿದ್ಯಾರ್ಥಿಗಳಿಗೆ ಕೇವಲ 140ಕ್ಕಿಂತ ಕಡಿಮೆ ಬೋಧನಾ ದಿನಗಳು ಸಿಕ್ಕಿರುವುದರಿಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಕಡಿಮೆ ಬೋಧನಾ ದಿನಗಳು ಲಭಿಸಿರುವ ಹಿನ್ನಲೆಯಲ್ಲಿ ಶಿಕ್ಷಕರು ಒತ್ತಡದಲ್ಲಿದ್ದು, ಬೇಗ ಬೇಗ ಪಠ್ಯ ಮುಗಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೂ ಪಾಠ ಆರ್ಥವಾಗದೆ ಪರಿತಪಿಸುತ್ತಿದ್ದಾರೆ. ನಮ್ಮ ಮಕ್ಕಳಿಗೆ ಪಾಠ-ಪ್ರವಚನಗಳು ಆರ್ಥವಾಗುತ್ತಿಲ್ಲ. ಹೀಗಾಗಿ ಮುಂದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಠ್ಯ ಕಡಿತಕ್ಕೆ ಆದ್ಯತೆ ನೀಡುವಂತೆ ಪೋಷಕರು ಒತ್ತಾಯಿಸಿದ್ದರು.
ಪೋಷಕರು ಹಾಗೂ ಶಿಕ್ಷಕರ ಒತ್ತಾಯದ ಮೇರೆಗೆ ಶಿಕ್ಷಣ ಸಚಿವ ನಾಗೇಶ್ ಅವರು ಪಠ್ಯ ಕಡಿತಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಪಠ್ಯ ಕಡಿತ ಕುರಿತಂತೆ ಇಂದು ಶಿಕ್ಷಣ ತಜ್ಞರು ಹಾಗೂ ಇಲಾಖೆ ಅಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ವೇಳೆಗೆ ಅಕೃತವಾಗಿ ಪಠ್ಯ ಕಡಿತದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ.