ಈ 9 ಲಕ್ಷಣಗಳು ಕ್ಯಾನ್ಸರ್ ನ ಸಂಕೇತವಾಗಿರಬಹುದು, ಇವುಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ..
ತೂಕ ಕಳೆದುಕೊಳ್ಳುವುದು :
ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ (Weight loss), ಎಚ್ಚರ ವಹಿಸಿ. ಇದು ಕ್ಯಾನ್ಸರ್ನ ಲಕ್ಷಣವಾಗಿರಬಹುದು. ಇವು ಮೇದೋಜೀರಕ ಗ್ರಂಥಿ, ಹೊಟ್ಟೆ, ಅನ್ನನಾಳ ಅಥವಾ ಶ್ವಾಸಕೋಶದ ಕ್ಯಾನ್ಸರ್ನ (Lungs cancer) ಲಕ್ಷಣಗಳಾಗಿರಬಹುದು.
ದೇಹದಲ್ಲಿ ಊತ ಅಥವಾ ಗಂಟು :
ದೇಹದ ಯಾವುದೇ ಭಾಗದಲ್ಲಿ ಊತ ಅಥವಾ ಗಡ್ಡೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಹೊಟ್ಟೆ, ಸ್ತನ ಅಥವಾ ವೃಷಣದಲ್ಲಿ ಗಡ್ಡೆಗಳು ಕ್ಯಾನ್ಸರ್ ಗೆ ಕಾರಣವಾಗಬಹುದು.
ನಿರಂತರ ಕೆಮ್ಮು :
ನಿರಂತರ ಕೆಮ್ಮು (Cough) ಕೂಡ ಕ್ಯಾನ್ಸರ್ ನ ಲಕ್ಷಣವಾಗಿದೆ. ಮೂರರಿಂದ ನಾಲ್ಕು ವಾರಗಳವರೆಗೆ ಕೆಮ್ಮು, ಕಫ ನಿರಂತರವಾಗಿ ಮುಂದುವರಿದರೆ, ಅದನ್ನು ನಿರ್ಲಕ್ಷಿಸಬೇಡಿ. ನಿರಂತರ ಕೆಮ್ಮು, ಕಫದೊಂದಿಗೆ ರಕ್ತ, ಉಸಿರಾಟದ ತೊಂದರೆ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು.
ಮೂತ್ರದಲ್ಲಿ ರಕ್ತ :
ಮೂತ್ರದಲ್ಲಿ ರಕ್ತವು ಕ್ಯಾನ್ಸರ್ ನ (Cancer) ಎಚ್ಚರಿಕೆಯ ಗಂಟೆಯಾಗಿರುತ್ತದೆ. ಇವು ಕರುಳಿನ ಕ್ಯಾನ್ಸರ್ ನ ಚಿಹ್ನೆಗಳಾಗಿರಬಹುದು. ಟಾಯ್ಲೆಟ್ ಪದ್ಧತಿಯಲ್ಲಿ ಬದಲಾವಣೆ ಕಂಡು ಬಂದರೆ, ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗುತ್ತಿದ್ದರೆ, ಮಲಬದ್ಧತೆಯ ಸಮಸ್ಯೆ ಇದ್ದರೆ (constipation), ಅದನ್ನು ನಿರ್ಲಕ್ಷಿಸಬೇಡಿ. ಮೂತ್ರದಲ್ಲಿನ ರಕ್ತವು ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್ ನ ಸಂಕೇತವಾಗಿರಬಹುದು. ಆಗಾಗ ಮೂತ್ರ ವಿಸರ್ಜನೆಯ ಸಮಸ್ಯೆ ಹೊಂದಿದ್ದರೂ ಅದನ್ನು ನಿರ್ಲಕ್ಷಿಸಬೇಡಿ. ಇವು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ನ ಲಕ್ಷಣಗಳಾಗಿರಬಹುದು. ಇದರಲ್ಲಿ ಕೆಳ ಬೆನ್ನಿನಲ್ಲಿ ನೋವು ಕೂಡ ಕಾಣಿಸಿಕೊಳ್ಳಬಹುದು.
ನೋವು :
ವಾರಗಟ್ಟಲೆ ನೋವು ನಿರಂತರವಾಗಿದ್ದರೆ, ಇವು ಕ್ಯಾನ್ಸರ್ನ ಲಕ್ಷಣಗಳೂ ಆಗಿರಬಹುದು. ಕ್ಯಾನ್ಸರ್ ಸಂಶೋಧನೆಯ ಪ್ರಕಾರ, ಗೆಡ್ಡೆಗಳು ಮೂಳೆಗಳು, ನರಗಳು ಮತ್ತು ಇತರ ಅಂಗಗಳ ಮೇಲೆ ಒತ್ತಡ ಉಂಟಾಗುವುದರಿಂದ ಕ್ಯಾನ್ಸರ್ ಗೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳುತ್ತದೆ.
ಎದೆಯುರಿ :
ನಿರಂತರವಾಗಿ ಎದೆಯಲ್ಲಿ ಸುಡುವ (burning sensation) ಅನುಭವವಾಗುತ್ತಿದ್ದರೆ ನಿರ್ಲಕ್ಷಿಸಬೇಡಿ. ಅದು ಕ್ಯಾನ್ಸರ್ ಲಕ್ಷಣವಾಗಿರಬಹುದು. ಹೊಟ್ಟೆ ಅಥವಾ ಗಂಟಲಿನ ಕ್ಯಾನ್ಸರ್ ವೇಳೆ ಹೀಗಾಗುತ್ತದೆ.
ಆಹಾರ ನುಂಗಲು ತೊಂದರೆ :
ಆಹಾರ ಸೇವಿಸುವಾಗ ನೋವು ಅಥವಾ ನುಂಗಲು ಕಷ್ಟವಾಗುವುದು, ಆಹಾರವು ಗಂಟಲಿನಲ್ಲಿ ಪದೇ ಪದೇ ಸಿಲುಕಿಕೊಂಡರೆ, ಇವು ಕ್ಯಾನ್ಸರ್ನ ಲಕ್ಷಣಗಳೂ ಆಗಿರಬಹುದು. ಅನ್ನನಾಳದ ಕ್ಯಾನ್ಸರ್ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ರಾತ್ರಿ ಬೆವರುವಿಕೆ:
ರಾತ್ರಿಯಲ್ಲಿ ಬೆವರುವುದು ಅನೇಕ ರೀತಿಯ ಕ್ಯಾನ್ಸರ್ಗಳ ಸಂಕೇತವಾಗಿದೆ. ಇದು ಹೆಚ್ಚಾಗಿ Lymphoma ಸಂದರ್ಭದಲ್ಲಿ ಸಂಭವಿಸುತ್ತದೆ. ಈ ರೀತಿಯ ಕ್ಯಾನ್ಸರ್ Lymphatic System ಕಾಣಿಸಿಕೊಳ್ಳುತ್ತದೆ. Lymphatic System ದೇಹದಾದ್ಯಂತ ಹರಡಿರುವ ರಕ್ತನಾಳಗಳು ಮತ್ತು ಗ್ರಂಥಿಗಳ ಜಾಲವಾಗಿದೆ.