Sensexನಲ್ಲಿ ಭಾರೀ ಕುಸಿತ.. ನಿಫ್ಟಿ 17,100 ಕ್ಕೆ ಇಳಿಕೆ..!
ಮುಂಬೈ : ಇಂದು ಷೇರು ಮಾರುಕಟ್ಟೆಯಲ್ಲಿ ಬಲವಾದ ಕುಸಿತ ಕಂಡುಬಂದಿದೆ. ಮೇಲಿನ ಹಂತಗಳಿಂದ ಬರುತ್ತಿರುವ ಮಾರಾಟ ಮತ್ತು ಜಾಗತಿಕ ಮಾರುಕಟ್ಟೆಗಳಿಂದ ಬರುತ್ತಿರುವ ದುರ್ಬಲ ಸಂಕೇತಗಳಿಂದ ಮಾರುಕಟ್ಟೆಯಲ್ಲಿ ಕುಸಿತ ಕಂಡುಬರುತ್ತಿದೆ. ಶುಕ್ರವಾರದಂದು ಸೆನ್ಸೆಕ್ಸ್ 1,400 ಅಂಕಗಳಿಗಿಂತ ಹೆಚ್ಚು ಕುಸಿದಿದ್ದು, ನಿಫ್ಟಿ 50 ಸೂಚ್ಯಂಕವು 17,100 ಕ್ಕಿಂತ ಕಡಿಮೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ (HDFC BANK), ಐಸಿಐಸಿಐ ಬ್ಯಾಂಕ್ (ICICI Bank), ಕೋಟಕ್ ಮಹೀಂದ್ರಾ ಬ್ಯಾಂಕ್, ಇನ್ಫೋಸಿಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೆನ್ಸೆಕ್ಸ್‌ನಲ್ಲಿ ಟಾಪ್ ಡ್ರಾಗ್‌ಗಳಲ್ಲಿ ( top drags) ಸೇರಿವೆ.
ಹೊಸ ಮತ್ತು ಪ್ರಾಯಶಃ ಲಸಿಕೆ-ನಿರೋಧಕ ಕೊರೊನಾವೈರಸ್ (Coronavirus) ರೂಪಾಂತರವನ್ನು ಪತ್ತೆಹಚ್ಚಿದ ನಂತರ ಶುಕ್ರವಾರ ಎರಡು ತಿಂಗಳಲ್ಲಿ ಏಷ್ಯನ್ ಷೇರುಗಳು ತಮ್ಮ ತೀಕ್ಷ್ಣವಾದ ಕುಸಿತವನ್ನು ಕಂಡಿವೆ. ಹೂಡಿಕೆದಾರರು ಬಾಂಡ್‌ಗಳ ಸುರಕ್ಷತೆ, ಯೆನ್ (yen) ಮತ್ತು ಡಾಲರ್‌ಗಳತ್ತ (dollar) ಮುಖ ಮಾಡುತ್ತಿದ್ದಾರೆ.