ಕ್ರೀಡೆ

AB de Villiers : RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಆಪತ್ಬಾಂಧವ : ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ

ಎಲ್ಲಾ ಬಗೆಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಎಬಿಡಿ

2018ರಲ್ಲಿ , ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬಿ ಡಿವಿಲಿಯರ್ಸ್ ನಿವೃತ್ತಿ ಘೋಷಣೆ ಮಾಡಿದ್ರು.. ಆದರೆ ದೇಶಿಯ ಪಂದ್ಯಗಳಲ್ಲಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಈಗ ಇದ್ದಕ್ಕಿದ್ದಂತೆ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮೊಗದಲ್ಲಿ ಎಬಿ ಡಿವಿಲಿಯರ್ಸ್ ಬೇಸರ ಮೂಡಿಸಿದ್ದಾರೆ.. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿವೃತ್ತಿಯಾಗುತ್ತಿರುವ ಬಗ್ಗೆ ಎಬಿ ಡಿವಿಲಿಯರ್ಸ್ ಘೋಷಣೆ ಮಾಡಿದ್ದಾರೆ.

ಬಾಲ್ಯದಲ್ಲಿ ಸೋದರರ ಜೊತೆಗೆ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದ ಆನಂದ ಹಾಗೂ ಉತ್ಸಾಹದಿಂದಲೇ ಈವರೆಗೂ ಆಡಿದ್ದೇನೆ. ಆದರೆ ಈಗ 37ನೇ ವಯಸ್ಸಿನಲ್ಲಿ ನನಗೆ ತುಂಬಾ ಪ್ರಖರವಾಗಿ ಬೆಳಗಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಸತ್ಯವನ್ನು ನಾನು ಒಪ್ಪಿಕೊಳ್ಳಬೇಕಿದೆ. ಎಲ್ಲ ಬಗೆಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ ಮಾಡುತ್ತಿರುವುದು ತಕ್ಷಣದ ನಿರ್ಧಾರದಂತೆ ಅನಿಸಿದರೂ ಈ ನಿರ್ಧಾರವನ್ನು ತೆಗೆದುಕೊಳ್ಳಲು ನಾನು ಸಮಯ ತೆಗೆದುಕೊಂಡಿದ್ದೇನೆ. ಚಿಕ್ಕಂದಿನಿಂದಲೂ ಕ್ರಿಕೆಟ್ ನನ್ನ ಮೇಲೆ ಅಸಾಧಾರಣವಾದ ಪ್ರಭಾವ ಬೀರಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎಬಿಡಿ ಬರೆದುಕೊಂಡಿದ್ದಾರೆ.

RCB ಬಗೆ ಎಬಿ ಡಿವಿಲಿಯರ್ಸ್ ಮೆಚ್ಚುಗೆ ಮಾತು..

ನಾನು ಟೈಟಾನ್ಸ್ ಪರವಾಗಿ ಆಡುವಾಗ ಅಥವಾ ಪ್ರೊಟೀಸ್ ಪರವಾಗಿ ಅಥವಾ ಆರ್‌ಸಿಬಿ ಪರವಾಗಿ ಆಡುವಾದ ಅಥವಾ ವಿಶ್ವಾದ್ಯಂತ ಆಡುವಾಗ ಈ ಕ್ರೀಡೆ ನನಗೆ ಊಹಿಸಲೂ ಸಾಧ್ಯವಾಗದ ಅನುಭವ ಹಾಗೂ ಅವಕಾಶವನ್ನು ನೀಡಿದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ ಎಂದು ತಮಗೆ ಅವಕಾಶ ನೀಡಿದ ಪ್ರಾಂಚೈಸಿಗಳು ಪರವಾಗಿಯೂ ಎಬಿ ಡಿವಿಲಿಯರ್ಸ್ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಹಾದಿಯಲ್ಲಿ ಸಾಗಿದ ಪ್ರತಿಯೊಬ್ಬ ತಂಡದ ಸಹ ಆಟಗಾರ, ಪ್ರತಿ ಎದುರಾಳಿ, ಪ್ರತಿ ತರಬೇತುದಾರ, ಪ್ರತಿಯೊಬ್ಬ ಫಿಸಿಯೋ ಮತ್ತು ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ, ನಾನು ಎಲ್ಲೇ ಆಡಿದರೂ ನನಗೆ ದೊರೆತ ಬೆಂಬಲದಿಂದ ನಾನು ವಿನಮ್ರನಾಗಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ..

ಇನ್ನು ಕೊನೆಯದಾಗಿ, ನನ್ನ ಕುಟುಂಬ – ನನ್ನ ಹೆತ್ತವರು, ನನ್ನ ಸಹೋದರರು, ನನ್ನ ಹೆಂಡತಿ ಡೇನಿಯಲ್ ಮತ್ತು ನನ್ನ ಮಕ್ಕಳು ಮಾಡಿದ ತ್ಯಾಗವಿಲ್ಲದೆ ಏನೂ ಸಾಧ್ಯವಾಗುತ್ತಿರಲಿಲ್ಲ ಎಂದು ನನಗೆ ತಿಳಿದಿದೆ. ನಾನು ನಮ್ಮ ಜೀವನದ ಮುಂದಿನ ಅಧ್ಯಾಯವನ್ನು ಎದುರುನೋಡುತ್ತಿದ್ದೇನೆ ಇಂದು ತಮ್ಮ ನಿವೃತ್ತಿಯ ಬಗ್ಗೆ ಎಬಿ ಡಿವಿಲಿಯರ್ಸ್ ತಮ್ಮ ಮಾತುಗಳನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ.

ಎಬಿಡಿ ವಿದಾಯ ಘೋಷಿಸಿದ್ದಕ್ಕೆ ಕ್ರಿಕೆಟ್ ದಿಗ್ಗಜರ ಬೇಸರ

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಎಬಿ ಡಿವಿಲಿಯರ್ಸ್ ವಿದಾಯ ಪೋಷಿಸಿರುವುದಕ್ಕೆ ಕ್ರಿಕೆಟ್ ದಿಗ್ಗಜರು ಸಹ ಬೇಸರ ವ್ಯಕ್ತಪಡಿಸಿದ್ದಾರೆ..ದಕ್ಷಿಣಾ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್, ಇನ್ಮುಂದೆ ಎಲ್ಲಾ ಬೌಲರ್ಗಳು ನಿರಾಳವಾಗಿರಬಹುದು.. ಆದರೆ ನೀನೊಬ್ಬ ಅತ್ಯಂತ ಅದ್ಭುತ ಆಟಗಾರ ಅಂತ ಹೇಳಿದ್ದಾರೆ..ಇನ್ನು ಎಬಿಡಿ ವಿಧಾಯ ಘೋಷಣೆ ಮಾಡಿರುವುದಕ್ಕೆ ವಿರಾಟ್ ಕೊಹ್ಲಿ ಸಹಾ ಟ್ವೀಟ್ ಮಾಡಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ..ನಿಮ್ಮ ನಿವೃತ್ತಿ ನನಗೆ ಅತ್ಯಂತ ಬೇಸರ ತರಿಸಿದೆ.. ಆದ್ರೆ ನೀವು ನಿಮ್ಮ ಕುಟುಂಬಕ್ಕಾಗಿ ಇದನ್ನ ಮಾಡಿದ್ದೀರಾ.. ನಾನು ನಿಮ್ಮನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಅಂತ ವಿರಾಟ್ ಬೇಸರ ಹೊರಹಾಕಿದ್ದಾರೆ.

ಎಬಿ ಡಿವಿಲಿಯರ್ಸ್ 114 ಟೆಸ್ಟ್‌, 228 ಓಡಿಐ ಹಾಗೂ 78 ಟಿ20 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 20,014 ಅಂತಾರಾಷ್ಟ್ರೀಯ ರನ್‌ಗಳನ್ನು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, 184 ಐಪಿಎಲ್‌ ಪಂದ್ಯಗಳಾಡಿರುವ ಅವರು 39.7 ಸರಾಸರಿಯಲ್ಲಿ 5162 ರನ್ ಸಿಡಿಸಿದ್ದಾರೆ. 2011ರಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊಟ್ಟ ಮೊದಲ ಬಾರಿ ಪ್ರತಿನಿಧಿಸಿದ್ದ ಎಬಿಡಿ, ಒಟ್ಟು 10 ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button