ಇಂದು ಬೆಳಗ್ಗೆ 11 ಗಂಟೆಗೆ ಅನ್ನಸಂತರ್ಪಣೆ ಅರಂಭವಾಗಲಿದೆ. ಒಂದು ಬಾರಿಗೆ ಐದು ಸಾವಿರ ಜನರು ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎರಡು ಗೇಟ್ ಗಳಲ್ಲಿ 24 ರೂಮಿನೊಳಗೆ ಐದು ಸಾವಿರ ಕುರ್ಚಿ ಹಾಗೂ ಟೇಬಲ್ ಗಳನ್ನು ಹಾಕಲಾಗಿದೆ. ಆಗಮಿಸುವ ಅಭಿಮಾನಿಗಳಿಗೆ ಮಾಂಸಾಹಾರ ಮತ್ತು ಸಸ್ಯಹಾರ ಸಹ ಸಿದ್ಧಪಡಿಸಲಾಗಿದೆ.
ನಾನ್ ವೆಜ್ ಅಡುಗೆ ಮಾಹಿತಿ: ಗೀ ರೈಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೋಳಿ ಮೊಟ್ಟೆ, ಅಕ್ಕಿಪೇಣಿ ಪಾಯಸ ಹಾಗೂ ಅನ್ನ, ರಸಂ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ. ಮಾಂಸಾಹಾರ ಅಡುಗೆ ಸಿದ್ಧಪಡಿಸಲು ಸೌದೆ ಒಲೆಯ ವ್ಯವಸ್ಥೆ ಮಾಡಲಾಗಿದೆ.
ವೆಜ್ ಅಡುಗೆ ಮಾಹಿತಿ: ಗೀರೈಸ್ ಮತ್ತು ಕುರ್ಮ, ಹಾಲು ಕಬಾಬ್, ಬೇಬಿ ಕಾರ್ನ್ ಲಾಲಿ ಪಾಪ್, ಅಕ್ಕಿಪೇರಣಿ ಪಾಯಸ, ಮಸಾಲೆ ವಡೆ ಹಾಗೂ ಅನ್ನರಸಂ . ಸಸ್ಯಹಾರ ಅಡುಗೆಗೆ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ.
50, 60,70 ಹಾಗೂ 80 ಕೆಜಿಯ ದೊಡ್ಡ ಪಾತ್ರೆಗಳಲ್ಲಿ ಗೀರೈಸ್ ಮಾಡಲಾಗುತ್ತಿದೆ. ಪುನೀತ್ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುತ್ತಿದ್ದ ಬಾಣಸಿಗರನ್ನು ಇಲ್ಲಿಯೂ ನಿಯೋಜನೆ ಮಾಡಲಾಗಿದೆ. ಭಾನುವಾರವೇ ಅಡುಗೆ ಸಿದ್ಧತೆ ಆರಂಭಿಸಲಾಗಿತ್ತು.