ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Power Star Puneeth Rajkumar) ಸಾವಿನ ನಂತರ ನೇತ್ರದಾನ (eye donation) ಮಾಡುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ಹುಬ್ಬಳ್ಳಿಯ ಎಂಎಂ ಜೋಶಿ ನೇತ್ರ ಚಿಕಿತ್ಸಾಲಯದಲ್ಲಿ (M M Joshi Eye Hospital) ಒಂದೇ ವಾರದಲ್ಲಿ 500 ಜನರಿಂದ ನೇತ್ರದಾನಕ್ಕೆ ನೊಂದಣಿಯಾಗಿದೆ. ನಿತ್ಯ ಕರೆ ಮಾಡಿ ನೂರಾರು ದಾನಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ನಿಧನದ ನಂತರವೂ ಸಮಾಜದಲ್ಲಿ ಜನರಿಗೆ ದಾರಿದೀಪವಾಗ್ತಿದ್ದಾರೆ. ಪವರ್ ಸ್ಟಾರ್ ಪುನೀತ ರಾಜಕುಮಾರ ನಮ್ಮ ಮಧ್ಯೆ ಇಲ್ಲ. ಆದ್ರೆ ಪುನೀತರಾಜಕುಮಾರ್ ರ ಆದರ್ಶಗಳು ಇದೀಗ ನೂರಾರು ಜನರಿಗೆ ಮಾದರಿಯಾಗಿದೆ.
ಅಪ್ಪು ಆದರ್ಶಗಳು ಅಜರಾಮರ
ಹೃದಯಾಘಾತದಿಂದ ಮೃತಪಟ್ಟ ಪುನೀತ್ ರಾಜಕುಮಾರ್ ತಮ್ಮ ಕಣ್ಣುಗಳನ್ನ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಹೀಗಾಗಿ ಪುನೀತ್ ರಾಜಕುಮಾರ್ ನಿಧನದ ನಂತರ ನೂರಾರು ಜನರು ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಪವರ್ ಸ್ಟಾರ್ ಜೀವಂತ ಇದ್ದಾಗಲೂ ರಾಜನಂತೆ ಬಾಳ ಬದುಕಿದವರು. ಪುನೀತ್ ಇನ್ನಿಲ್ಲ ಅನ್ನೋ ಸತ್ಯ ಅರಗಿಸಿಕೊಳ್ಳಲು ಆಗದಿದ್ದರೂ ಅವರ ಆದರ್ಶಗಳು ಮಾತ್ರ ಸಮಾಜದಲ್ಲಿ ಅಜರಾಮರವಾಗಿದೆ.
ಹಿಂದೆಂದಿಗಿಂತಲೂ ಹೆಚ್ಚಾದ ನೇತ್ರದಾನ
ಹೃದಯಾಘಾತದಿಂದ ಪುನೀತ್ ರಾಜಕುಮಾರ್ ಮೃತಪಟ್ಟ ನಂತರ ಅವರ ಕಣ್ಣುಗಳನ್ನ ದಾನ ಮಾಡಲಾಗಿತ್ತು. ಪುನೀತ್ ಕಣ್ಣುಗಳನ್ನ ಇದೀಗ ನಾಲ್ವರಿಗೆ ಅಳವಡಿಸಿರುವುದರಿಂದ ನಾಲ್ವರ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಹೀಗಾಗಿ ಪುನೀತ್ ಮೃತಪಟ್ಟ ಒಂದೇ ವಾರದೊಳಗೆ ಬರೋಬ್ಬರಿ 500 ಜನರು ನೇತ್ರದಾನಕ್ಕೆ ಮುಂದಾಗಿರುವುದು ವಿಶೇಷವಾಗಿದೆ. ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ಚಿಕಿತ್ಸಾಲಯದವೊಂದರಲ್ಲಿಯೇ ಐದು ನೂರಕ್ಕೂ ಹೆಚ್ಚು ಜನ ನೇತ್ರ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ನೇತ್ರ ಚಿಕಿತ್ಸಾಲಯ ಆರಂಭಿಸಿ ಐದು ದಶಕಗಳಾಗುತ್ತಾ ಬಂದಿತ್ತು. ಆದರೆ ಎಂದೂ ಸಹ ಇಷ್ಟು ಪ್ರಮಾಣದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ನೋಡಿರರಿಲ್ಲ. ನಮ್ಮ ರಾಜ್ಯವೊಂದರಲ್ಲಿಯೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಪುನೀತ್ ನೇತ್ರದಾನಕ್ಕೆ ಪ್ರೇರಣೆಯಾಗಿದ್ದು, ಅಚ್ಚರಿಯಾಗೋ ಜೊತೆಗೆ ಪುನೀತ್ ಬಗ್ಗೆ ಗೌರವ ಹುಟ್ಟುತ್ತದೆ ಎನ್ನುತ್ತಾರೆ ಎಂಎಂ ಜೋಶಿ ನೇತ್ರ ಚಿಕಿತ್ಸಾಲಯದ ಮುಖ್ಯಸ್ಥ, ಹಿರಿಯ ನೇತ್ರತಜ್ಞ ಡಾ.ಶ್ರೀನಿವಾಸ ಜೋಶಿ.