ಸಾಮಾಜಿಕ ಜಾಲತಾಣದ (Social Media) ವೇದಿಕೆ ಅಂದ್ರೆ ಎಲ್ಲಿ ಯಾರೂ ಬೇಕಾದ್ರೂ ತಮ್ಮ ಟ್ಯಾಲೆಂಟ್ (Tallent) ಪ್ರದರ್ಶಿಸಬಹುದು. ಕೆಲವೊಮ್ಮೆ ಸಾಮಾನ್ಯ ವಕ್ತಿ ರಾತ್ರೋ ರಾತ್ರಿ ಸ್ಟಾರ್ ಆಗಿರುತ್ತಾನೆ. ಅಂತಹ ಉದಾಹರಣೆಗಳು ಹಲವು ಇವೆ. ಟಿಕ್ ಟಾಕ್ (TikTok), ಡಬ್ಸ್ ಮ್ಯಾಶ್ (Dubsmash) ನಂತಹ ಆಪ್ ಬಳಸಿ ಡ್ಯಾನ್ಸ್, ಡೈಲಾಗ್, ಹಾಡು (Song, dialogue) ಹೇಳುತ್ತಿರುತ್ತಾರೆ. ಎಲ್ಲೋ ಮರೆಯಾಗಿರುವ ಪ್ರತಿಭೆಗಳ ಅನಾವರಣದ ಲೋಕವೇ ಸಾಮಾಜಿಕ ಜಾಲತಾಣ. ಯುವಕನೋರ್ವ (Youth) ಬಾಲಿವುಡ್ ನಟಿ ಬೇಬೋ ಕರೀನಾ ಕಪೂರ್ ಖಾನ್ (Actress Kareena Kpoor Khan) ಅವರ ನಕಲು ಮಾಡಿರುವ ವಿಡಿಯೋ (viral Video) ನೆಟ್ಟಿಗರ ಹೃದಯ ಗೆದ್ದಿದೆ.
ಕರೀನಾ ಕಪೂರ್ ಬಾಲಿವುಡ್ ನ ಪ್ರತಿಭಾನ್ವಿತ ನಟಿ. ಸದ್ಯ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವ ಕರೀನಾ ಸಿನಿಮಾದಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ. ಕರೀನಾ ಸಿನಿ ಕೆರಿಯರ್ ಆರಂಭದಲ್ಲಿ ನಟಿಸಿದ್ದ ಕಭೀ ಖುಷಿ, ಕಭೀ ಗಮ್ ಚಿತ್ರದ ಪೂಜಾ ಪಾತ್ರ ಬೇಬೋಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಸಿನಿಮಾ ನೋಡಿದ ಎಷ್ಟೋ ಯುವತಿಯರನ್ನು ಪೂಜಾ ಪಾತ್ರ ಸೆಳೆದಿತ್ತು, ಈ ಚಿತ್ರದ ಬೋಲೇ ಚುಡಿಯಾ ಹಾಡಿನಲ್ಲಿ ಕರೀನಾ ಪರ್ಫಾಮೆನ್ಸ್ ಕಂಡು ವಾವ್ ಅಂತ ಅಭಿಮಾನಿಗಳು ಹೇಳಿದ್ದರು.
ಟಿಕ್ ಟಾಕ್ ನಲ್ಲಿ ವಿಡಿಯೋ ಟ್ರೆಂಡ್
ಈಗ ಅದೇ ಹಾಡಿನ ಕರೀನಾ ಪಾತ್ರವನ್ನು ಯುವಕನೋರ್ವ ನಕಲು ಮಾಡಿದ್ದಾನೆ. ಹಾಡಿನಲ್ಲಿ ಇದ್ದಂತೆ ಕರೀನಾ ಅವರ ಹಾಗೆಯೇ ಹೆಜ್ಜೆ ಹಾಕಿದ್ದಾನೆ. ಯುವಕನ ವಿಡಿಯೋ ಟಿಕ್ ಟಾಕ್ ನಲ್ಲಿ ಟ್ರೆಂಡ್ ಆಗಿದೆ. ವಿಡಿಯೋ ಕಂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶೇರ್ ಮಾಡಿಕೊಂಡಿದ್ದಾರೆ. ಕರೀನಾ ಕಪೂರ್ ಅಭಿಮಾನಿಗಳು ಸಹ ತಮ್ಮ ಪೇಜ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.