ಕನ್ನಡದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‍ಕುಮಾರ್ (Power Star Puneeth Rajkumar) ಕುಟುಂಬ ವೈದ್ಯ ಡಾ ರಮಣ ರಾವ್ (Dr Ramana Rao) ವಿರುದ್ಧ ಪುನೀತ್ ಅಭಿಮಾನಿಗಳಿಂದ (Appu Fans) ಪ್ರತಿಭಟನೆಗಳು ಮತ್ತು ದೂರುಗಳು ಬಂದ ನಂತರ ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (PHANA) ನವೆಂಬರ್ 6 ಶನಿವಾರದಂದು ರಕ್ಷಣೆ ಕೋರಿದೆ. ಅಕ್ಟೋಬರ್ 29ರಂದು ಭಾರಿ ಹೃದಯ ಸ್ತಂಭನಕ್ಕೆ ಬಲಿಯಾದ ದಿನ ಡಾ. ರಮಣ ರಾವ್ ಕ್ಲಿನಿಕ್‍ನಲ್ಲಿ ಪುನೀತ್ ರಾಜ್‍ಕುಮಾರ್ ಸಮಾಲೋಚನೆ ನಡೆಸಿದ್ದರು.
ಡಾ. ರಾವ್ ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗೆಯೇ ಹೃದಯಾಘಾತವಾದ ನಂತರ ಪುನೀತ್ ವಿಕ್ರಮ್ ಆಸ್ಪತ್ರೆಗೆ ಧಾವಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದರು.
ವೈರಲ್ ಆಗುತ್ತಿರುವ ಪೋಸ್ಟ್ ಬಗ್ಗೆ ಕಳವಳ
“ಪುನೀತ್ ರಾಜ್‍ಕುಮಾರ್ ನಿಧನದ ನಂತರ ಮಾಧ್ಯಮಗಳು ಮತ್ತು ಸಾರ್ವಜನಿಕರಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆ ಬಿತ್ತರಿಸುತ್ತಿರುವ ಸುದ್ದಿಗಳು, ವಿಶೇಷ ಕಾರ್ಯಕ್ರಮಗಳ ಕಂಡು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ತೀವ್ರ ಕಳವಳ ವ್ಯಕ್ತಪಡಿಸಿದೆ. ನಾವು ಯುವ ಮತ್ತು ಜನಪ್ರಿಯ ನಟನನ್ನು ಕಳೆದುಕೊಂಡ ದುಃಖ ಮತ್ತು ಆಘಾತ ಹಂಚಿಕೊಳ್ಳುತ್ತಿರುವಾಗ, ಬೇರೊಂದು ಸ್ವರೂಪ ಪಡೆದುಕೊಳ್ಳುತ್ತಿರುವ ಪೋಸ್ಟ್‌ಗಳ ಬಗ್ಗೆ ಕೂಡಲೇ ನಿಮ್ಮ ಗಮನಕ್ಕೆ ತರಬೇಕು” ಎಂದು ಪಂ. ಅಧ್ಯಕ್ಷ ಪ್ರಸನ್ನ ಎಚ್‍ಎಂ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.