ತಮಿಳು ಚಿತ್ರರಂಗದ ಸ್ಟಾರ್ ನಟ(Star Hero), ಮಕ್ಕಳ್ ಸೆಲ್ವನ್(Makkal Selvan) ವಿಜಯ್ ಸೇತುಪತಿ(Vijay Sethupathi) ಮೇಲೆ ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ ಹಲ್ಲೆ ಯತ್ನ ನಡೆಸಿದ್ದ. ವಿಜಯ್ ಸೇತುಪತಿ ಕೆಲವು ದಿನಗಳ ಹಿಂದಷ್ಟೆ ಪುನೀತ್ ರಾಜ್‌ಕುಮಾರ್(Puneeth Rajkumar) ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮಾಧ್ಯಮಗಳೆದುರು ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅದರ ಹಿಂದಿನ ದಿನವಷ್ಟೆ ವಿಜಯ್ ಮೇಲೆ ಬೆಂಗಳೂರು(Bengaluru) ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದ.
ನಟ ವಿಜಯ್ ನವೆಂಬರ್ 02 ರಂದು ರಾತ್ರಿ, ವಿಮಾನದಲ್ಲಿ ಚೆನ್ನೈ(Chennai)ನಿಂದ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರೊಟ್ಟಿಗೆ ಸಹ ಪ್ರಯಾಣಿಕನೊಬ್ಬ(Co Passenger), ವಿಜಯ್ ಹಾಗೂ ಅವರ ಮ್ಯಾನೇಜರ್ ಜೊತೆ ಜಗಳವಾಡಿ, ವಿಜಯ್ ಸೇತುಪತಿ ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕಾದರೆ ಹಲ್ಲೆ ಮಾಡಿದ್ದ. ಹಲ್ಲೆಗೆ ಯತ್ನಿಸಿದ್ದ ದೃಶ್ಯ ಮೊಬೈಲ್ ಕ್ಯಾಮರಾವೊಂದರಲ್ಲಿ ಸೆರೆಯಾಗಿತ್ತು. ಸಖತ್ ವೈರಲ್ ಕೂಡ ಆಗಿತ್ತು. ಇದೀಗ ಆ ಹಲ್ಲೆ ಬಗ್ಗೆ ವಿಜಯ್ ಸೇತುಪತಿ ಪ್ರತಿಕ್ರಿಯೆ ನೀಡಿದ್ದಾರೆ. ‘ಅದೊಂದು ತುಂಬಾ ಸಣ್ಣ ಘಟನೆ. ಅದನ್ನು ಅಷ್ಟು ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ’ ಅಂತ ವಿಜಯ್ ಸೇತುಪತಿ ಹೇಳಿದ್ದಾರೆ.
‘ಅದು ಬಹಳ ಸಣ್ಣ ಮ್ಯಾಟರ್’
‘ಅದೊಂದು ಬಹಳ ಸಣ್ಣ ಘಟನೆ. ಆದರೆ ಅಲ್ಲಿದ್ದ ಯಾರೊ ಒಬ್ಬರು ಮೊಬೈಲ್‌ನಲ್ಲಿ ಅದನ್ನು ಸೆರೆಹಿಡಿದಿದ್ದರಿಂದ ಆ ವಿಷಯ ದೊಡ್ಡದಾಯಿತು. ಮೊಬೈಲ್ ಇದ್ದವರೆಲ್ಲ ಕ್ಯಾಮೆರಾಮನ್‌ಗಳಾಗಿದ್ದಾರೆ ಹಾಗಾಗಿ ಇಂಥಹಾ ಸಣ್ಣ ಘಟನೆಗಳಿಗೂ ಪ್ರಾಮುಖ್ಯತೆ ಸಿಗುತ್ತಿದೆ’ ಎಂದಿದ್ದಾರೆ ಸೇತುಪತಿ. ಸಹ ಪ್ರಯಾಣಿಕ ಕುಡಿದಿದ್ದ. ವ್ಯಕ್ತಿಯೊಬ್ಬ ತನ್ನ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ಆ ರೀತಿ ವರ್ತಿಸುತ್ತಾನೆ. ಆತ ನನ್ನ ಅಭಿಮಾನಿಯಲ್ಲ. ನನ್ನ ಅಭಿಮಾನಿಗಳು ದುರ್ವತನೆ ತೋರುವಂತವರಲ್ಲ. ಆತ ನಮ್ಮೊಂದಿಗೆ ವಿಮಾನದಲ್ಲಿ ಜಗಳ ಆರಂಭಿಸಿದ್ದ. ಅದು ವಿಮಾನ ಲ್ಯಾಂಡ್ ಆದ ಮೇಲೂ ಮುಂದುವರಿದಿತ್ತು. ನಾನು ಆತ ಕುಡಿದಿದ್ದಾನೆ ಎಂದು ಹೆಚ್ಚು ಗಮನ ಕೊಡಲಿಲ್ಲ. ಬಳಿಕ ಆ ವ್ಯಕ್ತಿ ಆ ರೀತಿ ಹಲ್ಲೆಗೆ ಯತ್ನಿಸಿದ್ದ ಎಂದು ಸೇತುಪತಿ ಹೇಳಿದ್ದಾರೆ.