ರಾಜಕೀಯಸುದ್ದಿ

ಕೇಂದ್ರ ಸಚಿವರಿಗೆ ಮಣ್ಣಿನ ದೀಪ ಕೊಟ್ಟು ಶುಭಾಶಯ ಕೋರಿದ ಸಚಿವ ಡಾ.ಅಶ್ವತ್ಥನಾರಾಯಣ..!

ನವದೆಹಲಿ, ನ.‌ 2: ತಮ್ಮ ಖಾತೆಗಳಿಗೆ ಸಂಬಂಧಿಸಿದ ನಾನಾ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಕೇಂದ್ರದ ನೆರವು ಕೋರಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ (Higher Education Minister Dr. C.N Ashwath Narayan) ಅವರು ಮಂಗಳವಾರ ಕೇಂದ್ರದ ಐವರು ಸಚಿವರನ್ನು ಭೇಟಿಯಾಗಿ ಕೂಲಂಕಷವಾಗಿ ಚರ್ಚಿಸಿದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನವಿಡೀ ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh), ಐಟಿ-ಬಿಟಿ ಸಚಿವ ಅಶ್ವಿನಿ ವೈಷ್ಣವ್ (IT BT Minister Ashwini Vishnav), ಆಹಾರ ಸಂಸ್ಕರಣಾ ಸಚಿವ ಪಶುಪತಿ ಪಾರಸ್ (Food Processing Minister Pashupati Paras), ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Human Resources Minister Dharmendra Pradhan) ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ (Rural Development Minister Giriraj Singh) ಅವರನ್ನು ಭೇಟಿಯಾದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ. ಅಶ್ವಥನಾರಾಯಣ್ ಅವರು, ಯಾವುದೇ ಸ್ಥಳದಿಂದ ಕೆಲಸ ಮಾಡುವುದಕ್ಕೆ ಐಟಿ ಕ್ಷೇತ್ರದವರಿಗೆ ಅವಕಾಶ ಮಾಡಿಕೊಡುವ ಹೈಬ್ರಿಡ್ ಕಾರ್ಯ ಮಾದರಿಗೆ ಸೂಕ್ತ ಕಾರ್ಯನೀತಿಗಳ ಬೆಂಬಲದೊಂದಿಗೆ ಮನ್ನಣೆ ನೀಡುವಂತೆ ಅಶ್ವಿನಿ ವೈಷ್ಣವ್ ಅವರನ್ನು ಕೋರಲಾಗಿದೆ ಎಂದು ತಿಳಿಸಿದರು. ನವೆಂಬರ್ 17ರಿಂದ ಆರಂಭವಾಗುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (BTS-2021) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವೈಷ್ಣವ್ ಅವರನ್ನು ಆಹ್ವಾನಿಸಲಾಗಿದೆ ಎಂದೂ ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button