ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ (EPFO-Employees’ Provident Fund Organisation) ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಲಿದೆ. 2020-21 ರ ಭವಿಷ್ಯ ನಿಧಿಯ ಮೇಲಿನ ಶೇ.8.5ರಷ್ಟು ಬಡ್ಡಿ ದರವನ್ನು ಹಣಕಾಸು ಸಚಿವಾಲಯವು (Ministry of Finance) ಇತ್ತೀಚೆಗೆ ಅನುಮೋದಿಸಿರುವುದರಿಂದ ಆರು ಕೋಟಿಗೂ ಹೆಚ್ಚು ಫಲಾನುಭವಿಗಳು ತಮ್ಮ PF ಖಾತೆಗಳಲ್ಲಿ 8.5% ಬಡ್ಡಿಯನ್ನು ಶೀಘ್ರದಲ್ಲೇ ಪಡೆಯುತ್ತಾರೆ.
ಕಾರ್ಮಿಕ ಸಚಿವರ (Labour Minister)ನೇತೃತ್ವದ ಇಪಿಎಫ್ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಈ ವರ್ಷದ ಮಾರ್ಚ್ನಲ್ಲಿ ಕಳೆದ ವರ್ಷದಂತೆ 2020-21 ಕ್ಕೆ 8.5% ರ ಬಡ್ಡಿದರವನ್ನು ಅನುಮೋದಿಸಿತ್ತು. ಕಾರ್ಮಿಕ ಸಚಿವಾಲಯವು ಉದ್ದೇಶಿತ ದರಕ್ಕೆ ಹಣಕಾಸು ಸಚಿವಾಲಯದಿಂದ ಕಡ್ಡಾಯವಾಗಿ ಅನುಮೋದನೆಯನ್ನು ಪಡೆಯಬೇಕಾಗಿದೆ. ಸಚಿವಾಲಯದ ಅನುಮೋದನೆಯೊಂದಿಗೆ, EPFO ಚಂದಾದಾರರು ದೀಪಾವಳಿಗು ಮುನ್ನ ಬಡ್ಡಿಯನ್ನು ಸ್ವೀಕರಿಸುವ ಸಾಧ್ಯತೆಯಿದೆ.
ಬಂಪರ್ ಬಡ್ಡಿ ದರ
ಈ ತಿಂಗಳ ಆರಂಭದಲ್ಲಿ, ಕಾರ್ಮಿಕ ಸಚಿವಾಲಯದ ಉನ್ನತ ಅಧಿಕಾರಿಗಳು ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಳಿಕೊಂಡಿದ್ದರು. EPFO ಕಳೆದ ಹಣಕಾಸು ವರ್ಷದಲ್ಲಿ ಸುಮಾರು 70,300 ಕೋಟಿ ರೂಪಾಯಿಗಳ ಅಂದಾಜು ಆದಾಯವನ್ನು ಹೊಂದಿತ್ತು, ಅದರಲ್ಲಿ ತನ್ನ ಇಕ್ವಿಟಿ ಹೂಡಿಕೆಯ ಒಂದು ಭಾಗವನ್ನು ಮಾರಾಟ ಮಾಡುವುದರಿಂದ ಸುಮಾರು 4,000 ಕೋಟಿ ಮತ್ತು ಸಾಲದಿಂದ 65,000 ಕೋಟಿ ರೂ. ಪಡೆದಿದೆ. 2019-20ರ ಆರ್ಥಿಕ ವರ್ಷದಲ್ಲಿ KYC ಯಲ್ಲಿನ ಅಡಚಣೆಯಿಂದಾಗಿ ಅನೇಕ ಚಂದಾದಾರರು ದೀರ್ಘಕಾಲ ಕಾಯಬೇಕಾಯಿತು. ಇಪಿಎಫ್ಒ 2020-21ರ ಹಣಕಾಸು ವರ್ಷದಲ್ಲಿ ಬಡ್ಡಿದರಗಳನ್ನು 8.5% ಕ್ಕೆ ಬದಲಾಯಿಸದೆ ಇರಿಸಿದೆ. ಇದು ಕಳೆದ 7 ವರ್ಷಗಳ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ.
ಮಿಸ್ಡ್ ಕಾಲ್- SMS ಮೂಲಕ Balance ತಿಳಿಯುವುದು ಹೇಗೆ?
ಇನ್ನು ಮಿಸ್ಡ್ ಕಾಲ್ ಅಥವಾ ಎಸ್ಎಂಎಸ್ ಮೂಲಕ ಮನೆಯಲ್ಲಿ ಕುಳಿತು ನಿಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ನಿಮ್ಮ ಪಿಎಫ್ ಹಣವನ್ನು ಪರಿಶೀಲಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇದರ ನಂತರ, ನೀವು ಇಪಿಎಫ್ಒ ಸಂದೇಶದ ಮೂಲಕ ಪಿಎಫ್ನ ವಿವರಗಳನ್ನು ಪಡೆಯುತ್ತೀರಿ. ಇಲ್ಲಿಯೂ ಸಹ, ನಿಮ್ಮ UAN, PAN ಮತ್ತು ಆಧಾರ್ ಅನ್ನು ಲಿಂಕ್ ಮಾಡುವುದು ಅವಶ್ಯಕ.