ಕ್ರೀಡೆಸುದ್ದಿ

ಆಟಗಾರನೇ ಕಿಂಗ್, ಆತ ಒಪ್ಪಿದರೆ ಮಾತ್ರ ರೀಟೈನ್: ಇಬ್ಬರು ವಿದೇಶಿಗರಿಗಷ್ಟೇ ಅವಕಾಶ..!

ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಅವತರಣಿಕೆಗಾಗಿ ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸಿದೆ. ಈಗಾಗಲೇ ಎರಡು ಹೊಸ ತಂಡಗಳಿಗೆ ಅನುಮತಿ ಕೊಡಲಾಗಿದೆ. ಅಹ್ಮದಾಬಾದ್ ಮತ್ತು ಲಕ್ನೋ ತಂಡಗಳು ಐಪಿಎಲ್ ಅಖಾಡಕ್ಕೆ ಇಳಿಯಲಿವೆ. ಐಪಿಎಲ್ 2022ಕ್ಕೆ ಹತ್ತು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತವೆ. ಒಟ್ಟು 74 ಪಂದ್ಯಗಳನ್ನ ಆಯೋಜಿಸಲು ನಿಗದಿ ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಆಟಗಾರರ ಹರಾಜು ನಡೆಯಲಿದೆ. ಹಳೆಯ ಎಂಟು ತಂಡಗಳು ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇದೀಗ ಬಂದಿರುವ ಅಪ್​ಡೇಟೆಡ್ ಮಾಹಿತಿ ಪ್ರಕಾರ ಇಬ್ಬರು ವಿದೇಶೀ ಆಟಗಾರರನ್ನ ಮಾತ್ರ ರೀಟೈನ್ ಮಾಡಿಕೊಳ್ಳಬಹುದು. ರೀಟೈನ್ ಮಾಡಿಕೊಳ್ಳಲು ಭಾರತೀಯ ಆಟಗಾರರಾದರೆ ಗರಿಷ್ಠ ಮೂರು, ವಿದೇಶೀ ಆಟಗಾರರಾದರೆ ಗರಿಷ್ಠ ಇಬ್ಬರಿಗೆ ಮಾತ್ರ ಅನುಮತಿ ಇದೆ. ನವೆಂಬರ್ 30 ಆಟಗಾರರನ್ನ ಉಳಿಸಿಕೊಳ್ಳಲು ಡೆಡ್​ಲೈನ್.

ಆಟಗಾರನೇ ಕಿಂಗ್: ಒಂದು ತಂಡ ತನ್ನ ಒಬ್ಬ ಆಟಗಾರನನ್ನ ರೀಟೈನ್ ಮಾಡಿಕೊಳ್ಳಲು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಆಗಲ್ಲ. ಆಟಗಾರನ ಸಮ್ಮತಿಯೂ ಬೇಗ. ತನ್ನ ತಂಡದಲ್ಲಿ ಉಳಿದುಕೊಳ್ಳಲು ಆಟಗಾರ ಇಚ್ಚಿಸದೇ ಹೋದಲ್ಲಿ ಅತ ಹರಾಜಿಗೆ ತನ್ನನ್ನ ಒಡ್ಡಿಕೊಳ್ಳಬಹುದು. ಉದಾಹರಣೆಗೆ, ಪಂಜಾಬ್ ಕಿಂಗ್ಸ್ ತಂಡ ಒಂದು ವೇಳೆ ಕೆಎಲ್ ರಾಹುಲ್ ಅವರನ್ನ ಉಳಿಸಿಕೊಳ್ಳಲು ನಿರ್ಧರಿಸಿತು ಎಂದಿಟ್ಟುಕೊಳ್ಳಿ. ಕೆಎಲ್ ರಾಹುಲ್ ಅವರಿಗೆ ಪಂಜಾಬ್ ತಂಡದಲ್ಲಿ ಮುಂದುವರಿಯಲು ಇಚ್ಛೆ ಇದ್ದರೆ ಮಾತ್ರ ಅವರನ್ನ ರೀಟೈನ್ ಮಾಡಿಕೊಳ್ಳಲು ಸಾಧ್ಯ. ಇಲ್ಲವಾದರೆ ಕೆಎಲ್ ರಾಹುಲ್ ತಮ್ಮ ಹೆಸರನ್ನು ಹರಾಜು ಪಟ್ಟಿಗೆ ಸೇರಿಸಬಹುದು.

ಐಪಿಎಲ್ 2022 ಸ್ಪೆಷಲ್ ಪಾಯಿಂಟ್ಸ್:

1) ಐಪಿಎಲ್ 2022 ಆಟಗಾರರ ಖರೀದಿಗೆ ಪ್ರತೀ ತಂಡಕ್ಕೆ ಇರುವ ಬಜೆಟ್ 90 ಕೋಟಿ. ಕಳೆದ ವರ್ಷದಕ್ಕಿಂತ ಈ ವರ್ಷ 5 ಕೋಟಿ ಹೆಚ್ಚಳ.

2) ಈ ಹಿಂದೆ ಇದ್ದ ರೈಟ್ ಟು ಮ್ಯಾಚ್ ಅವಕಾಶ ಐಪಿಎಲ್ ಟೂಮ್​ಗಳಿಗೆ ಇಲ್ಲ. ಎಂಟು ತಂಡಗಳು ತಲಾ ಗರಿಷ್ಠ ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಳ್ಳಬಹುದು. ಇವರಲ್ಲಿ ಇಬ್ಬರು ವಿದೇಶೀ ಆಟಗಾರರನ್ನ ಮಾತ್ರ ಉಳಿಸಿಕೊಳ್ಳಲು ಅನುಮತಿ ಇದೆ.

3) ಡಿಸೆಂಬರ್ ತಿಂಗಳಲ್ಲಿ ಅಟಗಾರರ ಹರಾಜು ನಡೆಯಲಿದೆ. ಆದರೆ, ದಿನಾಂಕ ಇನ್ನೂ ಘೋಷಣೆ ಆಗಬೇಕಿದೆ.

4) ಹೊಸ ತಂಡಗಳಾದ ಅಹ್ಮದಾಬಾದ್ ಮತ್ತು ಲಕ್ನೋ ಫ್ರಾಂಚೈಸಿಗಳು ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ತಲಾ ಮೂರು ಆಟಗಾರರನ್ನ ಆಯ್ದುಕೊಳ್ಳುವ ಅವಕಾಶ ಹೊಂದಿವೆ. ಉಳಿದ ಎಂಟು ತಂಡಗಳು ರೀಟೈನ್ ಮಾಡಿಕೊಂಡಿರುವ ಆಟಗಾರರನ್ನ ಬಿಟ್ಟು.

5) ಎಂಟು ತಂಡಗಳು ತಲಾ ನಾಲ್ವರು ಆಟಗಾರರನ್ನ ಉಳಿಸಿಕೊಳ್ಳುವ ಅವಕಾಶ ಹೊಂದಿವೆ. ಆದರೆ ಆ ಆಟಗಾರ ಒಪ್ಪಿದರೆ ಮಾತ್ರ. ಅಂದರೆ ಪರಸ್ಪರ ಸಮ್ಮತಿ ಮೇರೆಗೆ ಆಟಗಾರನನ್ನು ರೀಟೈನ್ ಮಾಡಿಕೊಳ್ಳಬಹುದು. ಆಟಗಾರ ಇಚ್ಛಿಸಿದಲ್ಲಿ ಆತ ಹರಾಜಿಗೆ ಒಳಗಾಗಬಹುದು.

ಇದನ್ನೂ ಓದಿ:IPL 2022- ಐಪಿಎಲ್​ಗೆ ಎರಡು ಹೊಸ ತಂಡಗಳು; ಬಿಡ್ ಆದ ಹಣ ಎಷ್ಟು, ಬಿಸಿಸಿಐಗೆ ಬಂದ ಲಾಭವೆಷ್ಟು?

6) ಎಂಟು ತಂಡಗಳು ತಮ್ಮ ನಾಲ್ವರು ಆಟಗಾರರನ್ನ ಉಳಿಸಿಕೊಳ್ಳಲು ನವೆಂಬರ್ 30 ಕೊನೆಯ ದಿನವಾಗಿದೆ.

7) 2022ರ ಏಪ್ರಿಲ್ ತಿಂಗಳಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾಗುವ ಸಾಧ್ಯತೆ ಇದೆ. ಆದರೆ, ಹರಾಜು ಪ್ರಕ್ರಿಯೆ ಬಳಿಕ ಅಥವಾ ಮುಂದಿನ ವರ್ಷಾರಂಭದಲ್ಲಿ ಬಿಸಿಸಿಐ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

8) ಐಪಿಎಲ್ 2022 ಪಂದ್ಯಾವಳಿಯಲ್ಲಿ ಒಟ್ಟು ಪಂದ್ಯಗಳ ಸಂಖ್ಯೆ 74. ಪ್ರತೀ ತಂಡಕ್ಕೆ 14 ಪಂದ್ಯಗಳು. ತವರಿನಲ್ಲಿ ಏಳು, ಹೊರಗೆ ಏಳು ಪಂದ್ಯಗಳು. 2011ರ ಐಪಿಎಲ್ ಮಾದರಿಯಲ್ಲಿ 20222 ಐಪಿಎಲ್ ಟೂರ್ನಿಯ ಸ್ವರೂಪ ಇರುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button