ಬೆಂಗಳೂರು: ಚಿನ್ನ ಮತ್ತು ಬೆಳ್ಳಿ (Gold And Silver Rate Today) ಇವತ್ತು ಕೊಂಚ ಹಗುರವಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 47,460 ರೂ.ಗೆ ಶನಿವಾರ ಮಾರಾಟವಾಗುತ್ತಿದೆ. ಶುಕ್ರವಾರ 47,470 ರೂ.ಗೆ ಮಾರಾಟಗೊಂಡಿತ್ತು. ಇಂದು 10 ರೂ.ನಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡಿದೆ. ಇವತ್ತು ಕೆಜಿ ಬೆಳ್ಳಿ 65,300 ರೂ.ಗೆ ಮಾರಾಟವಾಗುತ್ತಿದೆ. ನಿನ್ನೆಯಕ್ಕಿಂತ ಇವತ್ತು ಸಹ ಕೊಂಚ ಇಳಿಕೆಯಾಗಿದೆ.
ಭಾರತದಲ್ಲಿ ಚಿನ್ನ ಅಧಿಕವಾಗಿ ಖರೀದಿ ಮಾಡಲಾಗುತ್ತಿದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಬೆಲೆ ಬೇರೆಯಾಗಿರುತ್ತದೆ. ಎಕ್ಸೆಸ್ ಡ್ಯೂಟಿ (Excise Duty), ಸ್ಟೇಟ್ ಟ್ಯಾಕ್ಸ್ (State Tax) ಮತ್ತು ಮೇಕಿಂಗ್ ಚಾರ್ಜ್ (Making Charge) ನಿಂದಾಗಿ ಬೆಲೆಯಲ್ಲಿ ವ್ಯತ್ಯಾಸ ಅಗಿರುತ್ತದೆ. ಇವತ್ತು ದೆಹಲಿ (Delhi) ಮತ್ತು ಮುಂಬೈ(Mumbai)ನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ಕ್ರಮವಾಗಿ 46,700 ರೂ. ಮತ್ತು 46,460 ರೂ.ಗೆ ಮಾರಾಟಗೊಳ್ಳುತ್ತಿದೆ. ಚೆನ್ನೈನಲ್ಲಿ 44,840 ರೂ.ಗೆ 10 ಗ್ರಾಂ ಸಿಗುತ್ತಿದೆ.
ಬೆಂಗಳೂರಿನಲ್ಲಿ ಬೆಲೆ ಸ್ಥಿರ:
ಬೆಂಗಳೂರಿ(Bengaluru Gold Price)ನಲ್ಲಿ ಹಳದಿ ಲೋಹ 22 ಕ್ಯಾರೆಟ್ 10 ಗ್ರಾಂಗೆ 44,450 ರೂಪಾಯಿ ಮತ್ತು 24 ಕ್ಯಾರೆಟ್ 10 ಗ್ರಾಂ 48,600 ರೂ.ಗಳಷ್ಟಿದೆ. ಬೆಂಗಳೂರಿನಲ್ಲಿ ಶುಕ್ರವಾರ ಮತ್ತು ಶನಿವಾರದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.ಅಕ್ಟೋಬರ್ 18, 18, 20 ಮತ್ತು 21 ರಂದು ಬೆಲೆ ಏರಿಕೆ ಕಂಡಿತ್ತು. ಇಂದು ಬೆಲೆಯಲ್ಲಿ ಯಾವುದೇ ಬದಲಾವಣೆ ಆಗದೇ ಸ್ಥಿರವಾಗಿದೆ.ಸೆಪ್ಟೆಂಬರ್ ನಲ್ಲಿ ಶೇ.-2.82ರಷ್ಟು ಇಳಿಕೆಯಾಗಿದೆ. ಬೆಲೆಯಲ್ಲಿ ಏರಿಕೆಯಾಗುತ್ತಿದ್ರೂ ಚಿನ್ನ ಖರೀದಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಕೆಲ ದಿನಗಳ ಬಳಿಕ ಚಿನ್ನದ ಬೆಲೆ ಕೊಂಚ ಇಳಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಱರು ಅಂದಾಜಿಸುತ್ತಿದ್ದಾರೆ. ಬೆಲೆ ಇಳಿಕೆ ಆಗುತ್ತಿರುವ ಸಂದರ್ಭದಲ್ಲಿ ಖರೀದಿ ಸೂಕ್ತ ಎಂದು ಹೇಳಲಾಗುತ್ತಿದೆ.