ರಾಜ್ಯಸುದ್ದಿ

ಯೊಹಾನಿ ಹಾಡಲಿರುವ Manike Mage Hithe ಹಾಡಿಗೆ ಹೆಜ್ಜೆ ಹಾಕಲಿರುವ ನೋರಾ ಫತೇಹಿ-ಸಿದ್ಧಾರ್ಥ್​ ಮಲ್ಹೋತ್ರಾ..!

ಶ್ರೀಲಂಕಾದ ಗಾಯಕಿ ಯೊಹಾನಿ (Yohani) ಈಗ ಯಾರಿಗೆ ಗೊತ್ತಿಲ್ಲ ಹೇಳಿ. ‘ಮನಿಕೆ ಮಗೆ ಹಿತೆ’ (Manike Mage Hithe) ಹಾಡು ಹಾಡಿ ಶಾರ್ಟ್​ ವಿಡಿಯೋ ಆ್ಯಪ್​ ಹಾಗೂ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆದ ಗಾಯಕಿ. ಈ ಹಾಡು ಸಂಗೀತ ಪ್ರಿಯರಲ್ಲಿ ಯಾವ ಮಟ್ಟದಲ್ಲಿ ಕ್ರೇಜ್​ ಹುಟ್ಟುಹಾಕಿತ್ತು ಎಂದರೆ, ಬಾಲಿವುಡ್  ಸೇರಿದಂತೆ ಇತರೆ ಸಿನಿರಂಗದ ಸೆಲೆಬ್ರಿಟಿಗಳು ಈ ಹಾಡಿಗೆ ಹೆಜ್ಜೆ ಹಾಕಿ ವಿಡಿಯೋ ಹಂಚಿಕೊಳ್ಳಲಾರಂಭಿಸಿದ್ದರು.

ಅಲ್ಲದೆ, ಈ ಹಾಡಿನ ಕ್ರೇಜ್​ ಇನ್ನೂ ಸಹ ಕಡಿಮೆಯಾಗಿಲ್ಲ ಎಂದರೆ ತಪ್ಪಾಗದು. ಇಂತಹ ಯಶಸ್ಸು ಕಂಡ ಗಾಯಕಿ ಯೊಹಾನಿ ನಂತರದಲ್ಲಿ ಹೈದರಾಬಾದಿಗೆ ಬಂದು ಕನ್ಸರ್ಟ್​ ಮಾಡಿದರು. ಕನ್ಸರ್ಟ್​ ವೇಳೆ ಸ್ಟೇಜ್​ ಮೇಲೆ ಗಾಯಗೊಂಡು ಸುದ್ದಿಯಾಗಿದ್ದರು. ಈ ಶ್ರೀಲಂಕನ್ ಪ್ರತಿಭೆ ಈಗ ಬಾಲಿವುಡ್​ನಲ್ಲೂ ಹಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 

ಗಾಯಕಿ ಯೊಹಾನಿ ಈಗ ಬಾಲಿವುಡ್​ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇವರು ‘ಥ್ಯಾಂಕ್‌ ಗಾಡ್’ ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಡಲು ಸಜ್ಜಾಗಿದ್ದಾರೆ.  ಬಾಲಿವುಡ್ ನಟ ಅಜಯ್ ದೇವ್‌ಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ನಟಿಸಲಿರುವ ಸಿನಿಮಾದಲ್ಲಿ ಹಿಂದಿ ವರ್ಷನ್ ಹಾಡನ್ನು ಯೊಹಾನಿ ಹಾಡಲಿದ್ದಾರೆ. ಈ ವಿಷಯ ಈಗ ಅಧಿಕೃತವಾಗಿದೆ.

Related Articles

Leave a Reply

Your email address will not be published. Required fields are marked *

Back to top button