ದೇಶಸುದ್ದಿ

ಮೂರನೇ ಅಲೆ ಬರೋದಿಲ್ವಂತೆ, ಆರಾಮಾಗಿರಿ ಅಂತಿದ್ದಾರೆ ಡಾಕ್ಟರ್ಸ್..!

Corona cases decreasing in Karnataka: ಈ ಹಿಂದೆ ನವೆಂಬರ್ ವೇಳೆಗೆ ಮೂರನೇ ಅಲೆ ಬರುತ್ತೆ ಎಂದು ತಜ್ಞರು ಹೇಳಿದ್ದರು. ಆದ್ರೆ ಅಕ್ಟೋಬರ್ ವೇಳೆಗೆ ಕೊರೋನಾ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುತ್ತಿದೆ.

ಬೆಂಗಳೂರು(ಅ.19): ಕಳೆದ 2 ವರ್ಷಗಳಿಂದ ಬಿಟ್ಟು ಬಿಡದೆ ಕಾಡಿದ ಮಾಹಾಮಾರಿ ಕೊರೋನಾ(Coronavirus)ವನ್ನು ಯಾರೂ ಸಹ ಅಷ್ಟು ಸುಲಭವಾಗಿ ಮರೆಯಲಾರರು. ಅಷ್ಟರ ಮಟ್ಟಿಗೆ ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡಿದೆ ಕೊರೋನಾ. ಕೊರೋನಾ ಮೊದಲನೇ ಅಲೆ(Corona First Wave)ಗಿಂತ 2ನೇ ಅಲೆ ತುಂಬಾ ಭೀಕರವಾಗಿತ್ತು. ಆ ಸಮಯದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಿತ್ತು.

1 &2ನೇ ಅಲೆಗಳಿಗಿಂತ ಮೂರನೇ ಅಲೆ ಇನ್ನೂ ಭಯಾನಕವಾಗಿರುತ್ತೆ ಎಂದು ತಜ್ಞರು ಹೇಳಿದ್ದರು. ಮುಂಜಾಗ್ರತಾ ಕ್ರಮವಾಗಿ ಸರ್ಕಾರಗಳು ವೈದ್ಯಕೀಯ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಯಾಕೆಂದರೆ ಕೊರೋನಾ 2ನೇ ಅಲೆ ವೇಳೆ ಬೆಡ್​, ಆಕ್ಸಿಜನ್ ಸಿಗದೇ ಸಾವಿರಾರು ಮಂದಿ ಅಸುನೀಗಿದ್ದರು. ಈ ಘಟನೆ ಮರುಕಳಿಸಬಾರದೆಂದು ಸರ್ಕಾರಗಳು ಪ್ರಯತ್ನ ಮೀರಿ ಸಿದ್ದತೆ ಮಾಡಿಕೊಂಡಿದ್ದವು.

Related Articles

Leave a Reply

Your email address will not be published. Required fields are marked *

Back to top button