ನವದೆಹಲಿ(ಅ. 19): ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಎಲ್ಲಾ ರಾಜಕೀಯ ಪಕ್ಷಗಳು ಅಣಿಯಾಗುತ್ತಿದ್ದು ಕಾಂಗ್ರೆಸ್ (Congress) ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗುತ್ತಿದೆ. ಕಾಂಗ್ರೆಸ್ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ (Manifesto) ವಿಶಿಷ್ಟವಾದ ಘೋಷಣೆ ಮಾಡಲು ಮುಂದಾಗಿದೆ.
ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ (BJP), ಸಮಾಜವಾದಿ ಪಕ್ಷ (Samajavadi Party) ಹಾಗೂ ಬಹುಜನ ಸಮಾಜ ಪಕ್ಷ (Bahujana Samaj Party)ಗಳಿಗಿಂತ ಮೊದಲು ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿದೆ. ಕಾಂಗ್ರೆಸ್ ಪರವಾದ ಅಲೆ ಸೃಷ್ಟಿ ಮಾಡಲು ಉತ್ತರ ಪ್ರದೇಶದಾದ್ಯಂತ ನಾಳೆಯಿಂದ (ಅಕ್ಟೋಬರ್ 20ರಿಂದ) ‘ಪ್ರತಿಜ್ಞಾ ಯಾತ್ರೆ’ (Congress Pratijna Yatra) ಹಮ್ಮಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಶೇಕಡಾ 40ರಷ್ಟು ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆಯನ್ನು ಮಹಿಳಾ ಪ್ರಧಾನವನ್ನಾಗಿ ಮಾಡಲು ಮುಂದಾಗಿದೆ.
ಸದ್ಯ ಲಕ್ನೋಗೆ (Luknow) ತೆರಳಿರುವ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು (Uttar Pradesh Congress In Charge and AICC General Secretary Priyanka Gandhi Vadra) ಅಲ್ಲಿ ಸುದ್ದಿಗೋಷ್ಠಿ (Press Meet) ನಡೆಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಜ್ಞಾ ಯಾತ್ರೆಯ ರೂಪು ರೇಖೆಗಳನ್ನು ತಿಳಿಸಲಿದ್ದಾರೆ. ಬಳಿಕ ನಾಳೆಯಿಂದ ಅವರು ಪ್ರತಿಜ್ಞಾ ಯಾತ್ರೆಗೆ ಹೊರಡಲಿದ್ದಾರೆ. ಈ ಮೊದಲು ಅಕ್ಟೋಬರ್ 17ರಿಂದಲೇ ಪ್ರತಿಜ್ಞಾ ಯಾತ್ರೆ ಹೊರಡಲು ಸಿದ್ದತೆ ನಡೆದಿತ್ತು. ಲಖೀಂಪುರ್ ಖೇರಿ ಹಿಂಸಾಚಾರ (Lakhimpur Kheri Violence) ಮತ್ತು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (Congress Working Committee Meeting) ಕಾರಣಗಳಿಂದ ಈಗ ಅಕ್ಟೋಬರ್ 20ರಿಂದ ಯಾತ್ರೆ ನಡೆಯಲಿದೆ.