ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ (Sindagi – Hanagal By Elections) ಹತ್ತಿರವಾಗುತ್ತಿರುವ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ (BJP, Congress, JDS) ಪಕ್ಷಗಳ ಮುಖಂಡರು ಒಬ್ಬರ ಮೇಲೊಬ್ಬರು ಹರಿಹಾಯುತ್ತಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಸಿದ್ದರಾಮಯ್ಯ (Former Chief Minister Basavaraj Bommai) ವಿರುದ್ಧ ನೀಡಿದ ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸಿಎಂಗೆ ಕರಾರುವಕ್ಕಾಗಿ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದಿನಿಂದಲೂ ಆರ್ಎಸ್ಎಸ್ನಲ್ಲಿ (RSS) ಇದ್ದವರಾ? ಅವರು ಎಲ್ಲಿಂದ ಬಂದವರೆಂಬುದು ಎಲ್ಲರಿಗೂ ಗೊತ್ತು, ಈಗ ಅಧಿಕಾರಕ್ಕೋಸ್ಕರವಾಗಿ ಈ ರೀತಿ ಆರ್ಎಸ್ಎಸ್ ಹೇಳಿದಂತೆ ಕುಣಿಯುತ್ತಿದ್ದಾರೆ ಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಹೇಳಿಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬೊಮ್ಮಾಯಿ ಅವರ ತಂಡ ಎಸ್ಆರ್ ಬೊಮ್ಮಾಯಿ ಜನತಾ ಪಕ್ಷ, ಜನತಾ ದಳದಲ್ಲಿ ಇದ್ದವರು. ಜನತಾ ದಳದಿಂದಲೇ ಮುಖ್ಯಮಂತ್ರಿ ಕೂಡ ಆಗಿದ್ದವರು. ಬಸವರಾಜ ಬೊಮ್ಮಾಯಿ ಕೂಡ ಜೆಡಿಎಸ್ನಲ್ಲೇ ಇದ್ದವರು. ಜೆಎಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ (Former Chief Minister JH Patel) ರಾಜಕೀಯ ಕಾರ್ಯದರ್ಶಿಯಾಗಿದ್ದರು. ಅದೆಲ್ಲಾ ಮರೆತು ಹೋಯ್ತಾ. ಅವರು ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದವರು. 2008ರಲ್ಲಿ ಅವರು ಬಿಜೆಪಿಗೆ ಹೋಗಿದ್ದು ಎಂಬುದು ನೆನಪಿರಲಿ ಎಂದರು.