ಒಂಟಿ ಮನೆಲೀ ದೊಡ್ಡ ದೊಡ್ಡ ಮಂದಿ ಅಡ್ಡಡ್ಡ ಉದ್ದುದ್ದ ಮಲಗ್ವರೆ. ಬದುಕವರು ಅವರು, ನೋಡುವವರು ನಾವು.. ಊರೆಲ್ಲಾ ಕ್ಯಾಮರಾ ಇಟ್ಟವರೇ..ಹೊರಗಡೆಯಿಂದ ಅರಮೆನೆ, ಒಳಗಡೆ ಬಂದರೇ ಸೆರೆಮನೆ.. ತೊಂಬತ್ತೆಂಟು ದಿನ ಜೀವಂತ ಇದ್ದರೆ ಅವರಿಗೆ ಹಾಫ್ ಕೋಟಿ ರೂಪಾಯಿ.. ಬಿಗ್ ಬಾಸ್.. ಬಿಗ್ ಬಾಸ್..’ಹೌದು ಕಿರುತರೆಯ ಬಿಗ್ಬಾಸ್(Bigboss) ರಿಯಾಲಿಟಿ ಶೋ ಅಂದ್ರೆ ಎಲ್ಲರಿಗೂ ಸಖತ್ ಫೇವರಿಟ್(Favriout).
ಬಿಗ್ಬಾಸ್ ಸೀಸನ್ ಆರಂಭವಾದರೆ, ಸರಿಯಾಗಿ ಶೋ ಶುರುವಾಗುವ ಮುನ್ನ ಟಿವಿ (Tv)ಮುಂದೆ ರಿಮೋಟ್(Remote) ಹಿಡಿದು ಕೂರುವವರು ಇದ್ದಾರೆ. ಕ್ರಿಕೆಟ್ನಲ್ಲಿ ಐಪಿಎಲ್(IPL) ಟೂರ್ನಿ ಹೇಗೋ ಹಾಗೆ ರಿಯಾಲಿಟಿ ಶೋಗಳಲ್ಲಿ ಬಿಗ್ಬಾಸ್ ಸಖತ್ ಕಿಕ್ ನೀಡುತ್ತೆ. ಹೀಗಾಗಿಯೇ ಬಿಗ್ ಬಾಸ್ ಶೋ ಬಹಳ ಜನಪ್ರಿಯತೆ ಪಡೆದುಕೊಂಡಿದೆ.
ಬಿಗ್ ಬಾಸ್ ಎಲ್ಲಾ ಭಾಷೆಗಳಲ್ಲೂ ಪ್ರಸಾರವಾಗುತ್ತೆ. ಎಲ್ಲಾ ಭಾಷೆಗಳಲ್ಲೂ ಆಯಾ ಭಾಷೆಗಳ ಸ್ಟಾರ್ ನಟರು ನಿರೂಪಣೆ ಮಾಡುತ್ತಾರೆ. ಹಿಂದಿ ಭಾಷೆಯ ಬಿಗ್ ಬಾಸ್ ಸೀಸನ್ 3 ರಿಂದಲೂ ಸಲ್ಮಾನ್ ಖಾನ್(Salman Khan) ಶೋ ನಿರೂಪಣೆ(Host) ಜವಾಬ್ದಾರಿ ಹೊತ್ತಿದ್ದಾರೆ. ಅಕ್ಟೋಬರ್ 2ರಿಂದ ಹಿಂದಿ ಬಿಗ್ ಬಾಸ್ ಸೀಸನ್ 15 ಶುರುವಾಗಿ ಸಖತ್ ಕಿಕ್ ನೀಡುತ್ತಿದೆ.