ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಶೀಘ್ರದಲ್ಲೇ DA ಬಾಕಿ ಬಗ್ಗೆ ಕೇಂದ್ರ ನಿರ್ಧಾರ..!
ಕೇಂದ್ರ ಸರ್ಕಾರಿ ನೌಕರರಿಗೆ(Central Government Employees) ಈಗಾಗಲೇ ಅವರ ಬ್ಯಾಂಕ್ ಅಕೌಂಟ್(Bank Accounts)ಗಳಿಗೆ ಶೇ. 28ರಷ್ಟು ಭತ್ಯೆ ಬರಲಾರಂಭಿಸಿದೆ. ಆದರೂ, ನೌಕರರು ಒಂದು ವಿಚಾರದಲ್ಲಿ ನಿರಾಶೆಯಾಗಿದ್ದಾರೆ. ಅದೇನೆಂದರೆ, ನೌಕರರ 18 ತಿಂಗಳ ಬಾಕಿಗೆ ಸಂಬಂಧಿಸಿದಂತೆ ಅವರ ನಿರೀಕ್ಷೆಗಳನ್ನು ಈಡೇರಿಸಲಾಗಿಲ್ಲ. ಯಾಕೆಂದರೆ ಸರ್ಕಾರ ತುಟ್ಟಿ ಭತ್ಯೆ (Dearness Allowance- DA) ಘೋಷಣೆ ಮಾಡಿದಾಗ, ಕೇವಲ ವರ್ಧಿತ ಡಿಎಯನ್ನು ಮಾತ್ರ ಪಡೆಯುತ್ತಾರೆ ಎಂದು ಹೇಳಲಾಗಿತ್ತು, ಹಾಗೂ, ಬಾಕಿ ಹಣವನ್ನು ನಿರಾಕರಿಸಲಾಗಿತ್ತು.
ಆದರೂ, 18 ತಿಂಗಳ ಬಾಕಿ ಇರುವ ವಿಚಾರ ಈಗ ಪ್ರಧಾನಿ ಮೋದಿ ಅಂಗಳಕ್ಕೆ ತಲುಪಿದ್ದು, ಅವರು ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ತಮಗೆ ಬಾಕಿ ಸಿಗುವ ಭರವಸೆ ಬಗ್ಗೆ ಕೇಂದ್ರ ಸರ್ಕಾರದ ಸಿಬ್ಬಂದಿಯ ಡಿಎ(DA) ಬಾಕಿಯ ಆಶಯಗಳು ಮತ್ತೆ ಚಿಗುರೊಡೆದಿದೆ.
ಪ್ರಧಾನಿ ಮೋದಿ 18 ತಿಂಗಳ ಬಾಕಿಯನ್ನು ಅನುಮೋದಿಸಿದರೆ, ಕೇಂದ್ರ ಸರ್ಕಾರದ ಸುಮಾರು 1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರ ಖಾತೆಗಳಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಲಾಗುತ್ತದೆ.