ರಾಜ್ಯ
ಬೆಂಗಳೂರು ರೌಡಿ ಮುಕ್ತ ನಗರವಾಗಬೇಕು: ಆರಗ ಜ್ಞಾನೇಂದ್ರ
ರಾಜ್ಯವ್ಯಾಪಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಎಸಿಪಿ ಸೇರಿ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಸ್ತ್ರಾಸ್ತ್ರ ಪರವಾನಗಿ ಆನ್ಲೈನ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದ್ದು, ಆನ್ಲೈನ್ ಮುಖಾಂತರವೇ ಎಲ್ಲ ಸೌಲಭ್ಯಗಳು ಒಂದೇ ಸೂರಿನಲ್ಲಿನಡಿಯಲ್ಲಿ ಲಭ್ಯವಿದೆ ಎಂದರು.ಇನ್ನು ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ವಿಸಬೇಕಾಗಿದ್ದು, ಜನಸ್ನೇಹಿ ಪೊಲೀಸ್ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ಅದಲ್ಲದೆ ಬೆಂಗಳೂರು ರೌಡಿ ಮುಕ್ತ ನಗರವಾಗಬೇಕು. ಹಾಗೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ವ್ಯವಾಹರ ನಡೆಯುತ್ತಿದ್ದು, ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ತಲೆ ಹಾಕಬಾರದು ಎಂದು ಹೇಳಿದರು. ಕೆಲವರು ನಕಲಿ ದಾಖಲೆ ಸೃಷ್ಟಿಸಿ ಸೈಟ್ ಕಬಳಿಸೊ ಯತ್ನ ಮಾಡುತ್ತಿದ್ದು, ಮೂಲ ಮಾಲೀಕರಿಗೆ ರೌಡಿ ಮೂಲಕ ಬೆದರಿಕೆ ಹಾಕ್ತಿದ್ದಾರೆ ಎಂದು ಸಚಿವ ಆರಗ ಜ್ಙಾನೇಂದ್ರ ಹೇಳಿದರು.