Rajakiya

ಮುಂದಿನ ಚುನಾವಣೆ ಎದುರಿಸಲು ಮತ್ತೊಂದು ಹೆಜ್ಜೆ ಇಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

ಬೆಂಗಳೂರು, ಅ. 01: ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಮಾಡಿದ್ದ ಒತ್ತಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಣಿಸಿದ್ದಾರೆ. ಹೀಗಾಗಿ ಪಕ್ಷದ ಶಾಸಕರಿಗೆ ಬಸವರಾಜ ಬೊಮ್ಮಾಯಿ ಸಿಗುತ್ತಿಲ್ಲ ಎಂಬ ಆರೋಪವನ್ನು ಹೋಗಲಾಡಿಸಲು ಸಿಎಂ ಬೊಮ್ಮಾಯಿ ಪ್ರತಿ ಗುರುವಾರ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಭೇಟಿಯಾಗಲು ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಗುರುವಾರ ಪಕ್ಷದ ಶಾಸಕರ ಅಹವಾಲುಗಳನ್ನು ಆಲಿಸುವ ಮೂಲಕ ಹೈಕಮಾಂಡ್ ಇಟ್ಟಿರುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಆದರೆ ಶಾಸಕರೊಂದಿಗೆ ಹಮ್ಮುಬಿಮ್ಮಿಲ್ಲದೆ ಜೊತೆಗೆ ಮೊದಲಿದ್ದಂತೆಯೆ ಮಾತನಾಡುವ ಮೂಲಕ ಎಲ್ಲ ಶಾಸಕರು ಮೆಚ್ಚುವಂತೆ ವರ್ತಿಸಿದ್ದಾರೆ.

ಸಿಎಂ ಅಧಿಕೃತ ನಿವಾಸ ರೇಸ್‌ಕೋರ್ಸ್ ರಸ್ತೆೆಯ ಕಾಟೇಜ್ ನಂ. 2ನಲ್ಲಿ ಇಡೀ ದಿನ ಪಕ್ಷದ ಶಾಸಕರು ಹಾಗೂ ಸಂಸದರ ಭೇಟಿಗಾಗಿಯೇ ಸಮಯವನ್ನು ಮೀಸಲಿಟ್ಟಿದ್ದರು. ತಮ್ಮ ಭೇಟಿಗೆ ಬಂದಿದ್ದ ಶಾಸಕರನ್ನು ವಿಶ್ವಾಸದಿಂದ ಕೂರಿಸಿಕೊಂಡು ಸಮಾಧಾನದಿಂದ ಅವರ ಕ್ಷೇತ್ರಗಳ ಸಮಸ್ಯೆೆಗಳು, ಆಗಬೇಕಿರುವ ಅಭಿವೃದ್ಧಿ ಕೆಲಸಗಳು, ಅನುದಾನ ಬಿಡುಗಡೆ ಸೇರಿದಂತೆ ಎಲ್ಲ ಮಾಹಿತಿಯನ್ನು ಪ್ರತಿಯೊಬ್ಬ ಶಾಸಕರಿಂದಲೂ ಪ್ರತ್ಯೇಕವಾಗಿ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಶಾಸಕರೊಂದಿಗೆ ಬೊಮ್ಮಾಯಿ ಮಾತುಕತೆ ಹೇಗಿತ್ತು? ಮುಂದಿದೆ ಸಂಪೂರ್ಣ ಮಾಹಿತಿ!
ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಿದ ಸಿಎಂ ಬೊಮ್ಮಾಯಿ!

ಸಿಎಂ ಭೇಟಿ ಬಂದಿದ್ದ ಕೆಲವು ಶಾಸಕರು ತಮ್ಮ ಕ್ಷೇತ್ರದಲ್ಲಿ ಆಗಬೇಕಿರುವ ಎಲ್ಲ ಕೆಲಸಗಳ ದೊಡ್ಡ ಪಟ್ಟಿಯನ್ನೇ ತಂದಿದ್ದರು ಎಂಬ ಮಾಹಿತಿಯಿದೆ. ಸಿಎಂ ಬೊಮ್ಮಾಯಿ ಅವರು ಶಾಸಕರ ಅಹವಾಲು ಆಲಿಸಿದರು. ಜೊತೆಗೆ ಕೆಲವು ಸಮಸ್ಯೆೆಗಳಿಗೆ ತಾವೇ ನೇರವಾಗಿಯೇ ಅಧಿಕಾರಿಗಳಿಗೆ ಕರೆ ಮಾಡಿ, ಆಯಾ ಶಾಸಕರ ಸಮಸ್ಯೆೆಗಳನ್ನು ಅಲ್ಲಿಯೇ ಪರಿಹರಿಸುವ ಪ್ರಯತ್ನವನ್ನೂ ಸಿಎಂ ಬೊಮ್ಮಾಯಿ ಮಾಡಿದ್ದಾರೆ ಎನ್ನಲಾಗಿದೆ.

ಸಿಎಂ ಭೇಟಿಗೆ ಬಂದಿದ್ದ ಕೆಲವು ಶಾಸಕರು ಎಲ್ಲರೆದುರು ತಮ್ಮ ಸಮಸ್ಯೆೆ ಹೇಳಿಕೊಳ್ಳಲು ಹಿಂದೇಟು ಹಾಕಿದರು. ಹೀಗಾಗಿ ಅಂತಹ ಶಾಸಕರನ್ನು ಪ್ರತ್ಯೇಕವಾಗಿ ಮತ್ತೊಂದು ಕೋಣೆಯಲ್ಲಿ ಕರೆದುಕೊಂಡು ಹೋಗಿ ಅವರೊಂದಿಗೆ ಚರ್ಚಿಸಿ, ಅವರ ಸಮಸ್ಯೆೆಗೆ ಪರಿಹಾರ ದೊರಕಿಸಿಕೊಡುವ ಕೆಲಸವನ್ನು ಬೊಮ್ಮಾಯಿ ಮಾಡಿದರು ಎಂದು ತಿಳಿದು ಬಂದಿದೆ.

ಶಾಸಕರ ಯಾವುದೇ ರೀತಿಯ ಸಮಸ್ಯೆೆ ಇದ್ದರೂ. ಮುಕ್ತವಾಗಿ ಹೇಳಿಕೊಳ್ಳಲು ಸಿಎಂ ಬೊಮ್ಮಾಯಿ ಮನವಿ ಮಾಡಿದ್ದರು. ಅನೇಕ ಶಾಸಕರು ತಮ್ಮ ಸಮಸ್ಯೆೆಯ ಜೊತೆಗೆ ಪಕ್ಷದ ಹಾಗೂ ಸರ್ಕಾರದ ವ್ಯವಸ್ಥೆೆಯ ಬಗ್ಗೆೆಯೂ ವಿವರಿಸಿದ್ದಾರೆ. ಪಕ್ಷದ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button