ಸುದ್ದಿ
ಅಪಘಾತದ ಪರಿಹಾರ ನೀಡದ ಕೆಎಸ್ಆರ್ಟಿಸಿ: ಬಸ್ ಜಪ್ತಿ
ದಾವಣಗೆರೆ: ಅಪಘಾತದ ಪರಿಹಾರವನ್ನು ನೀಡುವಲ್ಲಿ ವಿಫಲವಾಗಿರುವ ಕಾರಣಕ್ಕಾಗಿ ನ್ಯಾಯಾಲಯದ ಆದೇಶದಂತೆ ಹಾವೇರಿ ವಿಭಾಗದ ಕೆಎಸ್ಆರ್ಟಿಸಿ ಬಸ್ ಅನ್ನು ಗುರುವಾರ ಜಪ್ತಿ ಮಾಡಲಾಗಿದೆ.
2014ರಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ಹಾವೇರಿ ಡಿಪೊಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಕಾರಿಗೆ ಡಿಕ್ಕಿಯಾಗಿ ದಾವಣಗೆರೆಯ ಗೌರಿ ಎಸ್. ಪಾಟೀಲ್ ಮೃತಪಟ್ಟಿದ್ದರು. ಅವರಿಗೆ ಪರಿಹಾರವಾಗಿ ₹ 2.88 ಕೋಟಿ ಪರಿಹಾರ ನೀಡುವಂತೆ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿತ್ತು. ಆದರೆ ಕೆಸ್ಆರ್ಟಿಸಿ ಹಾವೇರಿ ವಿಭಾಗವು ಈ ಪರಿಹಾರವನ್ನು ನೀಡಿರಲಿಲ್ಲ.
ಬಸ್ ಜಪ್ತಿ ಮಾಡುವಂತೆ ನ್ಯಾಯಾಲಯವು ಆದೇಶಿಸಿತ್ತು. ಅದರಂತೆ ಕೋರ್ಟ್ನ ಅಮೀನರಾದ ಶ್ರೀಧರ್, ಮಹೇಶ್, ರಾಜ್ಕುಮಾರ್, ಗುರು, ಪೊಲೀಸರು, ಪಂಚಾಯಿತಿದಾರರು ಬಂದು ಬಸ್ಗಳನ್ನು ಜಪ್ತಿ ಮಾಡಿದ್ದಾರೆ.