ಸುದ್ದಿ

ಕರಡಿ ದಾಳಿ: ವ್ಯಕ್ತಿಗೆ ತೀವ್ರ ಗಾಯ

ಚನ್ನಗಿರಿ: ತಾಲ್ಲೂಕಿನ ಜೋಳದಹಾಳ್ ಗ್ರಾಮದ ವ್ಯಕ್ತಿಯೊಬ್ಬರು ಗುರುವಾರ ಬೆಳಿಗ್ಗೆ ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಮೂರು ಕರಡಿಗಳು ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿವೆ.

ಜೋಳದಹಾಳ್ ಗ್ರಾಮದ ರೈತ ಮಲ್ಲಪ್ಪ(50) ಕರಡಿ ದಾಳಿಗೆ ತುತ್ತಾದವರು. ಒಂದು ಹೆಣ್ಣು ಕರಡಿ ಹಾಗೂ ಎರಡು ಮರಿ ಕರಡಿಗಳ ದಾಳಿಯಿಂದ ಮಲ್ಲಪ್ಪ ಅವರ ಎಡ ತೋಳು ಹಾಗೂ ಬೆನ್ನಿನ ಮೇಲೆ ತೀವ್ರ ಗಾಯಗಳಾಗಿವೆ. ಭುಜದ ಮೇಲೆ ರಂಧ್ರವಾಗಿದೆ. ಕರಡಿಗಳಿಂದ ತಪ್ಪಿಸಿಕೊಂಡು ಬಂದು ಚನ್ನಗಿರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡಡೆದುಕೊಂಡಿದ್ದಾರೆ. ನಂತರದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದೆ. ವಿಷಯ ತಿಳಿದ ಚನ್ನಗಿರಿ ವಲಯ ಅರಣ್ಯಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ ಮಲ್ಲಪ್ಪ ಅವರಿಗೆ ಚಿಕಿತ್ಸೆ ಕೊಡಿಸಲು ನೆರವಾದರು.

2017ರಲ್ಲಿ ಈ ಗ್ರಾಮದಲ್ಲಿ ಕರಡಿಗಳ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಕಾಡು ಪ್ರಾಣಿಗಳಿಂದ ರೈತರನ್ನು ರಕ್ಷಿಸಿ ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಡು ಪ್ರಾಣಿಗಳು ಗ್ರಾಮದೊಳಗೆ ಬಾರದಂತೆ ಕಂದಕವನ್ನು ನಿರ್ಮಿಸಿದ್ದರೂ
ಪ್ರಯೋಜನವಾಗಿಲ್ಲ. ಕಾಡಂಚಿನ ಗ್ರಾಮದೊಳಗೆ ಕಾಡು ಪ್ರಾಣಿಗಳು ಪ್ರವೇಶಿಸದಂತೆ ತಡೆಯಲು ಶಾಶ್ವತವಾಗಿ ಸೋಲಾರ್ ತಂತಿ ಬೇಲಿ ನಿರ್ಮಿಸಿ, ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಗ್ರಾಮದ ಯುವ ಮುಖಂಡ ವಿಜಯಕುಮಾರ್ ತಳವಾರ್ ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button