ರಾಜ್ಯ
ಮೈಸೂರು ದಸರಾ: ಕುಶಾಲತೋಪು ತಾಲೀಮು, ಬೆದರಿದ 3 ಆನೆಗಳು
ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ಗುರುವಾರ ಅರಮನೆ ಆವರಣದ ಮಾರಮ್ಮನ ದೇಗುಲದ ಸಮೀಪ ನಡೆಯಿತು.
ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪುಗಳನ್ನು ಸಿಡಿಸಿದರು. ಲಕ್ಷ್ಮಿ ಹಾಗೂ ಗೋಪಾಲಸ್ವಾಮಿ ಆನೆಗಳು ತುಸು ಹೆಚ್ಚಾಗಿಯೇ ಬೆದರಿದವು. ಅಶ್ವತ್ಥಾಮ ಆನೆ ಹಾಗೂ ಕೆಲ ಆಶ್ವಗಳು ಕೊಂಚ ಬೆದರಿದವು.
ಮತ್ತೆ ಎರಡು ಬಾರಿ ಇದೇ ಬಗೆಯ ತಾಲೀಮು ನಡೆಯಲಿದೆ. ಮೊದಲ ತಾಲೀಮಿಗೆ ಆನೆಗಳು ಸ್ಪಂದಿಸಿದ ರೀತಿ ತೃಪ್ತಿಕರವಾಗಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.