ಕ್ರೈಂ
ಕಲುಷಿತ ನೀರು ಸೇವನೆ; ಇಬ್ಬರ ಸಾವು, 60 ಜನರು ಅಸ್ವಸ್ಥ
ಕಲಬುರ್ಗಿ: ಜೀವಜಲವೇ ವಿಷವಾದ ಘಟನೆಯಿದು. ಕಲುಷಿತ ನೀರು ಸೇವಿಸಿ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ನಡೆದಿದೆ.
48 ವರ್ಷದ ಕಮಲಾಬಾಯಿ ಹಾಗೂ 55 ವರ್ಷದ ದ್ರೌಪದಿ ಮೃತ ಮಹಿಳೆಯರು. ಗ್ರಾಮದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣಗೊಂಡು ನೀರು ಕಲುಷಿತಗೊಂಡಿದ್ದು, ಕಳೆದ 15 ದಿನಗಳಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ 60 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗ್ರಾಮಸ್ಥರಲ್ಲಿ ವಾಂತಿ-ಬೇಧಿ ಉಲ್ಬಣಗೊಳ್ಳುತ್ತಿದ್ದು, ಶುದ್ಧ ಕುಡಿಯುವ ನೀರು ನೀಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.