ಸಿನಿಮಾ

‘ಕೆಜಿಎಫ್ 2’ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇಲ್ಲ, ‘ಸಲಾರ್’ ಮುಂದೂಡುವ ಸಾಧ್ಯತೆ

ಬಹುನಿರೀಕ್ಷಿತ ಹಲವು ಸಿನಿಮಾಗಳ ಬಿಡುಗಡೆ ದಿನಾಂಕಗಳು ದಿನಕಳೆದಂತೆ ಬದಲಾಗುತ್ತಿದೆ. ಕೆಲವು ನಿರ್ದಿಷ್ಟ ಸಮಯಕ್ಕೆ ಮುಂದೂಡಲ್ಪಟ್ಟಿದೆ. ಮತ್ತೆ ಕೆಲವು ಚಿತ್ರಗಳು ಮುಂದಿನ ವರ್ಷದ ಸಂಕ್ರಾಂತಿ ಮತ್ತು ಫೆಬ್ರವರಿ ಮಾಸಕ್ಕೆ ಹೊಸ ಡೇಟ್ ಗಳನ್ನು ಫಿಕ್ಸ್ ಮಾಡಿಕೊಂಡಿವೆ. ಹೀಗಾಗಿ ಎಲ್ಲರ ಕಣ್ಣು ಕೆಜಿಎಫ್ 2 ಚಿತ್ರದ ಬಿಡುಗಡೆ ದಿನಾಂಕದ ಮೇಲೆ ಕೇಂದ್ರೀಕೃತವಾಗಿತ್ತು.ಕೆಜಿಎಫ್-2 ಏಪ್ರಿಲ್ 14, 2022ಕ್ಕೆ ಚಿತ್ರಮಂದಿರಕ್ಕೆ ಬರುವುದಾಗಿ ಮೊದಲೇ ಘೋಷಿಸಿತ್ತು ಆದರೆ ಕೆಲವು ಚಿತ್ರಗಳ ಬದಲಾವಣೆಯ ಹಿನ್ನಲೆಯಲ್ಲಿ ‘ಕೆಜಿಎಫ್ 2’ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಒಂದಷ್ಟು ಗೊಂದಲಗಳು ಮೂಡಿತ್ತು. ಅಲ್ಲದೆ ಹಿಂದೆಯೇ ಹೊಂಬಾಳೆ ಮೂವೀಸ್ ಅವರ ಮತ್ತೊಂದು ಪ್ರತಿಷ್ಠಿತ ಚಿತ್ರವಾದ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟಿಸಿರುವ ‘ಸಲಾರ್’ ಚಿತ್ರಕ್ಕೂ ಇದೇ ಡೇಟ್ ಫಿಕ್ಸ್ ಆಗಿತ್ತು. ಕೊರೊನಾದ ಹಿನ್ನಲೆಯಲ್ಲಿ ‘ಕೆಜಿಎಫ್ 2’ ಚಿತ್ರದ ಬಿಡುಗಡೆ ತಡವಾಗಿ ಈಗ ಅಧಿಕೃತವಾಗಿ ಏಪ್ರಿಲ್ 14ಕ್ಕೆ ಬಿಡುಗಡೆಯಾಗುವುದು ಖಚಿತವಾಗಿದೆ. ಆದರೆ ‘ಸಲಾರ್’ ಚಿತ್ರದ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗಬಹುದು.ಭಾರತೀಯ ಸಿನಿಮಾ ಜಗತ್ತು ಮತ್ತು ಸಿನಿಪ್ರೇಮಿಗಳು ಕುತೂಹಲದಿಂದ ಎದುರು ನೋಡುತ್ತಿರುವ ಚಿತ್ರ ‘ಕೆಜಿಎಫ್-2’. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ಅಭಿನಯದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಕೆಜಿಎಫ್-2 ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಅಂತ ಸಿನಿಮಾ ಜಗತ್ತು ಎದುರುನೋಡುತ್ತಿದೆ. ‘ಕೆಜಿಎಫ್ -2’ ಜೊತೆಗೆ ಇದೇ ವರ್ಷದಲ್ಲಿ ಬಿಡುಗಡೆಯಾಗಬೇಕಿದ್ದ0ತ ಬಹುನಿರೀಕ್ಷಿತ ಮತ್ತೆರಡು ಚಿತ್ರಗಳ ಪೈಕಿ ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಕೆಲವು ತಿಂಗಳ ಹಿಂದೆ ದಸರಾ ಸಂದರ್ಭದಲ್ಲಿ ಬಿಡುಗಡೆಯಾಗುವುದೇ ಮೊದಲೇ ಘೋಷಣೆ ಮಾಡಿತ್ತು. ಆದರೆ ಕೊರೊನಾ ಕಾರಣ ಮತ್ತು ಹಂಡ್ರೆಡ್ ಪರ್ಸೆಂಟ್ ಚಿತ್ರಮಂದಿರದಲ್ಲಿ ಅವಕಾಶ ಸಿಗುವ ಅವಕಾಶಗಳು ಇಲ್ಲದ ಕಾರಣಕ್ಕೆ ಅನಿರ್ದಿಷ್ಟ ಸಮಯಕ್ಕೆ ಮುಂದೂಡಿದ್ದಾರೆ. ಆದರೆ ಯಾವಾಗ ಬಿಡುಗಡೆ ಆಗುತ್ತದೆ ಅಂತ ಅಧಿಕೃತವಾಗಿ ಇನ್ನೂ ಸುದ್ದಿ ಬಂದಿಲ್ಲ.

Related Articles

Leave a Reply

Your email address will not be published. Required fields are marked *

Back to top button