Rajakiya

ಅಲ್ಪ ಸಂಖ್ಯಾತರಿಗೆ ರಾಜಕೀಯ ಪ್ರಾತಿನಿದ್ಯ: ಸಿಎಂ ಇಬ್ರಾಹಿಂ ಸೇರ್ಪಡೆಯಿಂದ ಮರುಕಳಿಸುತ್ತಾ ಜೆಡಿಎಸ್ ಗತ ವೈಭವ?

ಬೆಂಗಳೂರು: ಕಾಂಗ್ರೆಸ್ ಎಂಎಲ್ ಸಿ ಸಿಎಂ ಇಬ್ರಾಹಿಂ ಮತ್ತು ಜೆಡಿಎಸ್ ಒಡನಾಟ ಹೆಚ್ಚುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಜೆಡಿಎಸ್ ನಲ್ಲಿ ಹಿರಿಯ ಶಾಸಕರಾದ ಜಿಟಿ ದೇವೇಗೌಡ ಮತ್ತು ಎಸ್ ಆರ್ ಶ್ರೀನಿವಾಸ್ ಹಾಗೂ ಕೆ.ಶ್ರೀನಿವಾಸ ಗೌಡ ಪಕ್ಷದ ವಿರುದ್ಧ ಬಂಡಾಯ ಬಾವುಟ ಹಾರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇತ್ತೀಚೆಗೆ ಜೆಡಿಎಸ್ ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದು ಟೀಕಿಸಿದ್ದರು. ಆದರೆ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಗೆ ಸೇರುತ್ತಿರುವುದು ಪಕ್ಷಕ್ಕೆ ಮತ್ತಷ್ಟು ನೈತಿಕ ಸ್ಥೈರ್ಯ ತುಂಬಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚೆಗೆ ಭದ್ರಾವತಿಗೆ ಭೇಟಿ ನೀಡಿದ್ದ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಕುಮಾರಸ್ವಾಮಿಯವರ ಕೈ ಬಲಪಡಿಸಲು ಒಕ್ಕಲಿಗರು ಮುಂದಾಗಬೇಕು ಎಂದು ಕರೆ ನೀಡಿದ್ದರು. 2023 ರ ವಿಧಾನಸಭೆ ಚುನಾವಣೆಗೂ ಮುಂಚೆ ಇಬ್ರಾಹಿಂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಗುಸುಗುಸುಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಕಳೆದ ವಾರ, ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಕುಮಾರಸ್ವಾಮಿ ಅವರ ಬಿಡದಿಯ ತೋಟದಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು, ಮೇಲ್ನೋಟಕ್ಕೆ ಇದು ಸೌಹಾರ್ದಯುತ ಭೇಟಿ ಎಂಬಂತೆ ಕಾಣಿಸಿದರು ಒಳಗಿನ ವಿಷಯ ಬೇರೆಯೇ ಇದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಿಂದ ಅಲ್ಪಸಂಖ್ಯಾತರ ವೇದಿಕೆಗೆ ಮತ್ತಷ್ಟು ಬಲ ಬರಲಿದೆ, ಕರ್ನಾಟಕ ರಾಜಕೀಯದಲ್ಲಿ ಮುಸ್ಲಿಂ ರಾಜಕಾರಣಕ್ಕೆ ಮತ್ತಷ್ಟು ಮಹತ್ವ ಬರಲಿದೆ.

ಇದು ಜೆಡಿಎಸ್ ಗೆ ಮತ್ತು ಮುಸ್ಲಿಂ ಸಮುದಾಯಕ್ಕೆ ಗೆಲುವಿನ ವಿಷಯವಾಗಿದೆ. ಆದರೆ ಇದುವರೆಗೂ ಜೆಡಿಎಸ್ ಗೆ ಅಲ್ಪ ಸಂಖ್ಯಾತರನ್ನು ಮತಗಳಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ಸಿಎಂ ಇಬ್ರಾಹಿಂ ಕೇಂದ್ರ ನಾಗರಿಕ ವಿಮಾನ ಯಾನ ಸಚಿವರಾಗದ್ದರು. ನಂತರ ದೇವೇಗೌಡ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಒಡನಾಟ ಹೊಂದಿದ್ದರು. 2013ರಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಪರಿಕಲ್ಪನೆ ಅಹಿಂದ ಮೂಲಕ ಹೆಚ್ಚೆಚ್ಚು ಗುರುತಿಸಿಕೊಂಡರು.

ಅಕ್ಟೋಬರ್ ತಿಂಗಳಿನಿಂದ ನಾವು ಸಭೆಗಳನ್ನು ಏರ್ಪಡಿಸುತ್ತೇವೆ, ಜೆಡಿಎಸ್ ಗೆ ಮರಳುವ ಮೂಲಕ ಪಕ್ಷದ ಗತವೈಭವವನ್ನು ಮರಳಿ ತರಲು ಯತ್ನಿಸುತ್ತೇವೆ, ಮತ್ತು ಇದುವರೆಗೂ ಅಲ್ಪಸಂಖ್ಯಾತರ ಪ್ರಸ್ತುತತೆಯನ್ನು ಪ್ರದರ್ಶಿಸಲು ಇದೊಂದು ಅವಕಾಶವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಕಾಂಗ್ರೆಸ್ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಇಬ್ರಾಹಿಂ, ನಾನು ಕಾಂಗ್ರೆಸ್ ತೊರೆಯುತ್ತೇನೆ ಎಂದು ಯಾರು ಹೇಳಿದರು, ನನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಇನ್ನೂ ನಾನು ಏನು ನಿರ್ಧರಿಸಿಲ್ಲ, ಜೂನ್ 2024 ಕ್ಕೆ ನನ್ನ ಎಂಎಲ್ ಸಿ ಅವಧಿ ಮುಕ್ತಾಯಗೊಳ್ಳಲಿದೆ, ಆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ರಾಜಕೀಯವಾಗಿ ಮುಸ್ಲಿಮರಿಗೆ ಸರಿಯಾದ ಪ್ರಾತಿನಿಧ್ಯ ದೊರೆಯುತ್ತಿಲ್ಲ, ಈ ಬಗ್ಗೆ ನಾನು ಸಿದ್ದರಾಮಯ್ಯ ಅವರೊಂದಿಗೂ ಚರ್ಚಿಸಿದದ್ದೇನೆ, ಕರ್ನಾಟಕದಲ್ಲಿ ಶೇ.18 ರಷ್ಟು ಮುಸ್ಲಿಂ ಸಮುದಾಯವಿದೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಅಸೆಂಬ್ಲಿಯಲ್ಲಿ ಮುಸ್ಲಿಮರ ನಿರಾಶಾದಾಯಕ ಪ್ರಾತಿನಿಧ್ಯವನ್ನು ಒಪ್ಪಿಕೊಂಡರೂ ಹಿರಿಯ ಕಾಂಗ್ರೆಸ್ ನಾಯಕ, ಇಬ್ರಾಹಿಂ ಅವರ ಬ್ಲ್ಯಾಕ್ ಮೇಲ್ ರಾಜಕೀಯ” ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹಿರಿಯ ನಾಯಕರೊಬ್ಬರು ಸ್ಪಷ್ಟಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button