ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ಉಪೇಂದ್ರ ಪುತ್ರ ರೆಡಿ..! ನೆಟ್ಟಿಗರು ಆಯುಷ್ ಉಪೇಂದ್ರ ಡ್ಯಾನ್ಸ್ ಗೆ ಫಿದಾ
ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್ ವುಡ್ ನಲ್ಲಿ ತಮ್ಮ ವಿಶಿಷ್ಠ ಸಿನಿಮಾಗಳಿಂದಲೇ ಗುರುತಿಸಿಕೊಂಡವರು. ಅವರ ಅಭಿನಯಕ್ಕಿಂತ ನಿರ್ದೇಶನಕ್ಕೆ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಹಲವು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇನ್ನು ಉಪೇಂದ್ರ ದಂಪತಿ ಪುತ್ರಿ ಐಶ್ವರ್ಯಾ ಸಹ ದೇವಕಿ ಚಿತ್ರದ ಮೂಲಕ ಈಗಾಗಲೇ ನಟನೆ ಪ್ರಾರಂಭಿಸಿದ್ದಾರೆ.
ಜೊತೆಗೆ ಉಪೇಂದ್ರ ಅವರ ಅಣ್ಣನ ಪುತ್ರ ನಿರಂಜನ್ ಸುಧೀಂದ್ರ ಸಹ ಹೀರೋ ಆಗಿ ‘ಸೂಪರ್ ಸ್ಟಾರ್’ ಚಿತ್ರದ ಮೂಲಕ ಭರ್ಜರಿಯಾಗಿ ಎಂಟ್ರಿಕೊಡಲು ಸಿದ್ದರಾಗ್ತಿದ್ದಾರೆ. ಇನ್ನು ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಇದುವರೆಗೆ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ನಾನು ಚಿತ್ರರಂಗಕ್ಕೆ ಬರುವುದಾದರೆ ಅಪ್ಪನೇ ನನ್ನ ಸಿನಿಮಾ ಡೈರೆಕ್ಷನ್ ಮಾಡಬೇಕು ಎಂದು ಸೂಪರ್ ಸ್ಟಾರ್ ಚಿತ್ರದ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದರು.
ಉಪೇಂದ್ರ ಅವರ ಅಭಿಮಾನಿಗಳೂ ಸಹ ಉಪ್ಪಿ ಪುತ್ರನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಇದರ ನಡುವೆ ಆಯುಷ್ ಉಪೇಂದ್ರ ತಮ್ಮದೊಂದು ಡ್ಯಾನ್ಸ್ ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ. ಪಾರ್ಟಿಯೊಂದರಲ್ಲಿ ಆಯುಷ್ ಉಪೇಂದ್ರ ಶಿವಣ್ಣನ ಟಗರು ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಉಪೇಂದ್ರ ಅಭಿಮಾನಿಯೊಬ್ಬರು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಈಗ ಆ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಯುಷ್ ಉಪೇಂದ್ರ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ.