Matific ಗಣಿತ ಅನ್‌ಲೈನ್ ಪರೀಕ್ಷೆ: ಕೋರಮಂಗಲ ಪೊಲೀಸ್ ಪಬ್ಲಿಕ್ ಶಾಲೆ ನಂಬರ್ 1
ಬೆಂಗಳೂರು, ಸೆ. 23: ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ದೇಶದ ಅಗ್ರಗಣ್ಯ ಸಂಸ್ಥೆ ಒಲಂಪಿಯಾಡ್ ಪ್ರಸಕ್ತ ಸಾಲಿನಲ್ಲಿ ನಡೆಸಿದ “ಮ್ಯಾಟಿಫಿಕ್” ಜೂನಿಯರ್ ಮ್ಯಾಥ್ಸ್ ಚಾಂಪಿಯನ್ ಶಿಪ್ ನಲ್ಲಿ ದೇಶದಲ್ಲಿ ನಂಬರ್ ಒನ್ ಶಾಲೆಯಾಗಿ ಕೋರಮಂಗಲದ ಪೊಲೀಸ್ ಪಬ್ಲಿಕ್ ಶಾಲೆ ಹೊರ ಬಿದ್ದಿದೆ.
ಪೂರ್ವ ಪ್ರಾಥಮಿಕ ಹಂತದಿಂದ ಆರನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಒಲಂಪಿಯಾಡ್ ಸಂಸ್ಥೆ ಆನ್‌ಲೈನ್ ಮೂಲಕ “ಮ್ಯಾಟಿಫಿಕ್” ಚಾಂಪಿಯನ್‌ಶಿಪ್ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿತ್ತು. ಕೋರಮಂಗಲದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ 163 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿಯ ಸರಪ್ ಪಬ್ಲಿಕ್ ಶಾಲೆಯ ಪಾರ್ಥ ಪಿ. ನಂಬರ್ ಒನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಎರಡನೇ rankನ್ನು ದೆಹಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ದಕ್ಷಿಣ ವಿಭಾಗ ತನ್ನದಾಗಿಸಿಕೊಂಡಿದೆ.
ಚಾಂಪಿಯನ್ ಶಾಲೆ ವಿಭಾಗದಲ್ಲಿ ಕೋರಮಂಗಲದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆ ನಂಬರ್ ಒನ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮೂರು ದಿನದ ನಡೆದ ಮ್ಯಾಟಿಫಿಕ್ ಸ್ಪಧೆಯಲ್ಲಿ ಮೂರು ದಿನವೂ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಲ್‌ಕೆಜಿ ಯಿಂದ ನರ್ಸರಿ ವರೆಗೆ ಕೋರಮಂಗಲ ಪೊಲೀಸ್ ಪಬ್ಲಿಕ್ ಶಾಲೆಯ 163 ವಿದ್ಯಾರ್ಥಿಗಳು ಮ್ಯಾಟಿಫಿಕ್ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಏಳು ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಗಳಾಗಿ ಹೊರ ಹೊಮ್ಮಿದ್ದಾರೆ.ಕರ್ನಾಟಕ ಪೊಲೀಸ್ ಇಲಾಖೆ ಪೊಲೀಸರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 2008 ರಲ್ಲಿ ಆರಂಭವಾಗಿದ್ದು ಪೊಲೀಸ್ ಪಬ್ಲಿಕ್ ಶಾಲೆ. ಕೋರಮಂಗಲದ ಕೆಎಸ್‌ಆರ್‌ಪಿ ಸಿಬ್ಬಂದಿ ನೆಲೆಸಿರುವ ಜಾಗದಲ್ಲಿ ಶಾಲೆ ಪ್ರಾರಂಭದ ಮೂಲಕ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವ ಅವಕಾಶ ಕಲ್ಪಿಸಲಾಗಿದೆ. ಕಮ್ಯುನಿಟಿ ಶಾಲೆ ಪ್ರಾರಂಭದ ಮೂಲಕ ಪೊಲೀಸ್ ಸಿಬ್ಬಂದಿ ಕಡಿಮೆ ಶುಲ್ಕಕ್ಕೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೋರಮಂಗಲದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಸುಮಾರು 1300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಸಜ್ಜಿತ ಲ್ಯಾಬ್, ಆಟದ ಮೈದಾನ ಸೇರಿದಂತೆ ಗುಣಮಟ್ಟದ ಶಿಕ್ಷಣವನ್ನು ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ನೀಡಲಾಗುತ್ತಿದೆ.