Rajakiya

ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದ: ಶೂನ್ಯವೇಳೆಯಲ್ಲಿ ಸ್ಪೀಕರ್ ಕಾಗೇರಿ ಗರಂ

ಬೆಂಗಳೂರು: ವಿಧಾನಸಭೆಯ ಕಾರ್ಯಕಲಾಪಗಳಿಗೆ ಪದೇ, ಪದೇ ಅಡ್ಡಿಪಡಿಸುವ, ಸದನವನ್ನು ಹೀಗೆ ತಮ್ಮ ಮೂಗಿನ ನೇರಕ್ಕೆ ನಡೆಸಬೇಕು ಎಂದು ನಿಯಂತ್ರಣ ಮಾಡಿ, ಅನುಚಿತವಾಗಿ ವರ್ತಿಸಿ ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ಎಚ್ಚರಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯರಾದ ಶಿವಲಿಂಗೇಗೌಡ, ಅನ್ನದಾನಿ, ಬಂಡೆಪ್ಪ ಕಾಶಂಪೂರ್ ಮತ್ತಿತರರು ಎದ್ದು ವಿಷಯ ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಾಗ ಸ್ಪೀಕರ್ ಕಾಗೇರಿ ಗರಂ ಆದರು.

ಸದನದ ಕಾರ್ಯಕಲಾಪಗಳನ್ನು ನಡೆಸುವ ಗುರುತರ ಹೊಣೆಗಾರಿಕೆ ನನ್ನ ಮೇಲಿದೆ. ಆದರೆ, ಸದನದ ನಾಯಕರ ಸಹಕಾರ ಇಲ್ಲದೇ ನಾನೊಬ್ಬನೇ ಏಕಾಂಗಿಯಾಗಿ ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಬಹಳ ಭಾರವಾದ ಮನಸ್ಸಿನಿಂದ ಅನುಚಿತ ಸದಸ್ಯರಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಇದು ನನಗೆ ಸಂತೋಷ, ನೆಮ್ಮದಿ, ಸಮಾಧಾನ ಕೊಡುವ ವಿಚಾರ ಅಲ್ಲ. ಆದರೆ ಸದಸ್ಯರು ಮೀತಿ ವರ್ತಿಸಿದರೆ ನಾನು ಮೌನಕ್ಕೆ ಶರಣಾಗಲಾರೆ. ಕಠಿಣ ಕ್ರಮ ಜರುಗಿಸುವುದಾಗಿ ಸ್ಪೀಕರ್ ನೇರ ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button