ಸೆಲ್ಫೀ ತೆಗೆದುಕೊಳ್ಳುತ್ತಿದ್ದ ತಾಯಿ-ಮಗ ಕಾಲುಜಾರಿ ನದಿಗೆ ಬಿದ್ದು ಸಾವು..!
ಮನಾಲಿ, ಸೆ.22- ಬಂಡೆ ಮೇಲೆ ನಿಂತು ಸೆಲಿ ತೆಗೆದುಕೊಳ್ಳುತ್ತಿದ್ದ ತಾಯಿ ಮತ್ತು ಮಗ ಕಾಲುಜಾರಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.ದೆಹಲಿ ಮೂಲದ ಪ್ರೀತಿ ಭಾಸಿನ್ ಮತ್ತು ಪುತ್ರ ಪುಲ್ಕಿತ್ ಭಾಸಿನ್(12) ಸಾವನ್ನಪ್ಪಿರುವ ದುರ್ದೈವಿಗಳು.
ಹೊಟೇಲ್ ಲೆಗ್ರಾಂಡ್‍ನಲ್ಲಿ ತಂಗಿದ್ದ ಇವರು ನಿನ್ನೆ ಸೆಲಿ ತೆಗೆದುಕೊಳ್ಳಲು ಮನಾಲಿ ನಗರದ ಬಿಯಾಸ್ ನದಿಯ ಬಳಿಗೆ ಬಂದಿದ್ದರು. ಬಂಡೆ ಏರಿ ಇಬ್ಬರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಂಡೆಯಿಂದ ಜಾರಿ ನದಿಗೆ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ.
ನೀರಿನಲ್ಲಿ ಮುಳುಗುತ್ತಿದ್ದ ಇವರನ್ನು ಕಂಡು ಹೊಟೇಲ್ ಉದ್ಯೋಗಿ ರವಿ ಎಂಬುವರು ರಕ್ಷಿಸಲು ಮುಂದಾದರಾದರೂ ಪ್ರಯೋಜನವಾಗಿಲ್ಲ. ಘಟನೆಯಲ್ಲಿ ಅವರೂ ಕೂಡ ಗಾಯಗೊಂಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ಸಹಕಾರದಿಂದ ತಾಯಿ ಮಗನ ಶವಗಳನ್ನು ಹೊರ ತೆಗೆದಿದ್ದಾರೆ. ತಾಯಿ-ಮಗನ ಶವಗಳು ನೀರಿನ ನಾಲ್ಕು ಕಿಲೋಮೀಟರ್‍ಆಳದಲ್ಲಿ ಪತ್ತೆ ಮಾಡಲಾಗಿದೆ. ಮೃತದೇಹಗಳನ್ನು ಮನಾಲಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಉಪವಿಭಾಗದ ಪೊಲೀಸ್ ಅಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.