ಕತ್ತು ಸೀಳಿ ಯುವಕನ ಬರ್ಬರ ಹತ್ಯೆ - ಅತ್ತೆ ಮಗಳನ್ನು ಪ್ರೀತಿಸಿದ ಕಾರಣ ತನ್ನ ಸಂಬಂಧಿಕರಿಂದಲೇ ಕೃತ್ಯ
ಅತ್ತೆ ಮಗಳನ್ನು ಪ್ರೀತಿಸಿದ ಕಾರಣಕ್ಕೆ ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಅತ್ತೆ ಮಗಳನ್ನು ಪ್ರೀತಿಸಿದ ಕಾರಣಕ್ಕೆ ತನ್ನ ಸಂಬಂಧಿಕರಿಂದಲೇ ಕೃತಿಯ ಪ್ರಕರಣ ದಾಖಲು ಆರೋಪಿಗಳು ಪೊಲೀಸರ ವಶಕ್ಕೆ,,
ಕುಣಿಗಲ್/ ಮಾಗಡಿ ಯುವಕನೋರ್ವನ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ಮಾಗಡಿ ತಾಲೂಕಿನಲ್ಲಿ ನಡೆದಿದೆ, ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ಚೆಲುವರಾಜು (35) ಕೊಲೆಯಾದ ಯುವಕ, ಮಾಗಡಿ ತಾಲೂಕಿನ ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿದ್ದ ತನ್ನ ಅತ್ತೆ ಮಗಳನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ ಇದಕ್ಕೆ ಯುವತಿಯ ಕುಟುಂಬಸ್ಥರ ವಿರೋಧವು ಸಹ ಇತ್ತು, ಕಳೆದ 15 ದಿನಗಳ ಹಿಂದೆ ಚೆಲುವರಾಜು ಅತ್ತೆಯ ಮಗಳಾದ ಪೂರ್ಣಿಮಾ ಎಂಬಾಕೆಯನ್ನು ಮದುವೆಯಾಗಲು ಕರೆದುಕೊಂಡು ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿಗೆ ಹೋಗಿದ್ದ ನಂತರ ಯುವತಿಯ ಕುಟುಂಬಸ್ಥರಿಗೆ ಮಾಹಿತಿ ತಿಳಿದು ಹಿಂಬಾಲಿಸಿಕೊಂಡು ಹೋಗಿ ಅಲ್ಲಿಂದ ಯುವತಿಯನ್ನು ಕರೆದುಕೊಂಡು ಬಂದಿದ್ದರು, ಬಳಿಕ ಮಾಗಡಿ ಪೊಲೀಸರ ಸಮ್ಮುಖದಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಂಡು ಯುವತಿಯನ್ನು ಕುಟುಂಬಸ್ಥರು ಮನೆಗೆ ಕರೆದೊಯ್ದಿದ್ದರು ಎನ್ನಲಾಗಿದೆ, ಇದಾದ ಬಳಿಕ ಯುವತಿಯ ಕುಟುಂಬಸ್ಥರು ಚೆಲುವರಾಜನಿಗೆ ನಮ್ಮ ಹುಡುಗಿಯ ತಂಟೆಗೆ ಬಾರದಂತೆ ಎಚ್ಚರಿಕೆಯನ್ನು ಸಹ ನೀಡಿದ್ದರು ಎನ್ನಲಾಗಿದೆ,,
ಯುವತಿ ಫೋನ್ ಸಂಪರ್ಕಕ್ಕೆ ಸಿಗದ ಕಾರಣ ಚೆಲುವರಾಜು ಗುರುವಾರ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಯುವತಿಯ ಕುಟುಂಬಸ್ಥರ ವಿರುದ್ಧ ವಿಡಿಯೋ ಮಾಡಿ ಹರಿಬಿಟ್ಟಿದ್ದ ಬಳಿಕ ಗುರುವಾರ ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಕೊಲೆಯಾದ ಚೆಲುವರಾಜರಿಗೆ ಕೊಲೆ ಆರೋಪಿಗಳು ಫೋನ್ ಮಾಡಿ ಮಾತನಾಡಲು ಕರೆದು ಕಾರಿನಲ್ಲಿ ಅಪರಿಸಿಕೊಂಡು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗಟ್ಟಿಪುರ ಎಂಬ ಗ್ರಾಮದ ರಂಗರಾಯನ ಕೆರೆ ಹಳ್ಳದಲ್ಲಿ ಗುರುವಾರ ತಡರಾತ್ರಿ ಕತ್ತು ಸೀಳಿ ಬರಬರ ಹತ್ಯೆ ಮಾಡಿ ನಂತರ ಮೃತ ದೇಹ ಅಲ್ಲೇ ಬಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ,,
ಶುಕ್ರವಾರ ಮಾಗಡಿ ಪೊಲೀಸ್ ಠಾಣೆಗೆ ತೆರಳಿ ಕೊಲೆ ಆರೋಪಿಗಳು ಶರಣಾಗಿದ್ದಾರೆ, ಯುವತಿಯ ತಂದೆ ಕೆಂಪಣ್ಣ, ದೊಣಕುಪ್ಪೆ ಗ್ರಾಮದ ಮಂಜುನಾಥ್, ಕುಣಿಗಲ್ ರಾಮಕೃಷ್ಣ, ಕೊಲೆ ಆರೋಪಿಗಳು ಇನ್ನು ಘಟನಾ ಸ್ಥಳಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್ ಅಧಿಕರಾದ ಪುರುಷೋತ್ತಮ್, ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಓಂ ಪ್ರಕಾಶ್, ಸಿ ಪಿ ಐ ಮಾಧ್ಯಾನಾಯಕ್, ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಮಾಗಡಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ರಾಮನಗರ ಜಿಲ್ಲೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ, ಈ ಪ್ರಕರಣವನ್ನು ಮಾಗಡಿ ಪೊಲೀಸ್ ಠಾಣೆಯಿಂದ ಕುಣಿಗಲ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕುಣಿಗಲ್ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು ಮುಗಿಲು ಮುಟ್ಟುವಂತಿತ್ತು,,
ವರದಿ ನರಸಿಂಹರಾಜು




