ಇತ್ತೀಚಿನ ಸುದ್ದಿದೇಶಸಿನಿಮಾ

500 ವರ್ಷಗಳ ಅಂಧಕಾರ ಕಳೆದು, ಬೆಳಕಿನ ಪ್ರತಿಷ್ಠಾಪನೆಯಾಗಿದೆ: ರಾಮನಿಗೆ ಕಿಚ್ಚನ ಆರತಿ

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಇಂದು (ಜನವರಿ 22) ನಡೆದಿದೆ. ಭಾರತದ ಹಲವಾರು ಸೆಲೆಬ್ರಿಟಿಗಳು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಸಹ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಮನ ಭುಜಗಳು ನಮ್ಮ ಶಕ್ತಿ, ಅವರ ಎದೆ ನಮ್ಮ ಮಹತ್ವಾಕಾಂಕ್ಷೆ, ಅವರ ಕೈಗಳು ನಮ್ಮ ಶೌರ್ಯ, ಅವರ ಪಾದಗಳು ನಮ್ಮ ಮೋಕ್ಷ, ಅವರ ರೂಪ ಎಲ್ಲ ಸೃಷ್ಟಿಯ ಸಾರ. ಇಲ್ಲಿಂದ ಅದು ಪ್ರಾರಂಭವಾಗಿದೆ, ಇಲ್ಲಿಂದ ನಾವು ಏಳ್ಗೆ ಹೊಂದುತ್ತೇವೆ. ಇದು ಒಂದು ರಾಷ್ಟ್ರದ ಪ್ರಾಣ ಪ್ರತಿಷ್ಠಾಪನೆ, ಜನರ ಪ್ರಾಣ ಪ್ರತಿಷ್ಠಾಪನೆ, 500 ವರ್ಷಗಳ ಕತ್ತಲೆಯ ನಂತರ ಬೆಳಕಿನ ಪ್ರಾಣ ಪ್ರತಿಷ್ಠಾಪನೆ’ ಎಂದು ಸುದೀಪ್ ಬರೆದುಕೊಂಡಿದ್ದಾರೆ. ರಾಮನ ಚಿತ್ರದ ಮುಂದೆ ದೀಪ ಹಚ್ಚುತ್ತಿರುವ ವಿಡಿಯೋವನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಮತ್ತೊಂದು ಟ್ವಿಟ್ಟರ್ ಪೋಸ್ಟ್​ ನಲ್ಲಿ, ‘ರಾಮ ಜಯ ರಾಮ ಆದಿ ಗುರು ಮಹರ್ಷಿ ಶ್ರೀ ವಾಲ್ಮೀಕಿ ಮೊದಲು ನಿಮ್ಮ ಕಥೆ ‘ ಹೇಳಿದರು. ವಾಲ್ಮೀಕಿಗಳು ರೂಪಿಸಿದ ಶ್ರೀ ರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ. ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ. ನಿನ್ನ ಕಣ್ಣುಂಬಿಕೊಳ್ಳಲು ಎರಡೇ ಕಣ್ಣನ್ನೇಕೆ ಕೊಟ್ಟೆ? ನಿನ್ನ ಕೀರ್ತನೆಗೆ ಎರಡೇ ಕಿವಿಗಳು. ನಮ್ಮದು ಎಂತಹ ಪುಣ್ಯ, ಕರುನಾಡಿನಿಂದ ವಿಗ್ರಹವಾಗಿ ರೂಪುಗೊಂಡೆ. ಕರ್ನಾಟಕದ ಮಣ್ಣ ಗರ್ಭದಿಂದ ಎದ್ದು ಬಂದೆ ನಿನ್ನ ಆಲಯ ಕಟ್ಟಲು ಶ್ರೀ ವಿಶ್ವ ಪ್ರಸನ್ನ ತೀರ್ಥ ಗುರುಗಳಿಗೆ ಅದೃಷ್ಟ ಕೊಟ್ಟೆ, ಅರುಣ್ ಯೋಗಿರಾಜ್ ಅವರಿಗೆ ನಿನ್ನ ಕೆತ್ತಲು. ನಿನ್ನ ಪರಮ ಭಕ್ತ ಕವಚದ ಮಣ್ಣಿನ ವೀರ ಹನುಮಾನ ಇದು ಕರ್ನಾಟಕಕ್ಕೆ ನಿಜದ ಸಮ್ಮಾನ. ಜೈ ಶ್ರೀ ರಾಮ್’ ಎಂದು ಸಣ್ಣ ಕವಿತೆಯನ್ನು ಬರೆದಿದ್ದಾರೆ ಸುದೀಪ್.

ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸುದೀಪ್ ನೇರವಾಗಿ ಭಾಗಿಯಾಗಿಲ್ಲವಾದರೂ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂತಸ, ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನೇರವಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button