ರಾಜ್ಯ

250ಕ್ಕೂ ಹೆಚ್ಚು ಫೋನ್ ವಶಕ್ಕೆ

ಕಾರವಾರ: ಕೋವಿಡ್(corona) ಮಹಾಮಾರಿಯಿಂದ ಶಾಲಾ – ಕಾಲೇಜುಗಳು ಬಂದಾಗಿ ಆನ್​ಲೈನ್​​ ಕ್ಲಾಸ್(online class) ಶುರುವಾಗಿದ್ದೇ ಮಕ್ಕಳ ಕೈಗೆ ಮೊಬೈಲ್(mobile) ಸಿಕ್ಕಿತು. ಆದರೆ, ಇದೀಗ ಶಾಲಾ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭವಾಗಿದೆಯಾದರೂ ಪಾಠ ಕೇಳುವುದಕ್ಕಿಂತ ಮೊಬೈಲ್ ನೋಡುವವರೇ(students using mobile in classroom) ಹೆಚ್ಚಾಗಿದ್ದಾರೆ. ಇದೇ ಕಾರಣಕ್ಕೆ ಕುಮಟಾದ ಕಾಲೇಜೊಂದರಲ್ಲಿ ತಪಾಸಣೆ ನಡೆಸಿದ ಶಿಕ್ಷಕರು ಸುಮಾರು 250ಕ್ಕೂ ಹೆಚ್ಚು ಮೊಬೈಲ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಕುಮಟಾ ಪಟ್ಟಣದ ಹನಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನಲ್ಲಿ(kumata hanamanta benne college) ಶಿಕ್ಷಕರು ತರಗತಿಗೆ ಬಂದರೂ ಕೂಡ ವಿದ್ಯಾರ್ಥಿಗಳು ಮೊಬೈಲ್ ಹಿಡಿದು ಕಾಲಹರಣ ಮಾಡುತ್ತಿದ್ದರು‌. ಇದು ಶಿಕ್ಷಕರ ಗಮನಕ್ಕೆ ಬಂದು ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗಳನ್ನು ವಶಪಡಿಸಿಕೊಂಡು( teachers detained mobiles ) ಬಿಸಿ ಮುಟ್ಟಿಸಿದ್ದಾರೆ.

ಇನ್ನು ಪಾಲಕರು ಖುದ್ದಾಗಿ ಬಂದು ಅವರವರ ಮಕ್ಕಳ ಮೊಬೈಲ್ ತೆಗೆದುಕೊಂಡು ಹೋಗಲು ಶಿಕ್ಷಕರು ಸೂಚಿಸಿದ್ದಾರೆ. ಆದರೆ, ಹಲವು ವಿದ್ಯಾರ್ಥಿಗಳು ಕಂಡ ಕಂಡವರನ್ನು ಪಾಲಕರೆಂದು ಹೇಳಿ ಮೊಬೈಲ್ ಪಡೆಯುವ ಪ್ರಯತ್ನ ಮಾಡಿಯೂ ಸಿಕ್ಕಿ ಬಿದ್ದಿದ್ದಾರೆ.

ತರಗತಿ ಆರಂಭವಾಗುವುದಕ್ಕೆ ಮುನ್ನವೇ ಶಾಲಾ ಕೊಠಡಿಗಳಲ್ಲಿ ಮೊಬೈಲ್ ಬಳಸಬಾರದೆಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡಲಾಗಿತ್ತು. ಮುನ್ನೆಚ್ಚರಿಕೆಯ ಹೊರತಾಗಿಯೂ ವಿದ್ಯಾರ್ಥಿಗಳು ಮೊಬೈಲ್ ಬಳಸಿದ್ದರಿಂದ ವಶಪಡಿಸಿಕೊಂಡಿದ್ದೇವೆ ಎಂದು ಕಾಲೇಜು ಪ್ರಾಂಶುಪಾಲ ಸತೀಶ ನಾಯ್ಕ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button