2021ರ ಕನ್ನಡದ ಅತಿ ಹೆಚ್ಚು ಜನಪ್ರಿಯ ನಟಿ ಯಾರು?
2021ರ ನವೆಂಬರ್ನಲ್ಲಿ ಅತಿ ಹೆಚ್ಚು ಜನಪ್ರಿಯ ಆಗಿದ್ದ ನಟಿ ಯಾರು ಎನ್ನುವುದನ್ನು ವರದಿ ಒಂದು ಬಯಲು ಮಾಡಿದೆ. ನಾಯಕ ನಟಿಯರ ವಿಚಾರಕ್ಕೆ ಬಂದರೆ ಅವರ ನಡುವೆಯೂ ಕಾಂಪಿಟೇಷನ್ ಇರುತ್ತದೆ. ಸದ್ಯ ಈ ವರ್ಷಾಂತ್ಯದಲ್ಲಿ ಕನ್ನಡದ ಯಾವ ಸ್ಟಾರ್ ನಟಿ ಅತ್ಯಂತ ಜನಪ್ರಿಯ ಎನ್ನುವ ಲಿಸ್ಟ್ ಹೊರ ಬಿದ್ದಿದೆ.
ಈ ವರದಿ ಪ್ರಕಾರ ಹತ್ತು ನಟಿಯರ ಹೆಸರು ಪ್ರಕಟವಾಗಿದೆ. ಅದರಲ್ಲಿ ಒಂದರಿಂದ ಹತ್ತರ ತನಕ ಕನ್ನಡದ ನಟಿಯರ ಹೆಸರನ್ನು ಪ್ರಕಟ ಮಾಡಲಾಗಿದೆ. ಇನ್ನೂ ಈ ಸಾಲಿನಲ್ಲಿ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ಇರುವ ನಟಿಯರು ಕೂಡ ಇದ್ದಾರೆ.
ನಂ1 ಸ್ಥಾನದಲ್ಲಿ ನಟಿ ರಚಿತಾ ರಾಮ್! ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಾ ಸುದ್ದಿಯಲ್ಲಿ ಇದ್ದಾರೆ ನಟಿ ರಚಿತಾ ರಾಮ್. ಈಕೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ. ಈಗ ಹೆಚ್ಚು ಜನಪ್ರಿಯ ಪಡೆದ ಕನ್ನಡ ನಟಿಯರಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. 2021ರ ನವೆಂಬರ್ ತಿಂಗಳಲ್ಲಿ ಅತ್ಯಂತ ಜನಪ್ರಿಯ ನಾಯಕ ನಟಿಯರ ಪಟ್ಟಿಯಲ್ಲಿ ನಟಿ ರಚಿತಾ ರಾಮ್ ಮೊದಲ ಸ್ಥಾನದಲ್ಲಿ ಇದ್ದಾರೆ. ಕಿರುತೆರೆಯಿಂದ ಬಣ್ಣದ ಬದುಕಿನ ಜರ್ನಿ ಆರಂಭಿಸಿದ ನಟಿ ರಚಿತಾ ರಾಮ್ ‘ಬುಲ್ ಬುಲ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿ ಆಗಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ರಚಿತಾ ರಾಮ್ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ರಾಮ್ ಬ್ಯುಸಿಯಾಗಿದ್ದಾರೆ.
ರಾಧಿಕಾ ಪಂಡಿತ್ಗೆ ಒಲಿದ ದ್ವಿತೀಯ ಸ್ಥಾನ! ನಟಿ ರಾಧಿಕಾ ಪಂಡಿತ್ ಈ ವರ್ಷ ನವೆಂಬರ್ನಲ್ಲಿ ಜನಪ್ರಿಯ ನಟಿಯರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಅಷ್ಟಕ್ಕೂ ರಾಧಿಕಾ ಪಂಡಿತ್ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ. ‘ಆದಿಲಕ್ಷ್ಮಿ ಪುರಾಣ’ ಸಿನಿಮಾದ ಬಳಿಕ ರಾಧಿಕಾ ಯಾವುದೇ ಸಿನಿಮಾದಲ್ಲೂ ಅಭಿನಯಿಸಿಲ್ಲ. ಆದರೂ ಕೂಡ ರಾಧಿಕ ಪಂಡಿತ್ ಜನಪ್ರಿಯ ನಟಿಯರ ಸಾಲಿನಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಸದ್ಯ ಮಕ್ಕಳ ಜೊತೆಗೆ ಕಾಲ ಕಳೆಯುತ್ತಿರುವ ರಾಧಿಕಾ ಆದಷ್ಟು ಬೇಗ ಮತ್ತೆ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಆಶಯ.
ರಶ್ಮಿಕಾಗೆ 3ನೇ ಸ್ಥಾನ: 4 ನೇ ಸ್ಥಾನದಲ್ಲಿ ಇದ್ದಾರೆ ಮೋಹಕ ತಾರೆ ರಮ್ಯಾ! ಈ ಸಾಲಿನಲ್ಲಿ ನಟಿ ನ್ಯಾಷನಲ್ ಕ್ರಶ್ ಅಂತಲೇ ಕರೆಸಿಕೊಳ್ಳುವ ರಶ್ಮಿಕಾ ಮಂದಣ್ಣ ಮೂರನೇ ಸ್ಥಾನದಲ್ಲಿ ಇದ್ದಾರೆ. ವಿಶೇಷ ಅಂದರೆ ನಟಿ ರಮ್ಯಾ ಕೂಡ ಈ ಸಾಲಿನಲ್ಲಿ ಇದ್ದಾರೆ. ರಮ್ಯಾ ಬಣ್ಣ ಹಚ್ಚುವುದನ್ನು ಬಿಟ್ಟು ಹಲವು ವರ್ಷಗಳೇ ಆಗಿವೆ. ರಮ್ಯಾ ಚಿತ್ರರಂಗದಿಂದ ದೂರ ಆಗಿದ್ದರು, ಜನರ ಮನಸ್ಸಲ್ಲಿ ಉಳಿದು ಬಿಟ್ಟಿದ್ದಾರೆ. ಹಾಗಾಗಿ ಈ ವರ್ಷ ನವೆಂಬರ್ನಲ್ಲಿ ಜನಪ್ರಿಯ ಆದ ನಟಿಯರ ಸಾಲಿನಲ್ಲಿ ನಾಲ್ಕನೆ ಸ್ಥಾನದಲ್ಲಿ ಇದ್ದಾರೆ. ನಟಿ ರಮ್ಯಾ ಅವನ್ನು ತೆರೆಮೇಲೆ ನೋಡಲು ಜನ ಕಾಯುತ್ತಿದ್ದಾರೆ ಎನ್ನುವುದು ಇದರಿಂದ ತಿಳಿಯುತ್ತದೆ.
ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ಹರಿಪ್ರಿಯಾಗೆ ಯಾವ ಸ್ಥಾನ? ಮದಗಜ ಚಿತ್ರದ ನಾಯಕಿ ಆಶಿಕಾ ರಂಗನಾಥ್ 5ನೇ ಸ್ಥಾನದಲ್ಲಿ ಇದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಆಶಿಕಾ ರಂಗನಾಥ್ ಅವರಿಗೆ ಐದನೇ ಸ್ಥಾನ ಸಿಕ್ಕಿದೆ. ಇನ್ನು ಆರನೇ ಸ್ಥಾನದಲ್ಲಿ ನಟಿ ಸಾನ್ವಿ ಶ್ರೀವಾತ್ಸವ್ ಇದ್ದಾರೆ. ಸಾನ್ವಿ ಬಳಿಕ ಏಳನೇ ಸ್ಥಾನದಲ್ಲಿ ಹರಿಪ್ರಿಯಾ ಇದ್ದಾರೆ. ಹರಿಪ್ರಿಯಾ ನಂತರ 8ನೇ ಸ್ಥಾನದಲ್ಲಿ ನಟಿ ಅದಿತಿ ಪ್ರಭುದೇವ ಇದ್ದಾರೆ. ಇದು ಈ ವರ್ಷ ನವೆಂಬರ್ ಒಂದು ತಿಂಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಲಿಸ್ಟ್.
ಕೃತಿ ಕರಬಂಧ, ಶ್ರೀಲೀಲಾಗೆ 9 ಮತ್ತು 10ನೇ ಸ್ಥಾನ! ಇನ್ನೂ ಕೊನೆಯ ಎರಡು ಸ್ಥಾನಗಳಲ್ಲಿ ನಟಿ ಶ್ರೀಲೀಲಾ ಮತ್ತು ಕೃತಿ ಕರಬಂಧ ಇದ್ದಾರೆ. 9ನೇ ಸ್ಥಾನದಲ್ಲಿ ನಟಿ ಕೃತಿ ಕರಬಂಧ ಇದ್ದಾರೆ. 10ನೇ ಸ್ಥಾನದಲ್ಲಿ ಶ್ರೀಲೀಲಾ ಇದ್ದಾರೆ. ಕೃತಿ ಕರಬಂಧ ಸದ್ಯ ಬಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಶ್ರೀಲೀಲಾ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಬ್ಯೂಸಿ ಆಗಿದ್ದಾರೆ. ಇದು 2021ರಲ್ಲಿ ನವೆಂಬರ್ನಲ್ಲಿ ಜನಪ್ರಿಯತೆ ಪಡೆದ ನಟಿಯರ ಲಿಸ್ಟ್. ಇದು ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತದೆ. ಯಾಕೆಂದರೆ ಒಬ್ಬೊಬ್ಬರು ಒಮ್ಮೆಮ್ಮೆ ಮುನ್ನೆಲೆಗೆ ಬರುತ್ತಾರೆ. ಹಾಗಾಗಿ ಮುಂದಿನ ಬಾರಿ ಯಾರು ನಂಬರ್ 1 ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ.