ಇತ್ತೀಚಿನ ಸುದ್ದಿಸುದ್ದಿ

12 ವರ್ಷಗಳಿಂದ ಕಲ್ಲು ತಿನ್ನುತ್ತಿರುವ ಸಂತೋಷ್ ಲಾಕ್ರಾ!

ಈ ಸಂತೋಷ್ ಲಾಕ್ರಾ, ತಾನು ದೇವರಲ್ಲಿ ಪ್ರಾರ್ಥನೆ ಮಾಡುವ ಮೂಲಕ ಜನರ ಕಾಯಿಲೆ ಮತ್ತು ಸಮಸ್ಯೆಗಳನ್ನು ನಿವಾರಣೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸಂತೋಷ್ ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆ ಹೊಂದಿದ್ದು, ತಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಯೇಸುವಿನ ಅನೇಕ ಪ್ರತಿಮೆಗಳು ಮತ್ತು ಫೋಟೋಗಳನ್ನು ಹಾಕಿದ್ದಾರೆ. ಇದೇ ಕೋಣೆಯಲ್ಲಿ ಕುಳಿತುಕೊಂಡು ತನ್ನ ಬಳಿ ಬರುವ ಜನರ ಸಮಸ್ಯೆಗಳನ್ನು ದೂರ ಮಾಡ್ತಾರಂತೆ. ಸಂತೋಷ್ ಹೇಳುವ ಪ್ರಕಾರ, ಇಲ್ಲಿಯವರೆಗೆ ಹಲವು ಜನರ ದೈಹಿಕ ಹಾಗೂ ಇನ್ನಿತರ ಸಮಸ್ಯೆಗಳನ್ನು ಪರಿಹಾರ ಮಾಡಿದ್ದಾರಂತೆ.

ಒರಟಾದ ಕಲ್ಲುಗಳನ್ನು ಇರಿಸಿ ಪೂಜೆ


ಸಂತೋಷ್ ಪ್ರಾರ್ಥನೆಯ ಸಮಯದಲ್ಲಿ ಮೊಣಕಾಲುಗಳ ಮೇಲೆ ಕುಳಿತುಕೊಳ್ಳುತ್ಥಾರೆ. ತಮ್ಮ ಎರಡೂ ಮೊಣಕಾಲುಗಳ ಕೆಳಗೆ ಒರಟಾದ ಕಲ್ಲುಗಳನ್ನು ಇಟ್ಟು ದೇವರನ್ನು ಪೂಜಿಸುತ್ತಾರೆ. ಪ್ರಾರ್ಥನೆಯ ನಂತರ ಸಂತೋಷ್ ಅವರು ಜನರ ದುಃಖ ಮತ್ತು ನೋವುಗಳನ್ನು ತಮ್ಮೊಳಗೆ ಸ್ವೀಕರಿಸುತ್ತಾರೆ ಎಂದು ಇಲ್ಲಿಯ ಜನರು ಹೇಳುತ್ತಾರೆ.

ಜನರ ಸಮಸ್ಯೆ ಮತ್ತು ನೋವುಗಳನ್ನು ಅಹ್ವಾನೆ ಮಾಡಿಕೊಳ್ಳಲು ಕಲ್ಲುಗಳನ್ನು ತಿಂದು ಜೀರ್ಣ ಮಾಡಿಕೊಳ್ಳುತ್ತಾರಂತೆ. ಇದರ ಹಿಂದೆ ದೈವಿಕ ಶಕ್ತಿ  ಇದೆ ಎಂಬುವುದು ಸಂತೋಷ್ ಅವರ ವಾದವಾಗಿದೆ. ಈ ಕಲ್ಲುಗಳ ತಿಂದ ನಂತರ ಸಂತೋಷ್ ಗೆ ಹಸಿವು ಆಗಲ್ಲವಂತೆ. ಕಲ್ಲುಗಳಿಂದ ಹೊಟ್ಟೆ ತುಂಬಿರುತ್ತದೆ. ಹಾಗಾಗಿ ಬೇರೆ ಆಹಾರ ಸೇವಿಸಲ್ಲ ಮತ್ತು ಈ ಕಲ್ಲುಗಳ ಸುಲಭವಾಗಿ ಜೀರ್ಣವಾಗುತ್ತವೆ ಎಂದು ವರದಿಯಾಗಿದೆ.


12 ವರ್ಷಗಳಿಂದ ಕಲ್ಲು ತಿನ್ನುತ್ತಿರುವ ಸಂತೋಷ್ ಲಾಕ್ರಾ


ಕಳೆದ 12 ವರ್ಷಗಳಿಂದ ನಿರಂತರವಾಗಿ ಈ ಕಲ್ಲುಗಳನ್ನು ತಿನ್ನುತ್ತಿರುವುದಾಗಿ ಸಂತೋಷ್ ಹೇಳಿಕೊಂಡಿದ್ದಾರೆ. ಸಂತೋಷ್ ಅವರ ಕಲ್ಲು ತಿನ್ನುವ ಕಲೆಯನ್ನು ಕಂಡು ಸ್ಥಳೀಯರು ಮತ್ತು ಅವರ ಕುಟುಂಬದವರೂ ಅಚ್ಚರಿಗೊಂಡಿದ್ದಾರೆ. ಇಲ್ಲಿಯವರೆಗೂ ಈ ರೀತಿ ಕಲ್ಲು ತಿನ್ನುವವರನ್ನು ನೋಡಿಲ್ಲ ಎಂದು ಇಲ್ಲಿಯ ಜನರು ಹೇಳುತ್ತಾರೆ.


ಮೊದಲು ಸಂತೋಷ್ ಕಲ್ಲುಗಳನ್ನು ತಿನ್ನೋದನ್ನು ನೋಡಿದ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಹೆದರಿಕೊಂಡಿದ್ದರು. ಆದ್ರೆ ಇದನ್ನೇ ಸಂತೋಷ್ ಅಭ್ಯಾಸ ಮಾಡಿಕೊಂಡ ಪರಿಣಾಮ ಈಗ ಯಾರಿಗೂ ಈ ಬಗ್ಗೆ ಭಯವಿಲ್ಲ.


ಸಂತೋಷ್ ಲಾಕ್ರಾ ಪತ್ನಿ ಹೇಳಿದ್ದು ಹೀಗೆ


ಪತಿಗೆ ಈ ರೀತಿ ಕಲ್ಲುಗಳು ತಿನ್ನುವದರಿಂದ ಅವರ ಆರೋಗ್ಯದಲ್ಲಿ ಯಾವ ವ್ಯತ್ಯಾಸವನ್ನು ನಾವು ನೋಡಿಲ್ಲ. ಇದುವರೆಗೂ ನಾವು ವೈದ್ಯರ ಬಳಿಯೂ ಹೋಗಿಲ್ಲ. ಇದುವರೆಗೂ ಒಂದು ಗೋಣಿ ಚೀಲಕ್ಕಿಂತಲೂ ಹೆಚ್ಚು ಕಲ್ಲುಗಳನ್ನು ತಿಂದಿದ್ದಾರೆ. ಇದು ಅಚ್ಚರಿಯಾದ್ರೂ ಸತ್ಯ ಎಂದು ಸಂತೋಷ್ ಪತ್ನಿ ಅಲಿಶಾ ಹೇಳುತ್ತಾರೆ.


ಇದೊಂದು ಮೂಢನಂಬಿಕ ಅಂದ್ರು ವೈದ್ಯ ಬಖಾಲಾ


ಮನುಷ್ಯರು ಕಲ್ಲು ತಿನ್ನುತ್ತಿರುವ ಬಗ್ಗೆ ಸಿಎಂಎಚ್‌ಒ ನಿವೃತ್ತ ವೈದ್ಯ ಸಿಡಿ ಬಖಾಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಮುಂದೆ ಆತನ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಂತೋಷ್ ಲಾಕ್ರಾ ಕಲ್ಲು ಸೇವನೆ ಬಗ್ಗೆ ತನಿಖೆ ನಡೆಸಬೇಕು. ಆತ ಯಾವ ಕಲ್ಲು ತಿನ್ನುತ್ತಾನೆ ಎಂಬುದರ ಬಗ್ಗೆ ಅಧ್ಯಯನಗಳು ನಡೆಯಬೇಕಿದೆ. ಈತನನ್ನು ಅನುಕರಣೆ ಮಾಡಲು ಹೋಗಿ ಜನರು ತಮ್ಮ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಕಲ್ಲುಗಳನ್ನು ತಿಂದು ಬೇರೆಯವರ ಸಮಸ್ಯೆಗಳನ್ನು ದೂರ ಮಾಡುತ್ತೇನೆ ಅಂತ ಹೇಳುವುದು ಮೂಢನಂಬಿಕೆ ಎಂದು ಸಿ.ಡಿ. ಬಖಾಲಾ ಹೇಳುತ್ತಾರೆ.

Related Articles

Leave a Reply

Your email address will not be published. Required fields are marked *

Back to top button