
ಜಮ್ಮು ಮತ್ತು ಕಾಶ್ಮೀರ (jammu kashmir) ದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್(Pahalgam)ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯೂ ಆಪರೇಷನ್ ಸಿಂಧೂರ್” ಹೆಸರಿನಲ್ಲಿ ಈ ದಾಳಿ ನಡೆಸುವ ಮೂಲಕ ಪ್ರತ್ಯುತ್ತರವನ್ನು ನೀಡಿದೆ. ಈ ಹಿಂದೆ ಕೂಡ ಪಾಕ್ ನಡೆಸಿದ ದಾಳಿಗೆ ಭಾರತವು ಸಮಯ ತೆಗೆದುಕೊಂಡೆ ಉತ್ತರವನ್ನು ನೀಡಿತ್ತು. ಹಾಗಾದ್ರೆ ಈ ಹಿಂದೆ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯೂ ಪ್ರತೀಕಾರ ತೀರಿಸಿ ಕೊಂಡದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
2016 ರ ಸೆಪ್ಟೆಂಬರ್ 18 ರಂದು ಪಾಕಿಸ್ತಾನದ ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಭಾರತದ ಜಮ್ಮು ಮತ್ತು ಕಾಶ್ಮೀರದ ಉರಿ ಪಟ್ಟಣದ ಸಮೀಪವಿರುವ ಭಾರತೀಯ ಸೇನಾ ಬ್ರಿಗೇಡ್ ಪ್ರಧಾನ ಕಛೇರಿಯ ಮೇಲೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಹನ್ನೊಂದು ದಿನಗಳಲ್ಲಿ ಭಾರತವು ಪಾಕಿಸ್ತಾನದ ಒಕ್ಕಲಿಗರ ಆಡಳಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು, ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸುವ ಮೂಲಕ ಪ್ರತ್ಯುತ್ತರ ನೀಡಿತ್ತು.
2019, ಫೆಬ್ರವರಿ 14 ರಂದು ಭಾರತೀಯ ಸೇನೆ ಭದ್ರತಾಪಡೆಗಳ ಮೇಲೆ ನಡೆದ ದಾಳಿಯಿಂದಾಗಿ 40 ಕ್ಕೂ ಯೋಧರು ಕೊನೆಯುಸಿರೆಳೆದಿದ್ದರು. ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಭಾರತೀಯ ಸೇನೆಯ ವಾಹನದಲ್ಲಿ ತೆರಳುತ್ತಿದ್ದ ಯೋಧರು ಬಲಿಯಾಗಿದ್ದರು. ಈ ಫೆಬ್ರವರಿ 14 ರ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ (ಐಎಎಫ್) ಪಾಕಿಸ್ತಾನದ ಬಾಲಾಕೋಟ್ ವೈಮಾನಿಕ ದಾಳಿ ನಡೆಸಿತ್ತು. ಅಂದಹಾಗೆ, ಆಪರೇಷನ್ ಬಂದರ್’ ಎಂಬ ಕೋಡ್ ಹೆಸರಿನಲ್ಲಿ ದಾಳಿ ನಡೆಸಿ ಜೈಷ್-ಎ-ಮೊಹಮ್ಮದ್ನ ಶಿಬಿರವನ್ನು ಗುರಿಯಾಗಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ತೀವ್ರ ಕಾರ್ಯಾಚರಣೆಯನ್ನು ಕೈಗೊಂಡಿದೆ. ಹೌದು, ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ “ಆಪರೇಷನ್ ಸಿಂಧೂರ್” ಹೆಸರಿನಲ್ಲಿ ಈ ದಾಳಿಯನ್ನು ನಡೆಸಿದೆ. ಹೌದು, ಭಾರತೀಯ ಸೇನೆಯೂ ಇಂದು (ಮೇ 7) ಮುಂಜಾನೆ 3 ಗಂಟೆ ಸುಮಾರಿಗೆ ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಮೂವರು ಸಾವನ್ನಪ್ಪಿದ್ದು, ಹನ್ನೆರಡು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.