10ನೇ ತರಗತಿ ವಿದ್ಯಾರ್ಥಿ ಮದುವೆಯಾದ ಮಹಿಳಾ ಶಿಕ್ಷಕಿ; ಪೋಕ್ಸೋ ಕಾಯ್ದೆ ಅಡಿ ಬಂಧನ
ಪ್ರೀತಿ ಕುರುಡು. ಅದಕ್ಕೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಇದಕ್ಕೆ ನಿದರ್ಶನದಂತೆ ಅನೇಕರು ವಯಸ್ಸಿನ ಅಂತರದಲ್ಲಿ ಮದುವೆಯಾಗಿ ಸುಖವಾಗಿರುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ಯಾವ ಮಟ್ಟಿಗೆ ಪ್ರೀತಿ ಕುರುಡಾಗಿದೆ ಎಂದರೆ ಮಹಿಳಾ ಶಿಕ್ಷಕಿಯೊಬ್ಬರು (Lady Teacher) ತಾವು ಕಲಿಸುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕನನ್ನೇ (Minor Boy) ಮದುವೆಯಾಗಿ ಈಗ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಅಪ್ರಾಪ್ತನ ಮದುವೆಯಾದ (Marriage) ಹಿನ್ನಲೆ ಶಿಕ್ಷಕಿ ವಿರುದ್ಧ ಪೊಲೀಸರು ಇದೀಗೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ಕೂಡ ದಾಖಲಿಸಿದ್ದಾರೆ.
ಏನಿದು ಘಟನೆ
ತಮಿಳುನಾಡಿನ ನಲ್ಲೂರು ಬಳಿಕ ಅರಿಯಲೂರಿನಲ್ಲಿ ಟ್ರೈನಿ ಶಿಕ್ಷಕಿಯೊಬ್ಬರು 10ನೇ ತರಗತಿ ವಿದ್ಯಾರ್ಥಿಯನ್ನು ವಿವಾಹವಾಗಿದ್ದಾರೆ. ತಾವು ಪಾಠ ಹೇಳಿಕೊಡುತ್ತಿದ್ದ ವಿದ್ಯಾರ್ಥಿಯ ಮೋಹಕ್ಕೆ ಶಿಕ್ಷಕಿ ಒಳಗಾಗಿದ್ದಾರೆ. ಅವರ ಪ್ರೀತಿಗೆ ಬಿದ್ದ ವಿದ್ಯಾರ್ಥಿ ಕೂಡ ಅವರು ಮಾತಿಗೆ ಮರುಳಾಗಿ ಪ್ರೇಮ ಪಾಶಕ್ಕೆ ಗುರಿಯಾಗಿದ್ದಾನೆ. ಇಬ್ಬರು ಪ್ರೀತಿಯಲ್ಲಿ ಬಿದ್ದ ಹಿನ್ನಲೆ ಮದುವೆಗೆ ಮುಂದಾಗಿದ್ದಾರೆ. ಆದರೆ, ಈ ವಿಷಯ ತಿಳಿದು ಮನೆಯವರು ವಿರೋಧಿಸಿದ್ದಾರೆ. ಕಡೆಗೆ ಏನು ಮಾಡಲು ತೋಚದ ಶಿಕ್ಷಕಿ ಅಪ್ರಾಪ್ತ ಬಾಲಕನೊಂದಿಗೆ ಗ್ರಾಮ ಬಿಟ್ಟು ಹೋಗಿ ಕಳೆದ ಅಕ್ಟೋಬರ್ನಲ್ಲಿ ಮದುವೆಯಾಗಿದ್ದಾರೆ.
ಆತ್ಮಹತ್ಯೆಗೆ ಮುಂದಾಗಿದ್ದ ಜೋಡಿ
ಈ ರೀತಿ ಮದುವೆಯಾದ ಬಳಿಕ ಈ ವಿಷಯ ತಿಳಿದು ಇಬ್ಬರು ಮನೆಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ದಿಕ್ಕು ತೋಚದ ಶಿಕ್ಷಕಿ ಮತ್ತು ವಿದ್ಯಾರ್ಥಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಬಳಿಕ ನೆರೆಹೊರೆಯ ಸಮಯ ಪ್ರಜ್ಞೆಯಿಂದ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬದುಕುಳಿದಿದ್ದಾರೆ.
ಶಿಕ್ಷಕಿ ಬಂಧಿಸಿದ ಪೊಲೀಸರು
ಘಟನೆ ಬಳಿಕ ವಿದ್ಯಾರ್ಥಿ ಪೋಷಕರು ಶಿಕ್ಷಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಗ ನಾಪತ್ತೆಯಾಗಿದ್ದು, ಅಪ್ರಾಪ್ತನನ್ನು ಮದುವೆಯಾಗಿರುವ ಸಂಬಂಧ ತಿಳಿಸಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಕಳೆದೆರಡು ದಿನಗಳ ಹಿಂದೆ ಶಿಕ್ಷಕಿಯನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿದ್ದಾರೆ.
ಚಿಕ್ಕಮಗಳೂರಲ್ಲೂ ನಡೆದಿತ್ತು ಇಂತಹ ಘಟನೆ
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಸಿಲೇಹಳ್ಳಿ ಗ್ರಾಮ ಯುವತಿಯೊಬ್ಬಳು ಫೇಸ್ಬುಕ್ನಲ್ಲಿ ಪರಿಚಯವಾದ ಅಪ್ರಾಪ್ತನನ್ನು ಮದುವೆಯಾಗಿರುವ ಕೂಡ ಕಳೆದೆರಡು ತಿಂಗಳ ಹಿಂದೆ ನಡೆದಿತು. ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು.