ದೇಶಸುದ್ದಿ

10ನೇ ತರಗತಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗ..!

Indian Army Recruitment 2021: ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರಿಗೆ ಭಾರತೀಯ ಸೇನೆ(Indian Army)ಯಲ್ಲಿ ಬಂಪರ್​ ಉದ್ಯೋಗಾವಕಾಶ ಇದೆ. ಭಾರತೀಯ ರಕ್ಷಣಾ ಇಲಾಖೆ(Defence Ministry of India)ಯು ಹಲವು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಹೊರಡಿಸಿದೆ. ಸೋಲ್ಜರ್ ಜನರಲ್ ಡ್ಯೂಟಿ(Soldier General Duty) ಮತ್ತು ಸೋಲ್ಜರ್ ಟೆಕ್(Soldier Tech)​ (AE) ಸೇರಿದಂತೆ ಹಲವು ಹುದ್ದೆಗಳು ಭಾರತೀಯ ಸೇನೆಯಲ್ಲಿ ಖಾಲಿ ಇವೆ.

ರಕ್ಷಣಾ ಸಚಿವಾಲಯದ ಯುನಿಟ್​ ಹೆಡ್​ಕ್ವಾರ್ಟರ್ಸ್​ ಕೋಟಾ ಅಡಿಯಲ್ಲಿ ಸೇನಾ ನೇಮಕಾತಿ ರ್ಯಾಲಿಯನ್ನು ಸಿಕಂದರಾಬಾದ್(Secunderabad)​ನಲ್ಲಿ ನಡೆಸಲಾಗುವುದು ಎಂದು ಸೋಮವಾರ ತಿಳಿಸಿದೆ. ಪ್ರಕಟಣೆಯ ಪ್ರಕಾರ, ಸೋಲ್ಜರ್ ಜನರಲ್ ಡ್ಯೂಟಿ ಮತ್ತು ಸೋಲ್ಜರ್ ಟೆಕ್ (ಎಇ) ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಸೇನೆ
ಹುದ್ದೆಯ ಹೆಸರುಸೋಲ್ಜರ್ ಜನರಲ್ ಡ್ಯೂಟಿ ಮತ್ತು ಸೋಲ್ಜರ್ ಟೆಕ್
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ ಪಾಸ್​
ವಯೋಮಿತಿ17-23 ವರ್ಷ
ನೇಮಕಾತಿ ರ್ಯಾಲಿ ನಡೆಯುವ ದಿನಾಂಕನವೆಂಬರ್ 29, 2021- ಜನವರಿ -30, 2022

ಹುದ್ದೆಯ ವಿವರ:

  • ಸೋಲ್ಜರ್ ಜನರಲ್ ಡ್ಯೂಟಿ
  • ಸೋಲ್ಜರ್​ ಟೆಕ್(AE)
  • ಸೋಲ್ಜರ್ ಟ್ರೇಡ್ಸ್​ಮೆನ್​
  • ಸೋಲ್ಜರ್ ಸಿಎಲ್​ಕೆ/ಎಸ್​ಕೆಟಿ ಕ್ಯಾಟಗರಿ
  • ಔಟ್​ಸ್ಟ್ಯಾಂಡಿಂಗ್​ ಸ್ಪೋರ್ಟ್ಸ್​ಮೆನ್​

ಬಾಕ್ಸಿಂಗ್, ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್, ಹಾಕಿ, ಈಜು, ಕುಸ್ತಿ, ಅಥ್ಲೆಟಿಕ್ಸ್, ಕಬ್ಬಡಿ ಮತ್ತು ಕ್ರಿಕೆಟ್ – ಈ ಯಾವುದೇ ಕ್ಷೇತ್ರಗಳಲ್ಲಿ ಪ್ರತಿನಿಧಿಸಿರುವ ಅತ್ಯುತ್ತಮ ಕ್ರೀಡಾಪಟುಗಳು ತಮ್ಮ ಪ್ರಮಾಣಪತ್ರದೊಂದಿಗೆ ಭಾಗವಹಿಸಬಹುದು. ಅಭ್ಯರ್ಥಿಯು ಹಿರಿಯ ಅಥವಾ ಕಿರಿಯ ಮಟ್ಟದಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿರಬೇಕು. ಪ್ರಮಾಣಪತ್ರವು ಎರಡು ವರ್ಷಕ್ಕಿಂತ ಹಳೆಯದಾಗಿರಬಾರದು.

Related Articles

Leave a Reply

Your email address will not be published. Required fields are marked *

Back to top button