Hero MotoCorp new Pleasure+ scooter: ಹೀರೋ ಮೋಟೋಕಾರ್ಪ್ ಸೋಮವಾರ ತನ್ನ ಪ್ಲೆಶರ್ ಸ್ಕೂಟರ್ ಶ್ರೇಣಿಯ ಹೊಸ ರೂಪಾಂತರಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನೂತನ ವೇರಿಯಂಟ್ಗಳು ಆಕರ್ಷಕವಾಘಿದ್ದು, ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಮೋಡಿ ಮಾಡುವ ಸಾಧ್ಯತೆಯಿದೆ. ಅಂದಹಾಗೆಯೇ, ಎಲ್‌ಎಕ್ಸ್ ವೆರಿಯಂಟ್‌ಗೆ 61,900 ರೂ (ಎಕ್ಸ್‌ಶೋರೂಂ, ದೆಹಲಿ) ಮತ್ತು ಪ್ಲೆಶರ್+ 110 ಎಕ್ಸ್‌ಟೆಕ್ ಟ್ರಿಮ್‌ಗೆ 69,500 ರೂ (ಎಕ್ಸ್‌ಶೋರೂಂ, ದೆಹಲಿ) ಇರಲಿದೆ. ಆರಂಭಿಕ ಬೆಲೆಗೆ ಪ್ಲೆಶರ್+ 110 ದೇಶಾದ್ಯಂತದ ಕಂಪನಿ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರುತ್ತದೆ.
ಹೀರೋ ಪ್ಲೆಶರ್+110 ಎಕ್ಸ್‌ಟೆಕ್ ಇಂಜಿನ್ ಸ್ಪೆಕ್ಸ್‌ನಲ್ಲಿ ಏನೂ ಬದಲಾವಣೆ ಇಲ್ಲದಿದ್ದರೂ, ಸ್ಟ್ಯಾಂಡರ್ಡ್ ಪ್ಲೆಷರ್‌ಗಿಂತ ಕೆಲವು ಹೊಸ ವರ್ಧಿತ ಸೌಂದರ್ಯದ ವೈಶಿಷ್ಟ್ಯಗಳಿವೆ.
ಹೀರೋ ಮೋಟೋಕಾರ್ಪ್‌ನ ಸ್ಟ್ರಾಟಜಿ ಮತ್ತು ಜಾಗತಿಕ ಉತ್ಪನ್ನ ಯೋಜನಾ ಮುಖ್ಯಸ್ಥ ಮಾಲೋ ಲೆ ಮ್ಯಾಸನ್ ಈ ಬಗ್ಗೆ ಮಾತನಾಡಿದ್ದು, “ಎಕ್ಸ್‌ಟೆಕ್ ಮಾದರಿಯು ಪ್ಲಾಟಿನಂ ಆವೃತ್ತಿಯಿಂದ ಸ್ಫೂರ್ತಿ ಪಡೆದ ಸೊಗಸಾದ ಅಂಶಗಳೊಂದಿಗೆ ಹೆಚ್ಚು ಮೋಡಿ ನೀಡುತ್ತದೆ, ಮುಂಭಾಗದ ಮೆಟಲ್ ಫೆಂಡರ್‌ನೊಂದಿಗೆ ಹೆಚ್ಚು ಬಾಳಿಕೆ, ಬ್ರಾಂಡೆಡ್ ಸೀಟ್ ಬ್ಯಾಕ್‌ರೆಸ್ಟ್ ಮತ್ತು ಹೆಚ್ಚಿನ ಸೌಕರ್ಯ ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೀರೋನ ಪೇಟೆಂಟ್ ಐ 3 ಎಸ್ ತಂತ್ರಜ್ಞಾನದೊಂದಿಗೆ ತಂತ್ರಜ್ಞಾನದ ವರ್ಧಕ ಇಂಧನ ದಕ್ಷತೆಗಾಗಿ ನೀಡಲಾಗಿದೆ ಎಂದರು.