ಕ್ಲಬ್ ಹೌಸ್ (Clubhouse) ಇದು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ (Facebook), ಇನ್‍ಸ್ಟಾಗ್ರಾಮ್ (Instagram), ಟ್ವಿಟ್ಟರ್‌ನಂತೆ (Twitter) ಈಗಾಗಲೇ ಎಲ್ಲರಿಗೂ ಚಿರಪರಿಚಿತವಾಗಿದೆ. ಇದು ಇನ್ವೈಟ್ ಓನ್ಲಿ ಆಡಿಯೋ ಆಧಾರಿತ ಆ್ಯಪ್ ಆಗಿದ್ದು, ಇದರಲ್ಲಿ ಯಾವುದೇ ಪ್ರೈವಸಿ ಇರುವುದಿಲ್ಲ. ಅಂದರೆ ಸಾರ್ವಜನಿಕವಾಗಿ ಮುಕ್ತವಾಗಿ ಇಲ್ಲಿ ಮಾತನಾಡಬಹುದು, ತಮಗೆ ಅನಿಸಿದ್ದನ್ನು ಶೇರ್ ಮಾಡಬಹುದು. ಯಾವುದೇ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು, ಗುಂಪಲ್ಲಿ ಹರಟೆ ಹೊಡೆಯಬಹುದು.
ಈ ಅಪ್ಲಿಕೇಷನ್ ಮೊದಲು ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಈಗ ಆ್ಯಂಡ್ರಾಯ್ಡ್ ಬಳಕೆದಾರರೂ ಬಳಸಬಹುದು. ಒಮ್ಮೆ ಒಬ್ಬ ಬಳಕೆದಾರ ಈ ಅಪ್ಲಿಕೇಷನ್‍ಗೆ ಸೇರಿದರೆ, ಆ ವ್ಯಕ್ತಿ ಕ್ಲಬ್ ಹೌಸಿನ ಯಾವುದೇ ‘ರೂಮ್’ಗಳನ್ನು ಪ್ರವೇಶಿಸಬಹುದು.
ಕ್ಲಬ್ ಹೌಸ್ ಅನ್ನು ಸುಖಾಸುಮ್ಮನೆ ಸೇರುವುದಕ್ಕೆ ಆಗುವುದಿಲ್ಲ ಅಂದರೆ ಇದಕ್ಕೆ ಯಾರದ್ದಾದ್ರೂ ಇನ್ವೈಟ್ ಇದ್ದರೆ ಮಾತ್ರ ಸೇರಬಹುದು. ಒಬ್ಬ ಬಳಕೆದಾರ ಮತ್ತಷ್ಟು ಮಂದಿಗೆ ಕ್ಲಬ್ ಹೌಸ್ ಸೇರುವಂತೆ ಆಮಂತ್ರಣ ನೀಡಬಹುದು. ಆ ಲಿಂಕ್ ಮೂಲಕ ಮತ್ತೊಬ್ಬ ಕ್ಲಬ್ ಹೌಸ್ ಸೇರಬಹುದು. ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಡೌನ್ಲೋಡ್ ಮಾಡಿಕೊಳ್ಳಬಹುದು. ಆಮೇಲೆ, ಆಯಾ ವ್ಯಕ್ತಿಯ ಯೂಸರ್ ನೇಮ್ ದಾಖಲು ಮಾಡಿ, ಕ್ಲಬ್ ಹೌಸ್ ಸೇರಲು ಕಾಯಬಹುದು.