ಆರೋಗ್ಯ

ಹೃದಯಾಘಾತದ ಭಯವೇ.. ತೆಂಗಿನ ಎಣ್ಣೆಯಲ್ಲಿದೆ ನೋಡಿ ನಿಮ್ಮ ನೆಮ್ಮದಿ..

ತೆಂಗಿನ ಎಣ್ಣೆಯು ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಇದು ದೇಹವನ್ನು ತಂಪಾಗಿಸಲು, ಉಲ್ಲಾಸಕರ ಭಾವನೆಯನ್ನು ನೀಡಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ತೆಂಗಿನ ಎಣ್ಣೆ ಚೆನ್ನಾಗಿ ಕೆಲಸ ಮಾಡುತ್ತದೆ. ಇದು ಆರೋಗ್ಯಕರ ಜೀರ್ಣಕ್ರಿಯೆಯೂ ಸಹಾಯಕಾರಿ.

ನಿಮ್ಮ ದೈನಂದಿನ ಆಹಾರದಲ್ಲಿ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ಇದರಿಂದ ದೇಹದ ತೂಕವೂ ಇಳಿಯುತ್ತೆ. ಆದ್ದರಿಂದ, ನಿಮ್ಮ ಅಡುಗೆಗಳಲ್ಲಿ ಇತರ ಎಣ್ಣೆಗಳ ಬದಲಿಗೆ ತೆಂಗಿನ ಎಣ್ಣೆಯನ್ನು ಬಳಸಲು ಪ್ರಾರಂಭಿಸಿ.

ತೆಂಗಿನ ಎಣ್ಣೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ನೈಸರ್ಗಿಕ ಸಕ್ಕರೆ ಮಟ್ಟವನ್ನು ಹೊಂದಿರುವುದರಿಂದ, ಇದು ಇತರ ಸಂಸ್ಕರಿಸಿದ ತೈಲಗಳಿಗೆ ಉತ್ತಮ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ತೆಂಗಿನೆಣ್ಣೆಯು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಸಿಡ್ ಇರುವ ಕಾರಣ, ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ತೆಂಗಿನೆಣ್ಣೆಯಲ್ಲಿರುವ ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಿಂದ ಕ್ಯಾನ್ಸರ್ ವಿರುದ್ಧವೂ ತೆಂಗಿನೆಣ್ಣೆ ಉಪಯುಕ್ತಕಾರಿ.

Related Articles

Leave a Reply

Your email address will not be published. Required fields are marked *

Back to top button